ಭಾನುವಾರ, ಏಪ್ರಿಲ್ 27, 2025
Homebusinessಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.

ಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.

- Advertisement -

ಬೆಂಗಳೂರು : ರಾಜ್ಯ ಸರಕಾರದ (Karnataka Government) ಗೃಹಲಕ್ಷ್ಮೀ ಯೋಜನೆಗೆ (gruha lakshmi scheme ) ಜಾರಿಗೆ ಬಂದು ಸರಿ ಸುಮಾರು ಎರಡು ತಿಂಗಳೇ ಕಳೆದಿದೆ. ಆದರೆ ಅರ್ಜಿ ಸಲ್ಲಿಸಿದ ಹಾಗೂ ಎಲ್ಲಾ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ (Bank Account) ಹಣ ಮಾತ್ರ  ವರ್ಗಾವಣೆ ಆಗಿಲ್ಲ. ಇದೀಗ ಸರಕಾರ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣವನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಖಡಕ್‌ ವಾರ್ನಿಂಗ್‌ (Government New Rules) ಕೊಟ್ಟಿದೆ.

ಗೃಹಲಕ್ಷ್ಮೀ ಯೋಜನೆ.. ಕಾಂಗ್ರೆಸ್‌ ಸರಕಾರ ಕನಸಿನ ಯೋಜನೆಗಳಲ್ಲೊಂದು. ಮಹಿಳೆಯರನ್ನು ಸ್ವಾಭಿಮಾನಿಗಳನ್ನಾಗಿಸುವ ಸಲುವಾಗಿ ಪ್ರತೀ ತಿಂಗಳು ಪ್ರತೀ ಮನೆಯ ಯಜಮಾನಿಯ ಖಾತೆಗೆ 2000 ರೂಪಾಯಿ ವರ್ಗಾಯಿಸುವ ಯೋಜನೆ ಇದಾಗಿದೆ.

Karnataka These womens account not Credited Rs 2000 from the 2nd installment of Gruhalakshmi Yojana
Image Credit To Original Source

ಈಗಾಗಲೇ ಒಂದು ಕೋಟಿಗೂ ಅಧಿಕ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 1,12 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ :  ಗೃಹಿಣಿಯರಿಗೆ ಗುಡ್ ನ್ಯೂಸ್ ಕೊಟ್ಟ ಸರಕಾರ , ಖಾತೆಗೆ 4000ರೂ. ಜಮೆ

ಆದರೆ ಈ ಪೈಕಿ ಕೇವಲ 48 ಲಕ್ಷ ಮಹಿಳೆಯರ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣ (Gruha Lakshmi First Installment) ವರ್ಗಾವಣೆ ಆಗಿದೆ. ಆದರೆ ಉಳಿದವರ ಖಾತೆಗೆ ವರ್ಗಾವಣೆ ಆಗುತ್ತೋ ಇಲ್ಲವೋ ಅನ್ನೋ ಅನುಮಾನ ವ್ಯಕ್ತವಾಗಿದೆ.

ಪ್ರಮುಖವಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಖಾತೆಗೆ ಜಮೆ ಆಗದ ಬಹುತೇಕರು ತಾಂತ್ರಿಕ ಸಮಸ್ಯೆ (Technical Problem) ಎದುರಿಸುತ್ತಿದ್ದಾರೆ.  ಪ್ರಮುಖವಾಗಿ ಬಹುತೇಕರ ಆಧಾರ್‌ ಕಾರ್ಡ್‌ ಬ್ಯಾಂಕ್‌ ಖಾತೆಯ ಜೊತೆಗೆ ಲಿಂಕ್‌ ಆಗಿಲ್ಲ.

ಇನ್ನು ಆಧಾರ್‌ ಕಾರ್ಡ್‌ ಲಿಂಕ್‌ (Adhar Card Link) ಆಗಿದ್ದರೂ ಕೂಡ ಕೆಲವರ ರೇಷನ್‌ ಕಾರ್ಡ್‌ ( Ration Card Link) ಹಾಗೂ ಆಧಾರ್‌ ಕಾರ್ಡ್‌ನಲ್ಲಿ ಇರುವ ಹೆಸರುಗಳು ಹೊಂದಾಣಿ ಆಗುತ್ತಿಲ್ಲ. ಇನ್ನು ಅರ್ಜಿ ಸಲ್ಲಿಸಿದ ಗೃಹಿಣಿಯರ ರೇಷನ್‌ ಕಾರ್ಡ್‌ನಲ್ಲಿ ಮನೆಯ ಯಜಮಾನಿಯ ಸ್ಥಾನದಲ್ಲಿ ಪುರುಷನ ಹೆಸರಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಹಿಂದೆಯೇ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸುವ ವೇಳೆಯಲ್ಲಿ, ಈ ಎಲ್ಲಾ ಕಂಡಿಷನ್ಸ್‌ಗಳನ್ನು ವಿಧಿಸಿತ್ತು.

ಇದನ್ನೂ ಓದಿ : ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಅವಕಾಶವೇ ಇಲ್ಲ ! ಜಾರಿಯಾಯ್ತು ಸರಕಾರದ ಹೊಸ ಆದೇಶ

ಅದ್ರಲ್ಲೂ ಗೃಹಿಣಿ ಹಾಗೂ ಗೃಹಿಣಿಯ ಪತಿ ಆದಾಯ ತೆರಿಗೆ (Income Tax) ಹಾಗೂ ಜಿಎಸ್‌ಟಿ (GST) ಪಾವತಿದಾರರು ಆಗಿರ ಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಜೊತೆಗೆ ರೇಷನ್‌ ಕಾರ್ಡ್‌ನಲ್ಲಿರುವ ಲೋಪದೋಷ ತಿದ್ದುಪಡಿ ಮಾಡಲು ಸರಕಾರ ಕಾಲಾವಕಶಾವನ್ನು ನೀಡಿತ್ತು.

Karnataka These womens account not Credited Rs 2000 from the 2nd installment of Gruhalakshmi Yojana
Image Credit To Original Source

ಸಪ್ಟೆಂಬರ್‌ 1 ರಿಂದ 14 ರ ವರೆಗೆ ರೇಷನ್‌ ಕಾರ್ಡ್‌ ತಿದ್ದುಪಡಿಗೆ ರಾಜ್ಯ ಸರಕಾರ ಅವಕಾಶ ಕಾಲಾವಕಾಶವನ್ನು ನೀಡಿತ್ತು. ಈ ಸಮಯದಲ್ಲಿ ಬಹುತೇಕರು ರೇಷನ್‌ ಕಾರ್ಡ್‌ನಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಿಕೊಂಡಿದ್ದರು. ಅಂತಹವರ ಅರ್ಜಿಗಳು ಇದೀಗ ಪುರಸ್ಕೃತವಾಗಲಿದೆ.

ಮೊದಲ ಕಂತು ಇನ್ನೂ ತಲುಪದ ಗೃಹಿಣಿಯರು ಗೃಹಲಕ್ಷ್ಮೀ ಯೋಜನೆಗೆ ಅರ್ಹತೆ ಪಡೆದುಕೊಂಡಿದ್ರೆ, ಎರಡೂ ಕಂತುಗಳ ಹಣವೂ ಅವರ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ.

ಇದನ್ನೂ ಓದಿ : ಮದುವೆಯಾದ ಎಲ್ಲಾ ದಂಪತಿಗಳಿಗೆ ಸರಕಾರ ಕೊಡುತ್ತೆ 10 ಸಾವಿರ ರೂ. : ಈ ಯೋಜನೆ ನಿಮಗೆ ಗೊತ್ತಾ ?

ಒಂದೊಮ್ಮೆ ರೇಷನ್‌ ಕಾರ್ಡ್‌ನಲ್ಲಿ ಇರುವ ಲೋಪದದೋಷ ತಿದ್ದುಪಡಿ ಆಗದೇ ಇದ್ರೆ ಅಂತಹವರಿಗೆ ಗೃಹಲಕ್ಷ್ಮೀ ಯೋಜನೆಯ 2000 ರೂಪಾಯಿ ವರ್ಗಾವಣೆ ಆಗುವುದಿಲ್ಲ. ಇನ್ನು ಕೆಲವರು ಅತ್ತೆಯ ಹೆಸರನ್ನು ರೇಷನ್‌ ಕಾರ್ಡ್‌ನಿಂದ ತೆಗೆದು ಸೊಸೆಯ ಹೆಸರನ್ನು ಗೃಹಿಣಿಯ ಸ್ಥಾನದಲ್ಲಿ ಸೇರ್ಪಡೆ ಮಾಡಿದ್ದಾರೆ.

ಇನ್ನು ಹಲವರು ತಮ್ಮ ಕುಟುಂಬಕ್ಕೆ ಸೇರದೇ ಇರುವವರನ್ನು ರೇಷನ್‌ ಕಾರ್ಡ್‌ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಮೃತಪಟ್ಟಿದ್ದರೂ ಕೂಡ ಅವರ ಹೆಸರು ರೇಷನ್‌ ಕಾರ್ಡ್‌ನಲ್ಲಿ ಇರುವುದು ಖಚಿತವಾದ್ರೆ ಅಂತಹ ಗೃಹಿಣಿಯರಿಗೆ ಗೃಹಲಕ್ಷ್ಮೀ ಯೋಜನೆಯ 2ನೇ ಕಂತು 2000 ರೂಪಾಯಿ ಸಿಗೋದಿಲ್ಲ.

ಸರಕಾರದ ಯೋಜನೆಗಳನ್ನು ಪಡೆಯುವ ಸಲುವಾಗಿ ರೇಷನ್‌ ಕಾರ್ಡ್‌ನಲ್ಲಿ ಸುಳ್ಳು ಮಾಹಿತಿಯನ್ನು ನೀಡಿದ್ದರೆ, ಅಂತಹ ಖಾತೆದಾರರ ಖಾತೆಗಳಿಗೆ ಗೃಹಲಕ್ಷ್ಮೀ ಹಣ ವರ್ಗಾವಣೆ ಆಗೋದಿಲ್ಲ. ಜೊತೆಗೆ ಅಂತವರ ರೇಷನ್‌ ಕಾರ್ಡ್‌ ಕೂಡ ರದ್ದಾಗುವ ಸಾಧ್ಯತೆಯಿದೆ.

ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿಯೇ ಇದ್ದು, ಇನ್ನೂ ಗೃಹಲಕ್ಷ್ಮೀಯ ಹಣ ನಿಮ್ಮ ಖಾತೆಗೆ ಜಮೆ ಆಗಿಲ್ಲ ಅಂತಾದ್ರೆ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದಾಗಿದೆ. ಅಲ್ಲದೇ ಅಂಗನವಾಡಿ ಸಹಾಯಕರ ಸಹಕಾರವನ್ನು ಪಡೆಯಬಹುದು.

Karnataka These womens account not Credited Rs 2000 from the 2nd installment of Gruhalakshmi Yojana

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular