ಸೋಮವಾರ, ಏಪ್ರಿಲ್ 28, 2025
HomebusinessToday Petrol Price : ವಾಹನ ಸವಾರರಿಗೆ ಗುಡ್‌ನ್ಯೂಸ್‌ : ಪೆಟ್ರೋಲ್‌ ಬೆಲೆಯಲ್ಲಿ 8 ರೂ....

Today Petrol Price : ವಾಹನ ಸವಾರರಿಗೆ ಗುಡ್‌ನ್ಯೂಸ್‌ : ಪೆಟ್ರೋಲ್‌ ಬೆಲೆಯಲ್ಲಿ 8 ರೂ. ಇಳಿಕೆ

- Advertisement -

ನವದೆಹಲಿ : ಕಳೆದ ಕೆಲವು ದಿನಗಳಿಂದಲೂ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆಯಲ್ಲಿ ಇಳಿಕೆಯನ್ನು ಕಾಣುತ್ತಿದೆ. ಕೇಂದ್ರ ಸರಕಾರ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ ತೆರಿಗೆ ಕಡಿತ ಮಾಡಿದ ಬೆನ್ನಲ್ಲೇ ದೆಹಲಿ ಸರಕಾರ ಜನಸಾಮಾನ್ಯರ ಮೇಲಿನ ಹೊರೆಯನ್ನು ಕಡಿಮೆ ಮಾಡಿದೆ. ಇದೀಗ (Today Petrol Price) ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) 30 ರಿಂದ 19.4 ಕ್ಕೆಇಳಿಕೆ ಮಾಡಿದೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 8 ರೂಪಾಯಿ ಇಳಿಕೆಯಾಗಿದೆ. ಆದರೆ ಡಿಸೇಲ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಿಲ್ಲ.

ಕಳೆದ ತಿಂಗಳು ಕೇಂದ್ರ ಸರಕಾರ ಪೆಟ್ರೋಲ್‌ ಹಾಗೂ ಡಿಸೇಲ್‌ ದರವನ್ನು ಕ್ರಮವಾಗಿ 5 ಮತ್ತು 10 ರೂ. ಇಳಿಕೆ ಮಾಡಿತ್ತು. ಇದರ ಬೆನ್ನಲ್ಲೇ ಹಲವು ರಾಜ್ಯಗಳು ಕೂಡ ತೆರಿಗೆ ಕಡಿಮೆ ಮಾಡಿದ್ದವು. ಇದೀಗ ದೆಹಲಿ ಸರಕಾರ ಕೂಡ ತೆರಿಗೆ ಕಡಿತ ಮಾಡಿದೆ. ಕೇವಲ ಪೆಟ್ರೋಲ್‌ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿದ್ದು, ಡಿಸೇಲ್‌ ಮಾತ್ರ ದುಬಾರಿಯಾಗಿದೆ. ತೆರಿಗೆ ಇಳಿಕೆಯಿಂದಾಗಿ ದೆಹಲಿಯಲ್ಲಿ ಒಂದು ಲೀಟರ್‌ ಪೆಟ್ರೋಲ್‌ 95.97 ರೂಪಾಯಿಗೆ ಲಭ್ಯವಾಗಲಿದೆ.

ಪೆಟ್ರೋಲ್‌ ಮೇಲಿನ ವ್ಯಾಟ್ ದರಗಳನ್ನು ಶೇ.30ರಿಂದ ಶೇ.19.4ಕ್ಕೆ ಇಳಿಸಲಾಗಿದೆ. ಇತರ ನಗರಗಳಿಗೆ ಹೋಲಿಕೆ ಮಾಡಿದ್ರೆ ದೆಹಲಿಯಲ್ಲಿ ಪೆಟ್ರೋಲ್‌ ಅಗ್ಗವಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ದೆಹಲಿಯಲ್ಲಿ ಪೆಟ್ರೋಲ್ ಅಗ್ಗವಾಗಲಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಈಗಾಗಲೇ ಎನ್‌ಸಿಆರ್‌ನಲ್ಲಿ ಲೀಟರ್‌ಗೆ 86.67 ರೂ.ಗೆ ಅಗ್ಗವಾಗಿದೆ. ಇನ್ನು ಮಹಾನಗರಗಳಾದ ಮುಂಬೈನಲ್ಲಿ, ಒಂದು ಲೀಟರ್ ಪೆಟ್ರೋಲ್ 109.98 ರೂ., ಇದ್ದು, ಮೆಟ್ರೋ ನಗರಗಳಿಗೆ ಹೋಲಿಸಿದ್ರೆ ಇದು ಅತ್ಯಂತ ದುಬಾರಿಯೆನಿಸಿದೆ. ಚೆನ್ನೈನಲ್ಲಿ ಪೆಟ್ರೋಲ್ ಲೀಟರ್‌ಗೆ 101.40 ರೂ. ಒಂದು ಲೀಟರ್ ಪೆಟ್ರೋಲ್‌ಗೆ ಕೋಲ್ಕತ್ತಾದಲ್ಲಿ 104.67 ರೂ. ಇದೆ.

ದೇಶದ ಪ್ರಮುಖ ನಗರಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಈ ಕೆಳಗಿನಂತಿವೆ:

ಮುಂಬೈನಲ್ಲಿ ಪೆಟ್ರೋಲ್ ಬೆಲೆ: ಲೀಟರ್‌ಗೆ 95.97 ರೂ, ಡೀಸೆಲ್ ಬೆಲೆ: ಲೀಟರ್‌ಗೆ 94.14 ರೂ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ: ಲೀಟರ್‌ಗೆ 103.97 ರೂ, ಡೀಸೆಲ್ ಬೆಲೆ: ಲೀಟರ್‌ಗೆ 86.67 ರೂ.

ಚೆನ್ನೈನಲ್ಲಿ ಪೆಟ್ರೋಲ್ ಬೆಲೆ: ಲೀಟರ್‌ಗೆ 101.40 ರೂ., ಡೀಸೆಲ್ ಬೆಲೆ: ಲೀಟರ್‌ಗೆ 91.43 ರೂ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ: ಲೀಟರ್‌ಗೆ 104.67 ರೂ., ಡೀಸೆಲ್ ಬೆಲೆ: ಲೀಟರ್‌ಗೆ 89.79 ರೂ.

ಭೋಪಾಲ್‌ನಲ್ಲಿ ಪೆಟ್ರೋಲ್ ಬೆಲೆ: ಲೀಟರ್‌ಗೆ 107.23 ರೂ., ಡೀಸೆಲ್ ಬೆಲೆ: ಲೀಟರ್‌ಗೆ 90.87 ರೂ.

ಹೈದರಾಬಾದ್‌ನಲ್ಲಿ ಪೆಟ್ರೋಲ್ ಬೆಲೆ: ಲೀಟರ್‌ಗೆ 108.20 ರೂ., ಡೀಸೆಲ್ ಬೆಲೆ: ಲೀಟರ್‌ಗೆ 94.62 ರೂ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ: ಲೀಟರ್‌ಗೆ 100.58 ರೂ., ಡೀಸೆಲ್ ಬೆಲೆ: ಲೀಟರ್‌ಗೆ 85.01 ರೂ.

ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ: ಲೀಟರ್‌ಗೆ 100.12 ರೂ., ಡೀಸೆಲ್ ಬೆಲೆ: ಲೀಟರ್‌ಗೆ 86.46 ರೂ.

ಜೈಪುರದಲ್ಲಿ ಪೆಟ್ರೋಲ್ ಬೆಲೆ: 107.06 ರೂ, ಡೀಸೆಲ್ ಬೆಲೆ: 90.07 ರೂ.

ಗುರ್ಗಾಂವ್‌ನಲ್ಲಿ ಪೆಟ್ರೋಲ್ ಬೆಲೆ: 95.90 ರೂ., ಡೀಸೆಲ್ ಬೆಲೆ: 87.11 ರೂ.

ರಾಯ್‌ಪುರದಲ್ಲಿ ಪೆಟ್ರೋಲ್ ಬೆಲೆ: 101.11 ರೂ., ಡೀಸೆಲ್ ಬೆಲೆ: 92.33 ರೂ.

ಗುವಾಹಟಿಯಲ್ಲಿ ಪೆಟ್ರೋಲ್ ಬೆಲೆ : ಲೀಟರ್‌ಗೆ 94.58 ರೂ., ಡೀಸೆಲ್ ಬೆಲೆ: ಲೀಟರ್‌ಗೆ 81.29 ರೂ..

ಲಕ್ನೋದಲ್ಲಿ ಪೆಟ್ರೋಲ್ ಬೆಲೆ: ಲೀಟರ್‌ಗೆ 95.28 ರೂ., ಡೀಸೆಲ್ ಬೆಲೆ: ಲೀಟರ್‌ಗೆ 86.80 ರೂ.

ಇದನ್ನೂ ಓದಿ : ಸಿಲಿಕಾನ್ ಸಿಟಿ ಜನರಿಗೆ ಅಟೋಶಾಕ್ : ಜೇಬಿಗೆ ಕತ್ತರಿ ಹಾಕಲಿದೆ ಮೀಟರ್

ಇದನ್ನೂ ಓದಿ : Karnataka Government Holiday List 2022: 2022ರ ಅಧಿಕೃತ ರಜಾದಿನಗಳಿವು

(Today Petrol Price : good news petrol price decrease Delhi)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular