Jeff Bezos: ಸದ್ಯಕ್ಕೆ ಹೊಸ ಕಾರು, ಫ್ರಿಡ್ಜ್, ಟಿವಿ ಖರೀದಿಸಬೇಡಿ ಎಂದ ಅಮೆಜಾನ್ ಸಂಸ್ಥಾಪಕ; ಕಾರಣ ಏನಿರಬಹುದು

ಅಮೆರಿಕ: Jeff Bezos: ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಉದ್ಯಮಿಗಳು ಮುಂದಿನ ದಿನಗಳಲ್ಲಿ ಎದುರಾಗಬಲ್ಲ ಆರ್ಥಿಕ ಹಿಂಜರಿತದ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಈ ಸಾಲಿಗೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸೇರಿದ್ದು, ಅವರ ಹೇಳಿಕೆ ಆತಂಕ ಹುಟ್ಟಿಸಿದೆ. ಬೃಹತ್ ಮೊತ್ತದ ಖರೀದಿ ಆಲೋಚನೆಯಲ್ಲಿರುವ ಅಮೆರಿಕನ್ನರು ತಮ್ಮ ನಿರ್ಧಾರಗಳನ್ನು ಮುಂದಕ್ಕೆ ಹಾಕುವಂತೆ ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Mangalore bomb blast: ಮಂಗಳೂರು ಬಾಂಬ್‌ ಸ್ಪೋಟ ಪ್ರಕರಣ: ಸ್ಪೋಟದ ತನಿಖೆ ಎನ್‌ಐಎ ಹೆಗಲಿಗೆ :ಸಂಸದ ನಳೀನ್‌ ಕುಮಾರ್‌

ಅಮೆರಿಕಾದ ಖಾಸಗಿ ಸುದ್ದಿ ವಾಹಿನಿಗೆ ಅವರು ಸಂದರ್ಶನವನ್ನು ನೀಡಿದ್ದಾರೆ. ಈ ವೇಳೆ ಅವರು ಮುಂಬರುವ ಆರ್ಥಿಕ ಹಿಂಜರಿತವನ್ನು ಎದುರಿಸುವ ಸಲುವಾಗಿ ಅಮೆರಿಕ ನಿವಾಸಿಗಳು ಹೊಸ ಕಾರು, ಫ್ರಿಡ್ಜ್, ಟಿವಿ ಸೇರಿದಂತೆ ದುಬಾರಿ ಮೌಲ್ಯದ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವ ಆಲೋಚನೆ ಸದ್ಯಕ್ಕೆ ಬೇಡ, ಮುಂದಕ್ಕೆ ಹಾಕಿ ಎಂದಿದ್ದಾರೆ.

ಸಣ್ಣಪುಟ್ಟ ಉದ್ಯಮಿಗಳು ತಮ್ಮ ವ್ಯಾಪಾರದ ಮೇಲೆ ಹೆಚ್ಚಿನ ಹಣ ಹೂಡಿಕೆ ಮಾಡುವ ನಿರ್ಧಾರ ಬೇಡ, ಅದರ ಬದಲಿಗೆ ಆರ್ಥಿಕ ಹಿಂಜರಿತ ಸಮಯದಲ್ಲಿ ಅನುಕೂಲವಾಗುವಂತೆ ಹಣವನ್ನು ಕೂಡಿಡಿ ಎಂದು ಕಿವಿಮಾತು ಹೇಳಿದ್ದಾರೆ. ಉತ್ತಮ ಪರಿಸ್ಥಿತಿಗೆ ಆಶಿಸಬೇಕು ಆದರೆ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಇದೇ ವೇಳೆ ಇನ್ನೂ ಹೆಚ್ಚಿನ ಆರ್ಥಿಕ ತೊಂದರೆಗಳು ಎದುರಾದಲ್ಲಿ ಅದರ ನೇರ ಪ್ರಭಾವ ಸಣ್ಣ ವ್ಯಾಪಾರಸ್ಥರ ಮೇಲೆ ಬೀರಬಹುದು ಎಂದು ಸುಳಿವು ನೀಡಿದ್ದಾರೆ.

ಇದನ್ನೂ ಓದಿ: Govt job opportunity:ಡಿಪ್ಲೊಮಾ ಪೂರ್ಣಗೊಳಿಸಿದವರಿಗೆ ಸರಕಾರಿ ಹುದ್ದೆಯ ಅವಕಾಶ

ಇದೇ ವೇಳೆ ಜೆಫ್ ಬೆಜೋಸ್ (Jeff Bezos) ಅವರು ತಮ್ಮ 124 ಡಾಲರ್ ಸಂಪತ್ತಿನ ಹೆಚ್ಚಿನ ಭಾಗವನ್ನು ತಾಪಮಾನ ಏರಿಕೆ ವಿರುದ್ಧದ ಹೋರಾಟ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಗಳಿಗಾಗಿ ಬಳಸುವುದಾಗಿ ಘೋಷಿಸಿದ್ದಾರೆ. ಅಮೆಜಾನ್ ಸಿಇಒ ಸ್ಥಾನದಿಂದ ಜೆಫ್ ಬೆಜೋಸ್ ಅವರು ಕಳೆದ ವರ್ಷವೇ ಕೆಳಗಿಳಿದಿದ್ದು, ಪ್ರಸ್ತುತ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ.

Jeff Bezos: The founder of Amazon suggested not to buy a new car fridge TV for now What could be the reason

Comments are closed.