Mumbai Fire disaster: ಪಿಜ್ಜಾ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ : 1 ಸಾವು, ಇಬ್ಬರಿಗೆ ಗಾಯ

ಮುಂಬೈ: (Mumbai Fire disaster) ಮುಂಬೈನ ಪರೇಖ್‌ ಆಸ್ಪತ್ರೆ ಬಳಿಯಲ್ಲಿದ್ದ ಜುನೋಸ್‌ ಪಿಜ್ಜಾ ರೆಸ್ಟೊರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ, ಹಾಗೂ ಇಬ್ಬರಿಗೆ ಸುಟ್ಟ ಗಾಯಗಳಾಗಿವೆ. ಮೃತ ವ್ಯಕ್ತಿಯನ್ನು ಖುರ್ಷಿ ದೇಧಿಯಾ ಎಂದು ಗುರುತಿಸಲಾಗಿದೆ.

ಮುಂಬೈನ ಘಾಟ್ಕೋಪರ್‌ ಪ್ರದೇಶದ ಪರೇಖ್‌ ಆಸ್ಪತ್ರೆ ಬಳಿಯಲ್ಲಿರುವ ರೆಸ್ಟೊರೆಂಟ್‌ ನಲ್ಲಿ ಏಕಾಏಕಿ ಬೆಂಕಿ (Mumbai Fire disaster) ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದೆ. ಕೂಡಲೆ ಬೆಂಕಿಯನ್ನು ನಿಯಂತ್ರಿಸಲು ಎಂಟು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಮುಂಬೈ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಿಳಿಸಿದ್ದಾರೆ.

ಬೃಹತ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನ ಅಧಿಕಾರಿಗಳ ಪ್ರಕಾರ, ಬೆಂಕಿಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರಲ್ಲಿ ಖುರ್ಷಿ ದೇಧಿಯಾ ಎನ್ನುವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಇದರ ಮಧ್ಯೆ ಬೆಂಕಿ ಅವಘಡದಿಂದಾಗಿ ಹೊಗೆಯ ಪ್ರಮಾಣ ಹೆಚ್ಚಾಗಿದ್ದು ಹಲವರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಉಸಿರಾಟದ ತೊಂದರೆಗೆ ಒಳಗಾದ 22 ರೋಗಿಗಳನ್ನು ಪರೇಖ್‌ ಆಸ್ಪತ್ರೆಯಿಂದ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಆದರೆ ಬೆಂಕಿ ಅವಘಡ ಸಂಭವಿಸಲು ನಿಖರ ಕಾರಣಗಳು ತಿಳಿದುಬಂದಿಲ್ಲ. ಪೊಲೀಸ್‌ ಅಧಿಕಾರಿಗಳು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದು, ನಂತರದಲ್ಲಿ ಬೆಂಕಿ ಅವಘಡಕ್ಕೆ ಕಾರಣಗಳೇನು ಎಂಬುದು ತಿಳಿದು ಬರಲಿದೆ.

ಇದನ್ನೂ ಓದಿ : ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ: 9 ತಿಂಗಳ ಮಗು ಸೇರಿ ಇಬ್ಬರು ಸಾವು

ಇದನ್ನೂ ಓದಿ : Unethical Police Giri: ಮೂಲ್ಕಿಯಲ್ಲಿ ಯುವಕನಿಗೆ ಮಾರಣಾಂತಿಕ ಹಲ್ಲೆ

ಇದನ್ನೂ ಓದಿ : Avatar 2: ಅವತಾರ್ 2 ಸಿನಿಮಾ ವೀಕ್ಷಣೆ ವೇಳೆ ಹೃದಯಾಘಾತದಿಂದ ಸಾವು

ಇದನ್ನೂ ಓದಿ : Attempt to murder case: ಪತ್ನಿಯೊಂದಿಗೆ ಜಗಳ: 2 ವರ್ಷದ ಮಗನನ್ನು ಬಾಲ್ಕನಿಯಿಂದ ಎಸೆದು ಬಳಿಕ ತಾನೂ ಜಿಗಿದ ವ್ಯಕ್ತಿ

(Mumbai Fire disaster) A fire broke out at Juno’s Pizza restaurant near Parekh Hospital in Mumbai, killing one person and sustaining burn injuries to two others. The deceased has been identified as Khurshi Dedhia.

Comments are closed.