ಯುವನಿಧಿಗೆ ಸಲ್ಲಿಕೆಯಾದ ಅರ್ಜಿಗಳೆಷ್ಟು ? ಜಿಲ್ಲಾವಾರು ಅಂಕಿ-ಅಂಶ ಇಲ್ಲಿದೆ

Yuva Nidhi Scheme Karnataka : ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿದ ಐದು ಗ್ಯಾರಂಟಿಗಳ ಪೈಕಿ ಕೊನೆಯ ಭರವಸೆ ಯುವನಿಧಿಯನ್ನು ಜಾರಿಗೆ ತರಲು ಕಾಂಗ್ರೆಸ್ ಮುಂದಾಗಿದೆ

Yuva Nidhi Scheme Karnataka : ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿದ ಐದು ಗ್ಯಾರಂಟಿಗಳ ಪೈಕಿ ಕೊನೆಯ ಭರವಸೆ ಯುವನಿಧಿಯನ್ನು ಜಾರಿಗೆ ತರಲು ಕಾಂಗ್ರೆಸ್ ಮುಂದಾಗಿದೆ. ಶಿವಮೊಗ್ಗದಲ್ಲಿ ಸಿಎಂ ಸೇರಿದಂತೆ ಸಚಿವ ಸಂಪುಟದ ಹಿರಿಯ ಸಚಿವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಹೊತ್ತಿನಲ್ಲೇ ಯುವನಿಧಿ ಯೋಜನೆಗೆ ರಾಜ್ಯದಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವ ಸಂಗತಿಯೂ ಚರ್ಚೆಗೆ ಗ್ರಾಸವಾಗಿದೆ.

ಇಷ್ಟಕ್ಕೂ ರಾಜ್ಯದ ಪದವೀಧರರಿಗೆ 3 ಸಾವಿರ ರೂಪಾಯಿ ಹಾಗೂ ಡಿಪ್ಲೋಮಾದವರಿಗೆ 1500 ವಿತರಿಸುವ ಈ ಯೋಜನೆ ಅಭ್ಯರ್ಥಿಗಳು ಹಿಂದೇಟು ಹಾಕಿದ್ದರೂ ಜಿಲ್ಲೆಗಳಲ್ಲಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದೆ. ಹಾಗಿದ್ದರೇ ಯಾವ ಯಾವ ಜಿಲ್ಲೆಯಿಂದ ಎಷ್ಟು ಅರ್ಜಿ ಸಲ್ಲಿಕೆಯಾಗಿದೆ ಅನ್ನೋ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿ 15 ದಿನಗಳು ಕಳೆದಿವೆ. ಇದುವರೆಗೂ ಅಂದಾಜು 45 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿ ಸಲ್ಲಿಕೆಯಲ್ಲಿ ಬೆಳಗಾವಿ ಮೊದಲ ಸ್ಥಾನದಲ್ಲಿದ್ದರೇ. ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ. ಹಲವು ಜಿಲ್ಲೆಗಳಲ್ಲಿ ಇನ್ನು ಕನಿಷ್ಠ ಮಟ್ಟದಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

Yuva Nidhi Scheme Karnataka How many applications have been submitted to the youth fund Here is the district wise statistics
Image Credit to Original Source

ಅಭ್ಯರ್ಥಿಗಳಿಗೆ ಅಂಕಪಟ್ಟಿ ಸೇರಿದಂತೆ ದಾಖಲೆಗಳ ಸಮಸ್ಯೆ ಎದುರಾಗಿರೋದರಿಂದ ಅರ್ಜಿ ಸಲ್ಲಿಕೆಯಲ್ಲಿ ಇಳಿಮುಖವಾಗಿದೆ. ಹಾಗಿದ್ದರೇ ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಅರ್ಜಿ ಸಲ್ಲಿಕೆಯಾಗಿದೆ ಅನ್ನೋದನ್ನು ನೋಡೋದಾದರೇ ಇದುವರೆಗೂ ರಾಜ್ಯದಲ್ಲಿ ಯುವನಿಧಿಗೆ ಕೇವಲ 45 ಸಾವಿರದಷ್ಟು ಅರ್ಜಿ ಸಲ್ಲಿಕೆಯಾಗಿದೆ ಆದರೇ ಒಟ್ಟೂ 5.9 ಲಕ್ಷದಷ್ಟು ಅರ್ಹ ಅಭ್ಯರ್ಥಿಗಳಿದ್ದಾರೆ.

ಇದನ್ನೂ ಓದಿ : ಯುವನಿಧಿಗೆ ಸರ್ಕಾರಿ ನಿಯಮಗಳೇ ಅಡ್ಡಿ: ಇದುವರೆಗೂ ಸಲ್ಲಿಕೆಯಾದ ಅರ್ಜಿ ಎಷ್ಟು ಗೊತ್ತಾ ?

ಯುವನಿಧಿಗೆ ಕಲ್ಬುರ್ಗಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಒಟ್ಟೂ 9 ಸಾವಿರ ಅಭ್ಯರ್ಥಿಗಳಿದ್ದು ಈ ಪೈಕಿ 2650 ಅಭ್ಯರ್ಥಿಗಳು ಮಾತ್ರ ಯುವನಿಧಿಗೆ ಅರ್ಜಿ ಹಾಕಿದ್ದಾರೆ. ಕೇವಲ ಶೇಕಡಾ 28 ರಷ್ಟು ಮಾತ್ರ ಅರ್ಜಿ ಸಲ್ಲಿಕೆಯಾಗಿರೋದರಿಂದ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಂಗಾಲಾಗಿದ್ದು, ವಿದ್ಯಾರ್ಥಿಗಳ ಮನವೊಲಿಸಿ ಅರ್ಜಿ ಸಲ್ಲಿಸಲು ಒತ್ತಾಯಿಸುತ್ತಿದ್ದಾರಂತೆ.

ಇನ್ನೊಂದೆಡೆ ಮಂಗಳೂರಿನಲ್ಲೂ ವಿದ್ಯಾರ್ಥಿಗಳು ಸರ್ಕಾರಿ ಸಹಾಯಧನದತ್ತ ಆಸಕ್ತಿ ತೋರಿಲ್ಲ. ಜಿಲ್ಲೆಯಲ್ಲಿ ಕಳೆದ ವರ್ಷ ಡಿಗ್ರಿ ಹಾಗೂ ಡಿಪ್ಲೋಮಾ ಪದವೀಧರರ ಸಂಖ್ಯೆ 20336 ರಷ್ಟಿದ್ದು, ಈ ಪೈಕಿ ಅತ್ಯಂತ ಕಡಿಮೆ ಎಂದರೇ 1803 ಅರ್ಜಿ ಸಲ್ಲಿಕೆಯಾಗಿದೆ. 20 ಸಾವಿರ ವಿದ್ಯಾರ್ಥಿಗಳಲ್ಲಿ 5570 ಜನರು ಉನ್ನತ ಶಿಕ್ಷಣಕ್ಕೆ ಸೇರಿದ್ದು, 7613 ಜನರು ಈಗಾಗಲೇ ಕೆಲಸ ಗಿಟ್ಟಿಸಿಕೊಂಡಿದ್ದಾರೆ.

Yuva Nidhi Scheme Karnataka How many applications have been submitted to the youth fund Here is the district wise statistics
Image Credit to Original Source

ಅಲ್ಲಿಗೇ ಶೇಕಡಾ 35 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆ ತಲುಪಿದ್ದು, ನೂರಕ್ಕೆ ನೂರು ತಲುಪಿಸಲು ಸಿದ್ಧತೆ ನಡೆದಿದೆ. ಧಾರವಾಡದಲ್ಲಿ ಯುವನಿಧಿಗೆ 8537 ವಿದ್ಯಾರ್ಥಿಗಳು ಅರ್ಹರಿದ್ದು, ಕೇವಲ 1971 ಅರ್ಜಿಗಳು ಸಲ್ಲಿಕೆಯಾಗಿದೆ. ಜಿಲ್ಲೆಯಲ್ಲಿ 7246 ಪದವಿ ಹಾಗೂ 1291 ಡಿಪ್ಲೋಮಾ ಪದವೀಧರರಿದ್ದಾರೆ.

ಇದನ್ನೂ ಓದಿ : ಯುವನಿಧಿ ಯೋಜನೆ : ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಿಗಲ್ಲ ಯುವನಿಧಿ ಹಣ, ಇಲ್ಲಿದೆ ಯುವನಿಧಿ ಅರ್ಹತಾ ಪಟ್ಟಿ

ಇನ್ನು ಶಿವಮೊಗ್ಗದಲ್ಲಿ ಆರಂಭವಾಗಲಿರೋ ಯುವನಿಧಿ ಚಾಲನೆ ಸಂಭ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳು ಭಾಗಿಯಾಗಲಿದ್ದಾರೆ. ಯುವನಿಧಿ ಯೋಜನೆಗೆ ಸರ್ಕಾರ ಅಭ್ಯರ್ಥಿಯು ಕರ್ನಾಟಕದ ನಿವಾಸಿಯಾಗಿರಬೇಕು. ಉದ್ಯೋಗ ಸಿಕ್ಕುತ್ತಿದ್ದಂತೆ ಈ ಸೌಲಭ್ಯ ದಿಂದ ದೂರ ಉಳಿಯಬೇಕು. ಅರ್ಜಿ ಸಲ್ಲಿಸಿದ ದಿನದಿಂದ ಅನ್ವಯವಾಗುವಂತೆ ಕೇವಲ ಎರಡು ವರ್ಷ ಮಾತ್ರ ಈ ಯೋಜನೆ ಅನ್ವಯವಾಗಲಿದೆ ಅನ್ನೋ ನಿಯಮ ರೂಪಿಸಿದೆ.

ಇದನ್ನೂ ಓದಿ: ಶಕ್ತಿ ಯೋಜನೆ ವಿಸ್ತರಣೆ, ಖಾಸಗಿ ಬಸ್‌ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣ

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಎಸ್ಎಸ್ಎಲ್ ಸಿ ಅಂಕ ಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಹಾಗೂ ರೇಷನ್ ಕಾರ್ಡ್ ಅಗತ್ಯವಿದ್ದು, ಕರ್ನಾಟಕ ಒನ್, ಗ್ರಾಮ್ ಒನ್ ,ಬಾಪೂಜಿ ಸೇವಾ ಕೇಂದ್ರದಲ್ಲಿ, ಸೇವಾಸಿಂಧು ಪೋರ್ಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Yuva Nidhi Scheme Karnataka How many applications have been submitted to the youth fund ? Here is the district wise statistics

Comments are closed.