ಎಸ್‌ಬಿಐ ಮತ್ತು ಎಹ್‌ಡಿಎಫ್‌ಸಿ ಬ್ಯಾಂಕ್ ಗಳು ಶುಕ್ರವಾರ 2 ಕೋಟಿಗಂತ ಕಡಿಮೆ ಇರುವ ಸ್ಥಿರ ಠೇವಣಿಗಳ (FD) ಬಡ್ಡಿ ದರವನ್ನು ಹೆಚ್ಚಿಸಿದೆ. ಈಗ ಅದರ ಸಾಲಿಗೆ ICICI ಬ್ಯಾಂಕ್ ಕೂಡಾ ಸೇರಿದೆ (ICICI Bank Interest Rate). ICICI ಬ್ಯಾಂಕ್ ಬಡ್ಡಿದರವನ್ನು 0.5% (50 bps) ಹೆಚ್ಚಿಸಿದೆ. 46 ದಿನಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲಿನ ದರವನ್ನು 25 ಬೇಸಿಸ್ ಪಾಯಿಂಟ್ (0.25%) ಹೆಚ್ಚಿಸಿದೆ ಎಂದು ಬ್ಯಾಂಕ್ ಹೇಳಿದೆ. ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿ ಮೇಲಿನ ಬಡ್ಡಿ ದರವನ್ನು 50 ಬೇಸಿಸ್ ಪಾಯಿಂಟ್ (0.5%) ಅನ್ನು ಬ್ಯಾಂಕ್ ಹೆಚ್ಚಿಸಿದೆ.
ಬ್ಯಾಂಕ್ ಹೇಳಿರುವ ಪ್ರಕಾರ, ಹಿರಿಯ ನಾಗರಿಕರಲ್ಲದವರೂ ಕೂಡಾ ಈಗ 7.00% ಬಡ್ಡಿ ದರವನ್ನು ಸ್ಥಿರ ಠೇವಣಿಗಳ ಮೇಲೆ ಪಡೆದುಕೊಳ್ಳಬಹುದಾಗಿದೆ. ಮತ್ತು ಹಿರಿಯ ನಾಗರಿಕರು ಸ್ಥಿರ ಠೇವಣಿಗಳ ಮೇಲೆ 7.50% ಬಡ್ಡಿ ದರ ಪಡೆಯಬಹುದಾಗಿದೆ. ಇತ್ತೀಚಿನ ಆರ್‌ಬಿಐನ ರೆಪೋ ದರದಿಂದಾಗಿ ಬ್ಯಾಂಕ್‌ಗಳು ಸ್ಥಿರ ಠೇವಣಿಗಳ ಬಡ್ಡಿದರವನ್ನು ಹೆಚ್ಚಿಸಿವೆ.
ಪರಿಷ್ಕೃತ ಬಡ್ಡಿ ದರಗಳ ಪಟ್ಟಿ :
ದಿನಗಳು | ಸಾಮಾನ್ಯ ಜನರಿಗೆ (%) | ಹಿರಿಯ ನಾಗರಿಕರಿಗೆ (%) |
7 ದಿನಗಳಿಂದ 14 ದಿನಗಳವರೆಗೆ | 3.00 | 3.50 |
15 ದಿನಗಳಿಂದ 29 ದಿನಗಳು | 3.00 | 3.50 |
30 ದಿನಗಳಿಂದ 45 ದಿನಗಳು | 3.50 | 4.0 |
46 ದಿನಗಳಿಂದ 60 ದಿನಗಳು | 4.0 | 4.5 |
61 ದಿನಗಳಿಂದ 90 ದಿನಗಳು | 4.50 | 5.0 |
91 ದಿನಗಳಿಂದ 120 ದಿನಗಳು | 4.75 | 5.25 |
121 ದಿನಗಳಿಂದ 150 ದಿನಗಳು | 4.75 | 5.25 |
151 ದಿನಗಳಿಂದ 184 ದಿನಗಳು | 4.75 | 5.25 |
185 ದಿನಗಳಿಂದ 210 ದಿನಗಳು | 5.50 | 6.0 |
211 ದಿನಗಳಿಂದ 270 ದಿನಗಳು | 5.50 | 6.0 |
271 ದಿನಗಳಿಂದ 289 ದಿನಗಳು | 5.50 | 6.0 |
290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ | 5.75 | 6.25 |
1 ವರ್ಷದಿಂದ 389 ದಿನಗಳು | 6.60 | 7.10 |
390 ದಿನಗಳಿಂದ 15 ತಿಂಗಳುಗಳಿಗಿಂತ ಕಡಿಮೆ | 6.6 | 7.10 |
15 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ | 7.0 | 7.50 |
18 ತಿಂಗಳಿಂದ 2 ವರ್ಷಗಳವರೆಗೆ | 7.0 | 7.50 |
2 ವರ್ಷಗಳು 1 ದಿನದಿಂದ 3 ವರ್ಷಗಳವರೆಗೆ: | 7.0 | 7.50 |
3 ವರ್ಷಗಳು 1 ದಿನದಿಂದ 5 ವರ್ಷಗಳವರೆಗೆ | 7.0 | 7.50 |
5 ವರ್ಷಗಳು 1 ದಿನದಿಂದ 10 ವರ್ಷಗಳವರೆಗೆ | 6.90 | 7.50 |
ಇದನ್ನೂ ಓದಿ : Realme 10 Pro Plus 5G ಇಂದಿನಿಂದ ಭಾರತದಲ್ಲಿ ಮಾರಾಟ ಪ್ರಾರಂಭ; ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳು
ಇದನ್ನೂ ಓದಿ : Karnataka Revenue Department Recruitment:ಕಂದಾಯ ಇಲಾಖೆಯಲ್ಲಿ ಉದ್ಯೋಗಾವಕಾಶ, ವೇತನ 80,000ರೂ
ICICI Bank Interest Rate, bank hikes interest rate on fixed deposits by up to 50 bps