ಗೃಹಲಕ್ಷ್ಮೀ ಯೋಜನೆಯ ( Gruha Lakshmi Scheme) ಮೂಲಕ ಕರ್ನಾಟಕದ ಗೃಹಿಣಿಯರನ್ನು ಸ್ವಾಲಂಭಿಗಳನ್ನಾಗಿ ಮಾಡಲು ರಾಜ್ಯದ ಕಾಂಗ್ರೆಸ್ ಸರಕಾರ (Karnataka Government) ಮುಂದಾಗಿದೆ. 10 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಇನ್ನೂ ಗೃಹಲಕ್ಷ್ಮೀ ಯೋಜನೆ ಹಣ ಸಿಕ್ಕಿಲ್ಲ. ಆದರೆ ಹಣ ಜಮೆ ಆಗಿಲ್ಲಾ ಅನ್ನೋ ಬೇಸರ ಬದಿಗಿಟ್ಟಿ ಈ ಕೆಲಸವನ್ನು ಇಂದೇ ಮಾಡಿದ್ರೆ ನಿಮ್ಮ ಖಾತೆಗೆ ಹಣ ಜಮೆ (DBT) ಆಗೋದು ಗ್ಯಾರಂಟಿ.
ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ರಾಜ್ಯ ಸರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿತ್ತು. ಪ್ರಮುಖವಾಗಿ ಈ ಯೋಜನೆಯ ಮೂಲಕ ಪ್ರತೀ ತಿಂಗಳು ರಾಜ್ಯದ ಪ್ರತೀ ಕುಟುಂಬದ ಯಜಮಾನಿಯ ಖಾತೆಗೆ 2000 ರೂಪಾಯಿ ಜಮೆ ಮಾಡಲಾಗುತ್ತಿದೆ. ಈಗಾಗಲೇ 2 ಕಂತಿನ ಹಣವನ್ನು ಸರಕಾರ ಜಮೆ ಮಾಡಿದೆ.

ಆದರೆ ಎರಡು ತಿಂಗಳು ಕಳೆದಿದ್ದರೂ ಕೂಡ ಸುಮಾರು 10 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಹಣ ಇನ್ನೂ ಸಿಕ್ಕಿಲ್ಲ. ಈ ಕುರಿತು ಖುದ್ದು ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖುದ್ದು ಮಾಹಿತಿಯನ್ನು ನೀಡಿದ್ದು, ಈ ಕುರಿತು ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಅಲ್ಲದೇ ಯಾವ ಕಾರಣಕ್ಕೆ ಹಣ ಜಮೆ ಆಗಿಲ್ಲ ಅನ್ನೋದನ್ನೂ ವಿವರಿಸಿದ್ದಾರೆ.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆ : ಮುಂದಿನ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಸಲ್ಲಿಕೆ ಕಡ್ಡಾಯ
ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಒಂದು ಕಂತಿನ ಹಣವೂ ಇನ್ನೂ ಗೃಹಿಣಿಯರ ಬ್ಯಾಂಕ್ ಖಾತೆಗೆ ಜಮೆ ಆಗದೇ ಇರುವವರಿಗೆ ರಾಜ್ಯ ಸರಕಾರ ಗುಡ್‌ನ್ಯೂಸ್ ಕೊಟ್ಟಿದೆ. ಅಂತಹ ಮಹಿಳೆಯರು ತಾವು ಇಂದೇ ಒಂದೇ ಒಂದು ಕೆಲಸ ಮಾಡಿದ್ರೆ ಬ್ಯಾಂಕ್ ಖಾತೆ ಹಣ ಜಮೆ ಆಗಲಿದೆ.
ಅಷ್ಟಕ್ಕೂ ಯಾವುದೀ ಕೆಲಸ ಅನ್ನೋದಾದ್ರೆ, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಇದುವರೆಗೂ ಹಣ ಜಮೆ ಆಗದೇ ಇರುವ ಮಹಿಳೆಯರು ಸರಕಾರ ಕೇಳಿರುವ ನಾಲ್ಕು ದಾಖಲೆಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಕೆ ಮಾಡಬೇಕು. ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಡಿತರ ಚೀಟಿ ಮತ್ತು ಅರ್ಜಿ ಸ್ವೀಕೃತಿ ಪತ್ರದ ಪ್ರತಿ ಒದಗಿಸುವುದು ಕಡ್ಡಾಯ.
ಇದನ್ನೂ ಓದಿ : ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್ : ಅನ್ನಭಾಗ್ಯ ಬೆನ್ನಲ್ಲೇ ಸರಕಾರದಿಂದ ಮತ್ತೊಂದು ಯೋಜನೆ
ಈಗಾಗಲೇ ಅರ್ಜಿ ಸಲ್ಲಿಸುವ ವೇಳೆಯಲ್ಲಿ ನೀವು ಯಾವೆಲ್ಲಾ ದಾಖಲೆಗಳನ್ನು ನೀಡಿದ್ದೀರಿ ಅನ್ನೋದನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ. ಜೊತೆಗೆ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿದೆಯಾ ? ಜೊತೆಗೆ ಪಡಿತರ ಕಾರ್ಡ್ ಆಧಾರ್ ಜೊತೆಗೆ ಲಿಂಕ್ ಆಗಿದ್ಯಾ ಅನ್ನೋದನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ.

ಇನ್ನು ಕೆವೈಸಿ ಮಾಡಿಸದ ಕಾರ್ಡುದಾರರಿಗೆ ಗೃಹಲಕ್ಷ್ಮೀ ಹಣ ಸಂದಾಯವಾಗುವುದಿಲ್ಲ. ಜೊತೆಗೆ ಪಡಿತರ ಕಾರ್ಡ್‌ನಲ್ಲಿ ಮನೆಯ ಯಜಮಾನರ ಸ್ಥಾನದಲ್ಲಿ ಪುರುಷ ಸದಸ್ಯ ಇದ್ರೆ ಅಂತಹ ಸಂದರ್ಭದಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಸಿಗದೇ ಇರುವ ಸಾಧ್ಯತೆಯಿದೆ. ಹೀಗಾಗಿ ಒಮ್ಮೆ ನೀವು ನೀಡಿರುವ ದಾಖಲೆಯನ್ನು ಪರಿಶೀಲನೆ ಮಾಡಿಕೊಂಡು.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ ಖಾತೆಗೆ ಜಮೆ ಆಗಿಲ್ವಾ ? ಚಿಂತ ಬಿಡಿ, ಸರಕಾರದಿಂದಲೇ ಸಿಕ್ಕಿದೆ ಗುಡ್‌ನ್ಯೂಸ್
ಸಲ್ಲಿಸಿದ ಅರ್ಜಿಯ ಸ್ವೀಕೃತಿ ಪತ್ರದ ಜೊತೆಗೆ ಉಳಿದ ದಾಖಲೆಗಳ ಜೊತೆಗೆ ಒಮ್ಮೆ ನಿಮ್ಮ ಹತ್ತಿರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಧಿಕಾರಿಗಳನ್ನು ಭೇಟಿ ಮಾಡಿ. ಅವರು ನಿಮ್ಮ ಅರ್ಜಿಯಲ್ಲಿನ ಲೋಪದೋಷಗಳನ್ನು ಪತ್ತೆ ಹಚ್ಚುತ್ತಾರೆ. ಒಂದೊಮ್ಮೆ ನಿಮ್ಮ ಅರ್ಜಿ, ದಾಖಲೆಗಳು ಗೃಹಲಕ್ಷ್ಮೀ ಯೋಜನೆಗೆ ಅರ್ಹವಾಗಿದ್ರೆ, ನಿಮ್ಮ ಖಾತೆಗೆ ಹಣ ಜಮೆ ಆಗೋದು ಖಚಿತ.
Have you got the money for Gruha Lakshmi Scheme yet ? If this work is done today, the money will be deposited in the bank account