Jio World Centre : ಮಾಯಾನಗರಿಯಲ್ಲಿ ತಲೆ ಎತ್ತಲಿದೆ ಜಿಯೋ ವರ್ಲ್ಡ್ ಸೆಂಟರ್ : ಏನಿದರ ವಿಶೇಷತೆ ಗೊತ್ತಾ !

ಮುಂಬೈ : ಜಾಗತಿಕ ಮಟ್ಟದಲ್ಲಿ ಭಾರತಕ್ಕೊಂದು ಐಡೆಂಟಿಟಿ ತಂದುಕೊಡುವಂತ ಪ್ರತಿಷ್ಠಿತ ಜಿಯೋ ವರ್ಲ್ಡ್ ಸೆಂಟರ್ (Jio World Centre ) ಮುಂಬೈನಲ್ಲಿ ಸ್ಥಾಪಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಘೋಷಿಸಿದೆ. ರಿಯಲನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ನಿರ್ದೇಶಕಿ ಹಾಗೂ ರಿಯಲನ್ಸ್ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷೆ ನೀತಾ ಅಂಬಾನಿ ಈ ಸಿಹಿಸುದ್ದಿ ನೀಡಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ರಿಲಯನ್ಸ್ ಸಂಸ್ಥೆ 18.5 ಎಕರೆ ವಿಸ್ತಾರವಾದ ಜಾಗ ಹೊಂದಿದೆ. ಈ ಜಾಗದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಜಿಯೋ ವರ್ಲ್ಡ್ ಸೆಂಟರ್ (Jio World Centre ) ಆರಂಭಿಸಲು ರಿಲಯನ್ಸ್ ಸಂಸ್ಥೆ ಸಿದ್ಧತೆ ಆರಂಭಿಸಿದೆ.

ವ್ಯಾಪಾರ, ವಾಣಿಜ್ಯ ಹಾಗೂ ಸಾಂಸ್ಕೃತಿಕ ತಾಣವಾಗಿ ಈ ಜಿಯೋ ವರ್ಲ್ಡ್ ಸೆಂಟರ್ ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿ ಸಿದ್ದತೆ ನಡೆದಿದೆ ಎಂದು ನೀತಾ ಅಂಬಾನಿ ವಿವರಿಸಿದ್ದಾರೆ. ಮುಂಬೈ ನಗರದ ಹೆಗ್ಗುರುತಾಗಿ ಜಿಯೋ ವರ್ಲ್ಡ್ ಸೆಂಟರ್ (Jio World Centre ) ತೆರೆಯಲು ನೀತಾ ಅಂಬಾನಿ ಹಾಗೂ ಅಂಬಾನಿ ಗ್ರೂಪ್ಸ್ ಸಿದ್ಧತೆ ನಡೆಸಿದೆ. ಇಲ್ಲಿ ಸಾಂಸ್ಕೃತಿಕ ಕೇಂದ್ರ, ಸಂಗೀತ ಕಾರಂಜಿ, ರಿಟೇಲ್ ಶಾಪ್ ಗಳು ಉತ್ತಮವಾದ ರೆಸ್ಟೋರೆಂಟ್ ಗಳು, ಸರ್ವೀಸ್ ಅಪಾರ್ಟ್ಮೆಂಟ್ ಗಳು, ಕಚೇರಿಗಳು, ಸರ್ವೀಸ್ ಆಫ್ ದಿ ಆರ್ಟ್ ಸೇರಿದಂತೆ ವಿವಿಧ ಸೌಲಭ್ಯಗಳು ಶಾಪಿಂಗ್ ಡೆಸ್ಟಿನೇಶನ್ ಗಳು ಒಂದೇ ಸೂರಿನಡಿ ಸಿಗಲಿದೆ.

ಜಿಯೋ ವರ್ಲ್ಡ್ ಸೆಂಟರ್ (Jio World Centre ) ನಲ್ಲಿ ಏನೆಲ್ಲ ಸಿಗಲಿದೆ ಅನ್ನೋದನ್ನು ಗಮನಿಸೋದಾದರೇ,

  • 161460 ಚದರ ಅಡಿ ವಿಸ್ತೀರ್ಣದ 3 ಪ್ರದರ್ಶನ ಸಭಾಂಗಣಗಳನ್ನು ಇದು ಒಳ್ಳಗೊಳ್ಳಲಿದ್ದು, ಏಕ ಕಾಲಕ್ಕೆ 16,400 ಅತಿಥಿಗಳಿಗೆ ಅವಕಾಶ ಸಿಗಲಿದೆ.
  • 10,500 ಜನರಿಗೆ ಅವಕಾಶ ಕಲ್ಪಿಸುವಂತ 107640 ಚದರ ಅಡಿಗಳ ಕನ್ವೆನ್ಸಲ್ ಹಾಲ್ ಇರಲಿದೆ
  • ಭವ್ಯವಾದ 32000 ಚದರ ಅಡಿಯ ಬಾಲ್ ರೂಂ ಏಕಕಾಲಕ್ಕೆ 3200 ಅತಿಥಿಗಳಿಗೆ ಲಭ್ಯವಾಗಲಿದೆ‌.
  • 29532 ಚದರ ಅಡಿಯ 25 ಕ್ಕೂ ಹೆಚ್ಚು ಸಭಾ ಕೊಠಡಿಗಳು ಇರಲಿದೆ.
  • ಹೈಬ್ರಿಡ್ ಮತ್ತು ಸಕ್ರಿಯ ಡಿಜಿಟಲ್ ಸೇವೆಗಾಗಿ ಫೈಜಿ ವ್ಯವಸ್ಥೆ
  • ದಿನವೊಂದಕ್ಕೆ 18 ಸಾವಿರ ಜನರಿಗೆ ಅಡುಗೆ ಒದಗಿಸುವರಷ್ಟು ದೊಡ್ಡ ಅಡುಗೆ ಕೋಣೆ
  • ಒಂದೇ ಸಲ ಐದು ಸಾವಿರ ಕಾರುಗಳನ್ನು ಪಾರ್ಕಿಂಗ್ ಮಾಡುವ ಸೌಲಭ್ಯ ಹೊಂದಿರುವ ಪಾರ್ಕಿಂಗ್ ವ್ಯವಸ್ಥೆ ಹೊಂದಿರಲಿದೆ. ಇದು ಭಾರತದ ಅತಿದೊಡ್ಡ ‌ಆನ್ ಸೈಟ್ ಪಾರ್ಕಿಂಗ್ ಆಗಿರಲಿದೆ.
  • ಒಬೆರಾಯ್ 360 ಸೇರಿದಂತೆ ಹಲವು ವಿಭಿನ್ನ ಕಲ್ಪನೆಯಪಾಕಶಾಲೆಗಳು ಇಲ್ಲಿರಲಿದ್ದು, ವಿಶ್ವದ ಐಷಾರಾಮಿ ಬ್ರ್ಯಾಂಡ್ ಗಳ ವಸ್ತುಗಳೆಲ್ಲವೂ ಲಭ್ಯವಾಗಲಿದೆ. ಕೇವಲ ವ್ಯಾಪಾರ ಮಾತ್ರವಲ್ಲ ಸಾಂಸ್ಕೃತಿಕ ಹಿರಿಮೆಯನ್ನು ಬೆಳೆಸುವ ತಾಣವಾಗಿ ಜಿಯೋ ವರ್ಲ್ಡ್ ಸೆಂಟರ್ (Jio World Centre ) ಬೆಳೆದು ನಿಲ್ಲಲಿದೆ. 2023 ರಿಂದ ಹಂತ ಹಂತವಾಗಿ ಇದು ಆರಂಭವಾಗಲಿದೆ.

ಇದನ್ನೂ ಓದಿ : ಡಿಮ್ಯಾಟ್ ಖಾತೆ ಎಂದರೇನು? LIC IPOದಲ್ಲಿ ಹೂಡಿಕೆ ಮಾಡಲು ಮೊಬೈಲ್‌ನಲ್ಲೇ ಡಿಮ್ಯಾಟ್ ಅಕೌಂಟ್ ತೆರೆಯುವುದು ಹೇಗೆ?

ಇದನ್ನೂ ಓದಿ : Cryptocurrency: ಕ್ರಿಪ್ಟೋಕರೆನ್ಸಿ ಭಾರತದಲ್ಲಿ ಕಾನೂನುಬದ್ಧವೇ, ಅಲ್ಲವೇ? ಸುಪ್ರೀಂ ಪ್ರಶ್ನೆ

( Jio World Centre : Reliance Industries announced opening country largest destination in Mumbai)

Comments are closed.