Gruha lakshmi Yojana : ಕರ್ನಾಟಕ ಸರಕಾರ ಗೃಹಿಣಿಯರಿಗಾಗಿ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ಸ್ ನೀಡಿದೆ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೃಹಿಣಿಯರ ಖಾತೆಗೆ ಜೂನ್ ತಿಂಗಳ ಹಣವನ್ನು ಜಮೆ ಮಾಡಿದೆ. ಒಂದೊಮ್ಮೆ ಹಣ ಜಮೆ ಆಗದೇ ಇದ್ರೆ ಎನ್‌ಪಿಸಿಐ ಚೆಕ್ ಮಾಡಲು ಸೂಚಿಸಿದೆ. ಅಷ್ಟಕ್ಕೂ ಏನಿದು ಎನ್‌ಪಿಸಿಐ, ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರ ಖಾತೆಗೂ ಹಣ ಜಮೆ ಆಗಿಲ್ಲ. ಕರ್ನಾಟಕದ ಪ್ರತೀ ಕುಟುಂಬದ ಹಿರಿಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯ ಹಣ ನೀಡಬೇಕು ಅನ್ನೋ ಉದ್ದೇಶದಿಂದಲೇ ರಾಜ್ಯ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ ಲಕ್ಷಾಂತರ ಮಂದಿಯ ಖಾತೆಗೆ ಗೃಹಲಕ್ಷ್ಮೀ ಹಣ ಇಂದಿಗೂ ಸಂದಾಯವಾಗಿಲ್ಲ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ಸರಕಾರದಿಂದ ಹೊಸ ರೂಲ್ಸ್: ಇನ್ಮುಂದೆ ಈ ಮಹಿಳೆಯರಿಗೆ ಸಿಗೋದೆ ಇಲ್ಲ ಹಣ
ಗೃಹಲಕ್ಷ್ಮೀ ಯೋಜನೆ ಆರಂಭಗೊಂಡು 11 ತಿಂಗಳು ಕಳೆದಿದ್ದರೂ ಕೂಡ ಇದುವರೆಗೂ ಒಂದೇ ಒಂದು ರೂಪಾಯಿ ಹಣ ಸಂದಾಯವಾಗದೇ ಇರುವವರು ಒಂದೆಡೆಯಾದ್ರೆ, ಇನ್ನೂ ಕೆಲವರಿಗೆ ಕಳೆದ ತಿಂಗಳ ಹಣ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಆಗಿಲ್ಲ. ಹೀಗಾಗಿ ಇಂತಹ ಫಲಾನುಭವಿಗಳಿಗಾಗಿ ರಾಜ್ಯ ಸರಕಾರ ಹೊಸ ರೂಲ್ಸ್ ಜಾರಿ ಮಾಡಿದೆ.

ಒಂದೊಮ್ಮೆ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯವಾಗದೇ ಇದ್ರೆ, ನೀವು ಒಮ್ಮೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಆಧಾರ್ ಜೋಡಣೆಗೆ ಕೆವೈಸಿ ಮಾಡಿಸಿಕೊಳ್ಳಿ. ಆಧಾರ್ ಕೆವೈಸಿ ಮಾಡಿಸಿದ ಮೇಲೆ ಪದೇ ಪದೇ ಬ್ಯಾಂಕಿಗೆ ಅಲೆಯುವ ಅಗತ್ಯವಿಲ್ಲ. ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂದು ತಿಳಿಯಲು ನೀವು ಬ್ಯಾಂಕ್ ಶಾಖೆಗೆ ಅಲೆಯುವ ಅಗತ್ಯವಿಲ್ಲ.
ಇದನ್ನೂ ಓದಿ : 7ನೇ ವೇತನ ಆಯೋಗ ಜಾರಿ : ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ
DBT Karnataka ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ನಿಮ್ಮ ಆಧಾರ್ ಕಾರ್ಡ್‌ನ 12 ಸಂಖ್ಯೆಯನ್ನು ನಮೂದಿಸಿ, ನಂತರ ಓಟಿಪಿ ಹಾಕಿ. ನೀವು ಸ್ವಯಂ ಆಗಿ ಪಾಸ್‌ವರ್ಡ್ ರಚನೆ ಮಾಡಿಕೊಳ್ಳಿ. ನಂತರ ಸಮ್ಮತಿ ಸೂಚಿಸಿದ ಬಳಿಕ, ಲಾಗಿನ್ ಬಟನ್ ಕ್ಲಿಕ್ ಮಾಡುವ ಮೂಲಕ ಪಾವತಿಯ ಸ್ಥಿತಿಯನ್ನು ತಿಳಿಯಬಹುದಾಗಿದೆ.
ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ ಆಗಿದ್ಯಾ ? ಮನೆಯಲ್ಲಿಯೇ ಕುಳಿತು ಹೀಗೆ ಚೆಕ್

ಗೃಹಲಕ್ಷ್ಮೀ ಯೋಜನೆಯ ಹಣ ಯಾವ ದಿನದಂದು ನಿಮ್ಮ ಖಾತೆಗೆ ಜಮೆ ಆಗಿದೆ, ಇದುವರೆಗೆ ನಿಮಗೆ ಎಷ್ಟು ಹಣ ಪಾವತಿ ಆಗಿದೆ. ನಿಮ್ಮ ಹೆಸರು ಸೇರಿದಂತೆ ಬ್ಯಾಂಕಿನ ಸಂಪೂರ್ಣ ಮಾಹಿತಿಯು ಲಭ್ಯವಾಗಲಿದೆ. ಗೃಹಲಕ್ಷ್ಮೀ ಯೋಜನೆ ಹಣ ಬಂದಿಲ್ಲ ಅಂತಾ ಚಿಂತೆ ಮಾಡೋದು ಬಿಟ್ಟು ಡಿಬಿಟಿ ಆಪ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ.
ಇದನ್ನೂ ಓದಿ : Google Wallet : ಭಾರತದಲ್ಲಿ ಆರಂಭವಾಯ್ತು ಗೂಗಲ್ ವ್ಯಾಲೆಟ್ Google Payಗಿಂತ ಹೇಗೆ ಭಿನ್ನ ? ಏನಿದರ ಉಪಯೋಗ ?
if Your Account Not Deposit Gruha lakshmi Yojana money ? Update Don’t worry check NPCI