Shraddha Father pressmeet: ಪೊಲೀಸರು ತನಿಖೆಯಲ್ಲಿ ನಿರಾಸಕ್ತಿ ತೋರಿದ್ದಕ್ಕೆ ಮಗಳು ಕೊಲೆಯಾದಳು: ಶೃದ್ಧಾ ವಾಳ್ಕರ್ ತಂದೆ ಗಂಭೀರ ಆರೋಪ

ಮುಂಬೈ: Shraddha Father pressmeet: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯಲ್ಲಿ ನಡೆದ ಶೃದ್ಧಾ ವಾಳ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೃದ್ಧಾ ತಂದೆ ವಿಕಾಸ್ ವಾಳ್ಕರ್ ಪೊಲೀಸರ ವಿರುದ್ಧವೇ ಗಂಭೀರವಾದ ಆರೋಪವೊಂದನ್ನು ಮಾಡಿದ್ದರೆ. ಸರಿಯಾದ ಸಮಯದಲ್ಲಿ ಪೊಲೀಸರು ಸಹಕಾರ ನೀಡಿದ್ದರೆ ಮಗಳು ಬದುಕುತ್ತಿದ್ದಳು ಎಂದು ಬೇಸರ ಹೊರಹಾಕಿದ್ದಾರೆ.

ಮುಂಬೈನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶೃದ್ಧಾ ವಾಳ್ಕರ್ ತಂದೆ ವಿಕಾಸ್ ವಾಳ್ಕರ್, ದೆಹಲಿ ಪೊಲೀಸರು ಮತ್ತು ವಸಾಯಿ ಪೊಲೀಸರು ಜಂಟಿಯಾಗಿ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ತನಿಖೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಆದರೆ ಇದಕ್ಕೂ ಮೊದಲು ವಸಾಯಿ ಪೊಲೀಸರು ಸಹಕಾರ ನೀಡಿದ್ದರೆ ನನ್ನ ಮಗಳು ಕೊಲೆಯಾಗುತ್ತಿರಲಿಲ್ಲ. ವಸಾಯಿ ಪೊಲೀಸರು ಈ ಹಿಂದೆ ತನಿಖೆಯಲ್ಲಿ ನಿರಾಸಕ್ತಿ ತೋರಿದ್ದರಿಂದಲೇ ನನ್ನ ಮಗಳ ಕೊಲೆಯಾಯ್ತು ಎಂದು ಹೇಳಿದರು.

ಇದನ್ನೂ ಓದಿ: video viral: ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಟಿಸಿ ಮೇಲೆ ಬಿದ್ದ ಹೈಟೆನ್ಶನ್ ವಯರ್

ಶೃದ್ಧಾ ಹಾಗೂ ಅಫ್ತಾಬ್ ಸಂಬಂಧ ತನಗೆ ಇಷ್ಟವೇ ಇರಲಿಲ್ಲ. ಹೀಗಾಗಿ ಅದನ್ನು ನಾನು ವಿರೋಧಿಸಿದ್ದೆ. ಆದರೆ ಅಫ್ತಾಬ್ ಶೃದ್ಧಾಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ತನಗೆ ಸ್ವಲ್ಪವೂ ಮಾಹಿತಿ ಇರಲಿಲ್ಲ. ಆದರೆ ಅಫ್ತಾಬ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಆತನ ಮನೆಮಂದಿಗೆ ಗೊತ್ತಿತ್ತು ಎಂದು ನನಗೆ ಅನಿಸುತ್ತಿದೆ, ನನ್ನ ಮಗಳನ್ನು ಭೀಕರವಾಗಿ ಕೊಲೆಗೈಯಲಾಗಿದೆ. ವಸಾಯಿ ಪೊಲೀಸರಿಂದ ನಾನು ಬಹಳಷ್ಟು ತೊಂದರೆ ಅನುಭವಿಸಿದ್ದೇನೆ ಎಂದು ಅಳಲು ತೋಡಿಕೊಂಡರು.

2021ರಲ್ಲಿ ಶೃದ್ಧಾ ಜೊತೆ ಕೊನೆಯದಾಗಿ ನಾನು ಮಾತನಾಡಿದ್ದೆ. ಆಗ ಆಕೆ ತಾನು ಬೆಂಗಳೂರಿನಲ್ಲಿ ಇರುವುದಾಗಿ ತಿಳಿಸಿದ್ದಳು. ಸೆಪ್ಟಂಬರ್ 26ರಂದು ಮತ್ತೊಂದು ಬಾರಿ ಕರೆ ಮಾಡಿದಾಗ ಅಫ್ತಾಬ್ ಮಾತನಾಡಿದ್ದ. ಆತನ ಬಳಿ ಶೃದ್ಧಾ ಬಗ್ಗೆ ವಿಚಾರಿಸಿದ್ದಾಗ ಉತ್ತರ ನೀಡಿರಲಿಲ್ಲ. ಅಫ್ತಾಬ್ ಕೃತ್ಯಗಳ ಬಗ್ಗೆ ಆತನ ಮನೆಯವರಿಗೆ ಮೊದಲೇ ಗೊತ್ತಿತ್ತು. ಆದರೆ ಯಾರೂ ನನ್ನ ಮಗಳನ್ನು ಉಳಿಸುವ ಪ್ರಯತ್ನ ಮಾಡಿಲ್ಲ ಎಂದು ವಿಕಾಸ್ ವಾಳ್ಕರ್ ಆರೋಪಿಸಿದರು.

ನನ್ನ ಮಗಳಿಗಾದ ಅನ್ಯಾಯಕ್ಕೆ ಅಫ್ತಾಬ್ ನನ್ನು ಗಲ್ಲಿಗೇರಿಸುವ ಮೂಲಕ ಪೊಲೀಸರು ಮತ್ತು ಕಾನೂನು ಸರಿಯಾದ ಪಾಠ ಕಲಿಸಬೇಕು. ಪ್ರಕರಣದಲ್ಲಿ ಶಾಮೀಲಾಗಿರುವ ಅಫ್ತಾಬ್ ಮನೆಮಂದಿ, ಕುಟುಂಬಸ್ಥರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಶೃದ್ಧಾ ತಂದೆ ಆಗ್ರಹಿಸಿದರು.

ಇದನ್ನೂ ಓದಿ: Gas Cylinder Blast: ಮದುವೆ ಮನೆಯಲ್ಲಿ ಸಿಲಿಂಡರ್‌ ಸ್ಫೋಟ: ನಾಲ್ಕು ಮಂದಿ ಸಾವು, 60 ಮಂದಿ ಗಾಯ

ಶೃದ್ಧಾ ವಾಳ್ಕರ್ ಹಾಗೂ ಅಫ್ತಾಬ್ ಪೂನಾವಾಲಾ ದೆಹಲಿಯಲ್ಲಿ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದರು. ಬಳಿಕ ಮದುವೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಅಫ್ತಾಬ್ ಶೃದ್ಧಾಳನ್ನು ಕೊಲೆಗೈದು, ಶವವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ಹಲವೆಡೆಗಳಲ್ಲಿ ಎಸೆದಿದ್ದ. ಈ ಪ್ರಕರಣ ಬಯಲಾಗುತ್ತಿದ್ದಂತೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು.

Shraddha Father pressmeet: Shraddha Walker’s father makes serious allegation on Vasai Police

Comments are closed.