Petrol, Diesel Prices Hiked : ಗ್ರಾಹಕರಿಗೆ ಬಿಗ್‌ ಶಾಕ್‌ಕೊಟ್ಟ ತೈಲ ದರ : ಪೆಟ್ರೋಲ್‌, ಡಿಸೇಲ್‌ ಬೆಲೆಗೆ ಕಾರಣ ಕೊಟ್ಟ ಕೇಂದ್ರ ಸಚಿವ

ದೆಹಲಿ : ಇಂಧನ ಬೆಲೆ ಏರಿಕೆಯಿಂದ ಬೇಸತ್ತ ಜನರಿಗೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವ ಇಂಧನ ಬೆಲೆಯಿಂದ ದಿಕ್ಕೇ ತೋಚದಂತಾಗಿದೆ. ಭಾರತದಾದ್ಯಂತ ಸತತವಾಗಿ 6 ನೇ ದಿವೂ ಪೆಟ್ರೋಲ್‌ ಮತ್ತು ಡಿಸೇಲ್‌ ಬೆಲೆ ಏರಿಕೆಯನ್ನು ಕಂಡಿದೆ. 1 ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ 35 ಪೈಸೆ ಹೆಚ್ಚಳವಾಗಿದೆ.

ದೆಹಲಿಯಲ್ಲಿ 1 ಲೀಟರ್‌ ಪೆಟ್ರೋಲ್‌ ಬೆಲೆ 109.69 ರೂಪಾಯಿಗೆ ತಲುಪಿದೆ. ಡೀಸೆಲ್‌ ಬೆಲೆ 98.42 ರೂಪಾಯಾಗಿದೆ. ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 113.56 ರೂ ಗಳಾಗಿದೆ. ಡಿಸೇಲ್‌ ಬೆಲೆ 104.50 ರೂ ಗೆ ಮಾರಾಟವಾಗುತ್ತಿದೆ. ಹಾಗೂ ಚೆನೈನಲ್ಲಿ ಪೆಟ್ರೋಲ್‌ ಬೆಲೆ 101.56 ರೂ, ಡಿಸೇಲ್‌ ಬೆಲೆ 102.59 ರೂ ರಷ್ಟು ಏರಿಕೆ ಯಾಗಿದೆ.

ಇದನ್ನೂ ಓದಿ: Cooking Oil price : ಹಬ್ಬದ ಸೀಸನ್ ನಲ್ಲಿ ಅಗ್ಗವಾಗಲಿದೆ ಅಡುಗೆ ತೈಲ ಬೆಲೆ

ಈ ಇಂಧನ ಬೆಲೆ ಏರಿಕೆಯನ್ನು ನೋಡಿ ಜನರು ಕಂಗೆಟ್ಟಿರುವಾಗಲೇ ಇಂಧನ ಬೆಲೆ ಏರಿಕೆಯ ಕುರಿತು ಕೇಂದ್ರ ಸಚಿವ ಧರ್ಮೇದ್ರ ಪ್ರಧಾನ್‌ ಹೇಳಿಕೆಯನ್ನು ನೀಡಿದ್ದಾರೆ.ಈ ಹಿಂದೆ ಪೆಟ್ರೋಲಿಯೊಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿ ಸೇವೆ ಸಲ್ಲಿಸಿದ ಕೇಂದ್ರ ಸಚಿವ ಧರ್ಮೇದ್ರ ಪ್ರಧಾನ್‌ ಕಾನ್ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕೋವಿಡ್‌-19 ಸಂಕ್ರಾಮಿಕ ರೋಗದಿಂದ ಲಾಕ್‌ ಡೌನ್‌ ಆದ ಸಂದರ್ಭದಲ್ಲಿ ಸತತ ಎರಡು ವರ್ಷಗಳ ಕಾಲ ದೇಶದ ಎಲ್ಲಾ ವ್ಯವಸ್ತೆಯು ಅಸ್ತ ವ್ಯಸ್ತ ಗೊಂಡಿದೆ ಆ ಕಾರಣದಿಂದ ಪೆಟ್ರೋಲಿಯೊಂ ವಲಯದಲ್ಲಿ ಸುಮಾರು 2 ವರ್ಷದಿಂದ ಹೂಡಿಕೆ ಇಲ್ಲ. ಈ ಕಾರಣವೇ ಇಂಧನ ಬೆಲೆ ಏರಿಕೆಗೆ ಕಾರಣವಾಗಿದೆ ಎಂದಿದ್ದಾರೆ.

ಇದನ್ನೂ ಓದಿ : Paytm IPO : ನವೆಂಬರ್ 8 ಆರಂಭವಾಗಲಿದೆ ಪೇಟಿಎಂ ಐಪಿಒ

ಭಾರತವು ಸುಮಾರು 80 ಪ್ರತಿಶತದಷ್ಟು ಪೆಟ್ರೋಲಿಯೊಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ. ಆಮದು ವೆಚ್ಚ ಕೂಡ ಹೆಚ್ಚಾಗಿದೆ. ಆದ್ದರಿಂದ ಭಾರತ ಸರ್ಕಾರವು ನವೀಕರಿಸಬಹುದಾದ ಇಂಧನ ಬಳಕೆಗಾಗಿ ಹೆಚ್ಚಿನ ಯೋಜನೆಗಳನ್ನು ತರಲು ಪ್ರಯತ್ನಿಸುತ್ತಿದೆ ಎಂದು ಸಚಿವ ಧರ್ಮೇದ್ರ ಪ್ರಧಾನ್‌ ಹೇಳಿದ್ದಾರೆ.

(Big shock to consumers: Union Minister gives reason for petrol and diesel prices)

Comments are closed.