Sukanya Samriddhi Yojana : ಸುಕನ್ಯಾ ಸಮೃದ್ದಿ ಯೋಜನೆ ಕೇಂದ್ರ ಸರಕಾರ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಪ್ರಮುಖವಾಗಿ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿಯೇ ಈ ಯೋಜನೆಯನ್ನು ರೂಪಿಸಿಲಾಗಿದೆ. ಆದರೆ ಸುಕನ್ಯಾ ಸಮೃದ್ದಿ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಕೇಂದ್ರ ಸರಕಾರ ರೂಪಿಸಿದ್ದು, ಈ ಯೋಜನೆಯ ಅಡಿಯಲ್ಲಿ ಅವಧಿಗೂ ಮುನ್ನವೇ ಹಣವನ್ನು ವಾಪಾಸ್ ಪಡೆಯಬಹುದಾಗಿದೆ.
ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಮಂದಿ ಪೋಷಕರು ಈಗಾಗಲೇ ತಮ್ಮ ಹೆಣ್ಣು ಮಕ್ಕಳ ಹೆಸರಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ಹಣವನ್ನು ಒಮ್ಮೆ ಹೂಡಿಕೆ ಮಾಡಿದ್ರೆ ಅವಧಿಗೂ ಮೊದಲೇ ಹಣವನ್ನು ವಾಪಾಸ್ ಪಡೆಯ ಬಹುದೇ ? ಅನ್ನು ಪ್ರಶ್ನೆ ಹಲವರನ್ನು ಕಾಡುತ್ತಿದೆ. ನೀವು ಮೂರು ಸಂದರ್ಭಗಳಲ್ಲಿ ಮಾತ್ರವೇ ಈ ಯೋಜನೆಯ ಅಡಿಯಲ್ಲಿ ಹಣವನ್ನು ವಾಪಾಸ್ ಪಡೆಯಲು ಅವಕಾಶವಿದೆ.
ಯಾವ ಸಂದರ್ಭಗಳಲ್ಲಿ ಸುಕನ್ಯಾ ಸಮೃದ್ದಿ ಯೋಜನೆಯ ಹಣವನ್ನು ವಾಪಾಸ್ ಪಡೆಯಬಹುದು ?

ಮದುವೆ :
ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದ್ರೆ. ಆ ಹಣವನ್ನು ಮಗಳ ಮದುವೆಯ ಸಂದರ್ಭದಲ್ಲಿ ಅವಧಿಗೂ ಮೊದಲೇ ಹಣವನ್ನು ಪಡೆಯಲು ಅವಕಾಶವಿದೆ. ಮದುವೆಗೆ ಒಂದು ಅಥವಾ ಮೂರು ತಿಂಗಳ ಮೊದಲೇ ಹಣವನ್ನು ವಾಪಾಸ್ ಪಡೆಯಲು ಅವಕಾಶ ವಿದೆ. ಆದರೆ ಮದುವೆಯ ಸಂದರ್ಭದಲ್ಲಿಯೂ ಈ ಯೋಜನೆಯಿಂದ ಸಂಪೂರ್ಣ ಹಣವನ್ನು ವಾಪಾಸ್ ಪಡೆಯಲು ಅವಕಾಶವಿಲ್ಲ. ಕೇವಲ ಶೇ.50 ರಷ್ಟು ಹಣವನ್ನು ಮಾತ್ರವೇ ಹಿಂಪಡೆಯಬಹುದಾಗಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ : ಈ ಕೆಲಸ ಮಾಡದಿದ್ರೆ ಸಿಗಲ್ಲ 5ನೇ ಕಂತಿನ ಹಣ

ಶಿಕ್ಷಣ
ಸುಕನ್ಯಾ ಸಮೃದ್ದಿ ಯೋಜನೆಯನ್ನು ಮುಖ್ಯವಾಗಿ ಮಕ್ಕಳ ಶಿಕ್ಷಣದ ಉದ್ದೇಶಕ್ಕಾಗಿಯೇ ರೂಪಿಸಲಾಗಿದೆ. 10 ನೇ ತರಗತಿ ಶಿಕ್ಷಣವನ್ನು ಪಡೆದ ನಂತರದಲ್ಲಿ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಲು ಬಯಸಿದ್ರೆ ನಿಮ್ಮ ಮಗಳ ವಯಸ್ಸು 18 ಆಗಿದ್ದರೆ, ಅಂತಹ ಸಂದರ್ಭದಲ್ಲಿ ಈ ಯೋಜನೆಯಿಂದ ಹಣವನ್ನು ವಾಪಾಸ್ ಪಡೆಯ ಬಹುದಾಗಿದೆ. ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿಯೂ ಕೂಡ ಶೇ.50 ರಷ್ಟು ಹಣ ವಾಪಾಸ್ ಪಡೆಯಲು ಅವಕಾಶವಿದೆ. ಹಣವನ್ನು ಹಿಂದಕ್ಕೆ ಪಡೆಯುವ ಸಂದರ್ಭದಲ್ಲಿ ನೀವು ಉನ್ನತ ವ್ಯಾಸಂಗಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಬೇಕಾಗುತ್ತದೆ.
ಇದನ್ನೂ ಓದಿ : ಯುವನಿಧಿಗೆ ಸಲ್ಲಿಕೆಯಾದ ಅರ್ಜಿಗಳೆಷ್ಟು ? ಜಿಲ್ಲಾವಾರು ಅಂಕಿ-ಅಂಶ ಇಲ್ಲಿದೆ

ಅಕಾಲಿಕ ಮೃತ್ಯು
ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿದ್ರೆ, ಅಂತಹ ಹೆಣ್ಣು ಮಗಳು ಅಕಾಲಿಕವಾಗಿ ಸಾವನ್ನಪ್ಪಿದ್ರೆ ಅಂತಹ ಸಂದರ್ಭದಲ್ಲಿಯೂ ಸುಕನ್ಯಾ ಸಮೃದ್ದಿ ಯೋಜನೆಯ ಮೂಲಕ ಹಣವನ್ನು ಪೋಷಕರು ಕಟ್ಟಿದ ಹಣಕ್ಕೆ ಬಡ್ಡಿಯನ್ನು ಸೇರಿಸಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಬಾಲಕಿಯ ಮರಣ ಪ್ರಮಾಣ ನೀಡುವುದು ಕಡ್ಡಾಯವಾಗಿದೆ.
ಸುಕನ್ಯಾ ಸಮೃದ್ದಿ ಯೋಜನೆ ಎಂದರೇನು ?
ಸುಕನ್ಯಾ ಸಮೃದ್ದಿ ಯೋಜನೆಯನ್ನು ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿಯೇ ರೂಪಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಸೇರ್ಪಡೆಯಾಗಲು ನಿಮ್ಮ ಮಗುವಿನ ಗರಿಷ್ಠ ವಯಸ್ಸು 10 ವರ್ಷ ಆಗಿರಬೇಕು. ಸುಕನ್ಯಾ ಸಮೃದ್ದಿ ಯೋಜನೆಗೆ ಸೇರ್ಪಡೆಯಾದ ನಂತರದಲ್ಲಿ 21 ವರ್ಷ ತುಂಬಿದ ನಂತರ ಮೆಚ್ಯುರಿಟಿ ಆಗಲಿದೆ. ಅಲ್ಲದೇ 18 ವರ್ಷ ತುಂಬಿದ ಬಳಿಕ ಯೋಜನೆಯ ಮೊತ್ತದಲ್ಲಿ ಶೇ. 50 ಹಣವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ : ರೈತರಿಗೆ ಸಿಗಲಿದೆ ದುಪ್ಪಟ್ಟು ಹಣ
ಕೇಂದ್ರ ಸರಕಾರ ಈ ಯೋಜನೆಯ ಅಡಿಯಲ್ಲಿ ಬಡ್ಡಿದರವನ್ನು ಏರಿಕೆ ಮಾಡಿದೆ. ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ಬಡ್ಡಿದರವನ್ನು ಶೇ. 8 ರಿಂದ 8.2ಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೇ ಈ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳ ಹೆಸರಲ್ಲಿ ಕನಿಷ್ಠ 250 ರೂ. ನಿಂದ ಗರಿಷ್ಠ 1.50 ಲಕ್ಷ ರೂವರೆಗೆ ಹೂಡಿಕೆ ಮಾಡಲು ಅವಕಾಶವಿದೆ.
How to get Sukanya Samriddhi Yojana (SSY) money back before maturity ? Here are the new rules