ಸೋಮವಾರ, ಏಪ್ರಿಲ್ 28, 2025
HomebusinessIT Sector Share Crash : ಐಟಿ ವಲಯದ ಷೇರುಗಳಲ್ಲಿ ಭಾರಿ ಕುಸಿತ; ಹೆಚ್ಚಿದ ಷೇರುಪೇಟೆ...

IT Sector Share Crash : ಐಟಿ ವಲಯದ ಷೇರುಗಳಲ್ಲಿ ಭಾರಿ ಕುಸಿತ; ಹೆಚ್ಚಿದ ಷೇರುಪೇಟೆ ಆತಂಕ

- Advertisement -

ಶುಕ್ರವಾರ (Friday) ಭಾರತೀಯ ಷೇರು ಮಾರುಕಟ್ಟೆ (Indian Stock Market) ಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ದೇಶದ ಐಟಿ ಕ್ಷೇತ್ರದ ಷೇರುಗಳು ಕುಸಿದಿರುವುದೇ (IT Sector Share Crash) ಇದಕ್ಕೆ ಕಾರಣ. ಎಚ್‌ಸಿಎಲ್ ಟೆಕ್ ನಾಯಕತ್ವದಲ್ಲಿ, ಐಟಿ ವಲಯದ ಷೇರುಗಳಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಎಚ್ ಸಿಎಲ್ ಟೆಕ್ ಶೇ 7ರಷ್ಟು ಕುಸಿತ ಕಂಡಿದೆ. ಹಾಗಾಗಿ ಇಂದು ನಿಫ್ಟಿ ಐಟಿ 1000 ಪಾಯಿಂಟ್ ಅಂದರೆ ಶೇ.3.33ರಷ್ಟು ಕುಸಿತ ಕಂಡಿದೆ. ವಾಸ್ತವವಾಗಿ, ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಐಟಿ ವಲಯದಲ್ಲಿ ಕುಸಿತ ಕಂಡುಬಂದಿದೆ.

ಐಟಿ ಕಂಪನಿಗಳ ಮೇಲೆ ಜಾಗತಿಕ ಬಿಕ್ಕಟ್ಟಿನ ಪರಿಣಾಮ:
ಜಾಗತಿಕ ಬಿಕ್ಕಟ್ಟು ಐಟಿ ಕಂಪನಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಅಮೆರಿಕ, ಯುರೋಪ್ ನಿಂದ ದೇಶದ ಐಟಿ ಕಂಪನಿಗಳಿಗೆ ದೊಡ್ಡ ಆರ್ಡರ್ ಗಳು ಬರುತ್ತವೆ. ಆದರೆ ಅಲ್ಲಿನ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಮುಂದಿನ ವರ್ಷ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇದು ಭಾರತೀಯ ಐಟಿ ಕಂಪನಿಗಳ ಮೇಲೂ ಸ್ಪಷ್ಟವಾಗಿ ಪರಿಣಾಮ ಬೀರುಬಹುದು.

ಭಾರಿ ಕುಸಿತ ಕಂಡ ಐಟಿ ಷೇರುಗಳು :
ಇಂದು ಎಚ್‌ಸಿಎಲ್ ಟೆಕ್‌ನ ಮ್ಯಾನೇಜ್‌ಮೆಂಟ್ ಕರೆಯ ನಂತರ, ಸಂಪೂರ್ಣ ಐಟಿ ಷೇರುಗಳು ಕುಸಿತ ಕಂಡವು. ಎಚ್ ಸಿಎಲ್ ಟೆಕ್ ಶೇ.7ರಷ್ಟು ಕುಸಿದಿದೆ. 1,020 ರೂ. ಇದು ಕಳೆದ 6 ತಿಂಗಳಲ್ಲಿ HCL ಟೆಕ್‌ನ ಷೇರುಗಳಲ್ಲಿನ ಅತಿದೊಡ್ಡ ಕುಸಿತವಾಗಿದೆ. ಹಾಗೆಯೇ 2022 ರಲ್ಲಿ ಷೇರುಗಳು 21 ಪ್ರತಿಶತದಷ್ಟು ಕಡಿಮೆಯಾಗಿದೆ. ಭಾರಿ ಕುಸಿತ ಕಂಡ ಐಟಿ ಷೇರುಗಳೆಂದರೆ – ಟೆಕ್ ಮಹೀಂದ್ರ ಶೇ. 4.59, ಎಲ್ ಆ್ಯಂಡ್ ಟಿ ಟೆಕ್ನಾಲಜಿ ಶೇ. 3.53, ಎಲ್ ಟಿ ಐ ಮೈಂಡ್ ಟ್ರೀ ಶೇ. 3.43, ಇನ್ಫೋಸಿಸ್ ಶೇ. 3.35, ವಿಪ್ರೋ ಶೇ. 2.80, ಟಿಸಿಎಸ್ ಶೇ. 2.06. ಇದಲ್ಲದೇ ಮಿಡ್‌ಕ್ಯಾಪ್ ಐಟಿ ಷೇರುಗಳಲ್ಲೂ ಭಾರಿ ಕುಸಿತವಾಗಿದೆ. ಮಿಡ್‌ಕ್ಯಾಪ್ ಐಟಿ ಷೇರುಗಳಲ್ಲಿ ಬಿರ್ಲಾಸಾಫ್ಟ್ ಶೇ. 4.51, ಎಂಫಾಸಿಸ್ ಶೇ. 4.12, ಪರ್ಸಿಸ್ಟೆಂಟ್ ಶೇ. 3.68, ಮಾಸ್ಟೆಕ್ ಶೇ. 3.39 ಕುಸಿತ ಕಂಡಿವೆ.

ಇದನ್ನೂ ಓದಿ : Airtel Jio BSNL Broadband Plans :100 Mbps ಸ್ಪೀಡ್‌ ನೀಡುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು; ಯಾವ ಪ್ಲಾನ್‌ ಬೆಸ್ಟ್‌

ಇದನ್ನೂ ಓದಿ : Unique 5 Rupee Note: 5 ರೂ. ಮುಖಬೆಲೆಯ ನೋಟು ನಿಮ್ಮ ಬಳಿ ಇದ್ರೆ, ರಾತ್ರೋ ರಾತ್ರಿ ನೀವು ಆಗ್ತೀರಿ ಲಕ್ಷಾಧಿಪತಿ !

ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

(IT Sector Share Crash, investors worried now)

RELATED ARTICLES

Most Popular