ಕುಂದಾಪುರದ ಕಾವೇರಿ ಮೋಟಾರ್ಸ್‌ನಲ್ಲಿ ಟಾಟಾ ನೆಕ್ಸಾನ್‌ ಇವಿ ಬಿಡುಗಡೆ : ಒಂದೇ ಚಾರ್ಜ್‌ 463 ಕಿ.ಮೀ. ಮೈಲೇಜ್‌

ಟಾಟಾ ಮೋಟಾರ್ಸ್‌ (Tata motors)  ನೆಕ್ಸಾನ್‌ ಕಾರು (Nexon Car) ಈಗಾಗಲೇ ಬಿಡುಗಡೆ ಆಗಿದೆ. ಇದೀಗ ಟಾಟಾ ನೆಕ್ಸಾನ್‌ ಇವಿ  (Nexon.ev) ಎಡಿಶನ್‌ ಕಳೆದ ವಾರವಷ್ಟೇ ಭಾರತದ ಮಾರುಕಟ್ಟೆಗೆ ರಿಲೀಸ್‌ ಆಗಿತ್ತು. ಸದ್ಯ ನೆಕ್ಸಾನ್‌ ಇವಿ ಕಾರು ಕಾವೇರಿ ಟಾಟಾ ಮೋಟಾರ್ಸ್‌ನ ಮೂಲಕ ಕುಂದಾಪುರದ (Kundapura ) ಗ್ರಾಹಕರ ಕೈ ಸೇರಿದೆ.

ಕುಂದಾಪುರ : ಭಾರತದಲ್ಲಿ ಗ್ರಾಹಕರಿಂದ ಅತೀ ಹೆಚ್ಚು ಬೇಡಿಕೆಯನ್ನು ಹೊಂದಿರುವ ಟಾಟಾ ಮೋಟಾರ್ಸ್‌ (Tata motors)  ನೆಕ್ಸಾನ್‌ ಕಾರು (Nexon Car) ಈಗಾಗಲೇ ಬಿಡುಗಡೆ ಆಗಿದೆ. ಇದೀಗ ಟಾಟಾ ನೆಕ್ಸಾನ್‌ ಇವಿ  (Nexon.ev) ಎಡಿಶನ್‌ ಕಳೆದ ವಾರವಷ್ಟೇ ಭಾರತದ ಮಾರುಕಟ್ಟೆಗೆ ರಿಲೀಸ್‌ ಆಗಿತ್ತು. ಸದ್ಯ ನೆಕ್ಸಾನ್‌ ಇವಿ ಕಾರು ಕಾವೇರಿ ಟಾಟಾ ಮೋಟಾರ್ಸ್‌ನ ಮೂಲಕ ಕುಂದಾಪುರದ (Kundapura ) ಗ್ರಾಹಕರ ಕೈ ಸೇರಿದೆ.

Nexon EV launched at Cauvery Motors Kundapur 463 km Milege on a single charge
Image Credit : Vijay Vaddarse

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ (ಹಂಗಳೂರು) ಇರುವ ಕಾವೇರಿ ಟಾಟಾ ಮೋಟಾರ್ಸ್‌ನಲ್ಲಿ (cauvery motors kundapura) ಟಾಟಾ ನೆಕ್ಸಾನ್‌ ಇವಿ ಕಾರು ಬಿಡುಗಡೆಗೊಂಡಿದೆ. ಮಾಜಿ ಶಾಸಕ ಅಪ್ಪಣ್ಣ ಹೆಗ್ಗಡೆ (Appanna Heggade)  ಅವರು ಈ ಕಾರನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಗ್ರಾಹಕರಿಗೆ ಕೀಲಿ ಕೈ ಹಸ್ತಾಂತರ ಮಾಡಿದ್ದಾರೆ.

Nexon EV launched at Cauvery Motors Kundapur 463 km Milege on a single charge
Image Credit : Vijay Vaddarse

ಕಾವೇರಿ ಟಾಟಾ ಕುಂದಾಪುರ ಶಾಖೆಯಲ್ಲಿ ಟಾಟಾ ನೆಕ್ಸಾನ್‌ ಕಾರು ಖರೀದಿ ಮಾಡಿರುವ ಗ್ರಾಹಕರಾದ ರಕ್ಷತ್‌, ರಾಜೇಶ್‌, ಶ್ರೀನಿವಾಸ ಉಳ್ಳೂರು, ತುಕಾರಾಮ್‌ ಶಾನುಭಾಗ್‌, ಶಶಿಧರ್‌, ಭಾಸ್ಕರ ಗಾಣಿಗ, ಮಂಜೇಶ್‌ ಶೆಟ್ಟಿ ಅವರಿಗೆ ಅಪ್ಪಣ್ಣ ಹೆಗ್ಗಡೆ, ಕೃಷ್ಣ ಪ್ರಸಾದ್‌ ಅಡ್ಯಂತಾಯ ಮತ್ತು ಅಶೋಕ್‌ ಶೆಟ್ಟಿ ಅವರು ಕಾರಿನ ಕೀಲಿ ಕೈ ಹಸ್ತಾಂತರಿಸಿದ್ದಾರೆ.

Nexon EV launched at Cauvery Motors Kundapur 463 km Milege on a single charge
Image Credit : Vijay Vaddarse

ಇದನ್ನೂ ಓದಿ : Tata Nexon Facelift : ಕೇವಲ 8.10 ಲಕ್ಷಕ್ಕೆ ಬಿಡುಗಡೆ ಆಯ್ತು ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್

ಈ ವೇಳೆ ಮಾತನಾಡಿದ ಕೌಶಿಕ್‌ ಅವರು, ಕಾವೇರಿ ಮೋಟಾರ್ಸ್‌ ಕಳೆದ 28 ವರ್ಷಗಳಿಂದಲೂ ಆಟೋ ಮೊಟಿವ್‌ ಇಂಡಸ್ಟ್ರೀಯಲ್ಲಿ (Auto Motive Industry)  ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ರಾಜ್ಯದಲ್ಲಿ ಒಟ್ಟು 9 ಕಾವೇರಿ ಟಾಟಾ ಶೋರೂಂ (9 Cauvery Tata Car Showroom) ಹೊಂದಿದೆ. ಸದ್ಯ 1000 ಕ್ಕೂ ಅಧಿಕ ಉದ್ಯೋಗಿಗಳು ಗ್ರಾಹಕರಿಗೆ ಸಂತೃಪ್ತಿಯ ಸೇವೆಯನ್ನು ನೀಡುತ್ತಿದ್ದಾರೆ ಎಂದಿದ್ದಾರೆ.

Nexon EV launched at Cauvery Motors Kundapur 463 km Milege on a single charge
Image Credit : Vijay Vaddarse

ಟಾಟಾ ನೆಕ್ಸಾನ್‌ ಕಾರು 2017ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಕೇವಲ ಒಂದೇ ವರ್ಷದ ಅವಧಿಯಲ್ಲಿ ಟಾಟಾ ನೆಕ್ಸಾನ್‌ ಕಾರು ಗ್ಲೋಬಲ್‌ ಎನ್‌ಸಿಎಪಿ 5 ಸ್ಟಾರ್‌ ರೇಟಿಂಗ್‌ (Global NCAP 5Star Rating) ಪಡೆದುಕೊಂಡಿತ್ತು. 2019 ರಲ್ಲಿ ಒಂದು ಲಕ್ಷಕ್ಕೂ ಅಧಿಕ ಟಾಟಾ ನೆಕ್ಸಾನ್‌ ಕಾರುಗಳು ಮಾರಾಟವಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿತ್ತು.

Nexon EV launched at Cauvery Motors Kundapur 463 km Milege on a single charge
Image Credit : Vijay Vaddarse

2020ರಲ್ಲಿ ಟಾಟಾ ನೆಕ್ಸಾನ್‌ ಪೇಸ್‌ ಲಿಫ್ಟ್‌ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಕೇವಲ ಒಂದೇ ಒಂದು ವರ್ಷದಲ್ಲಿ ಟಾಟಾ ನೆಕ್ಸಾನ್‌ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿತ್ತು. ಒಂದೇ ವರ್ಷದಲ್ಲಿ ಬರೋಬ್ಬರಿ 2 ಲಕ್ಷ ಕಾರುಗಳು ಮಾರಾಟವಾಗಿದ್ದವು.

Nexon EV launched at Cauvery Motors Kundapur 463 km Milege on a single charge
Image Credit : Tata

ಇನ್ನು 2022 ರಲ್ಲಿ ನೆಕ್ಸಾನ್‌ ಕಾರು ಬರೋಬ್ಬರಿ 3 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಟಾ ಮೋಟಾರ್ಸ್‌ ಹೊಸ ದಾಖಲೆಯನ್ನು ಬರೆದಿತ್ತು. ಅಲ್ಲದೇ ಭಾರತದ ನಂ.1 ಎಸ್‌ಯುವಿ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್‌ ಪಾತ್ರವಾಗಿತ್ತು.

Nexon EV launched at Cauvery Motors Kundapur 463 km Milege on a single charge
Image Credit : Vijay Vaddarse

2022ರ ಸೆಪ್ಟೆಂಬರ್‌ ತಿಂಗಳಲ್ಲಿ 4 ಲಕ್ಷ ನೆಕ್ಸಾನ್‌ ಕಾರುಗಳು ಮಾರಾಟ ಆಗಿದ್ದರೆ, ಎಪ್ರೀಲ್‌ ತಿಂಗಳಿನಲ್ಲಿ ಬರೋಬ್ಬರಿ 5 ಲಕ್ಷ ಕಾರುಗಳು ಮಾರಾಟವಾಗಿ ಹೊಸ ದಾಖಲೆಯನ್ನೇ ಬರೆದಿದೆ.

ಅದ್ಬುತ ಮೈಲೆಜ್‌, ಅತ್ಯದ್ಬುತ ಫೀಚರ್ಸ್‌‌ ಟಾಟಾ ನೆಕ್ಸಾನ್ ಇವಿ :

ಹೊಸ ಟಾಟಾ ನೆಕ್ಸಾನ್‌ ಪೇಸ್‌ ಲಿಫ್ಟ್‌ ಜೊತೆಗೆ ಟಾಟಾ ಮೋಟಾರ್ಸ್‌ ಮಾರುಕಟ್ಟೆ ಟಾಟಾ ನೆಕ್ಸಾನ್ ಇವಿ ಕಾರನ್ನು ಬಿಡುಗಡೆ ಮಾಡಿದೆ. ಹೊಸ ಟಾಟಾ ನೆಕ್ಸಾನ್‌ ಕಾರಿನಲ್ಲಿ ಹಲವಾರು ವಿಶಿಷ್ಠ ಫೀಚರ್ಸ್‌ಗಳನ್ನು ನೀಡಲಾಗಿದೆ.

Nexon EV launched at Cauvery Motors Kundapur 463 km Milege on a single charge
Image Credit : Tata

ನೆಕ್ಸಾನ್‌ ಇವಿ ಕಾರಿನಲ್ಲಿ ಅದ್ವುತವಾಗಿರುವ ಚಾರ್ಜಿಂಗ್‌ ವ್ಯವಸ್ಥೆಯ ಆಯ್ಕೆಯನ್ನು ನೀಡಲಾಗಿದೆ. ಟಾಟಾ ನೆಕ್ಸಾನ್ ಇವಿ ಕಾರು 14.74 ಲಕ್ಷ ರೂ. (ಎಕ್ಸ್‌ ಶೋರೂಂ) ಬೆಲೆಯಿಂದ ಪ್ರಾರಂಭವಾಗಿ 19.94 ಲಕ್ಷ ರೂಪಾಯಿ (ಎಕ್ಸ್‌ ಶೋರೂಂ) ಬೆಲೆಯ ವರೆಗೆ ಲಭ್ಯವಿದೆ.

ಇದನ್ನೂ ಓದಿ : Tata Punch ICNG : 7.10 ರೂ ಲಕ್ಷಕ್ಕೆ ಮಾರುಕಟ್ಟೆಗೆ ಬಂತು ಟಾಟಾ ಪಂಚ್ CNG : ಎಲೆಕ್ಟ್ರಿಕ್‌ ಸನ್‌ರೂಫ್‌ ಜೊತೆಯಲ್ಲಿದೆ ಹಲವು ವೈಶಿಷ್ಟ್ಯ

ಕಾರಿನ ಇಂಟಿರೀಯರ್‌ ನಿಜಕ್ಕೂ ಅತ್ಯದ್ವುತ. ಹೊಸ ವಿನ್ಯಾಸದ ಡ್ಯಾಶ್‌ಬೋರ್ಡ್‌, ಗ್ರಾಹಕರಿಗೆ ಇಷ್ಟವಾಗುವ ಟು -ಸ್ಪೋಕ್‌ ಸ್ಟೀರಿಂಗ್‌ ವೀಲ್‌, ದೊಡ್ಡ ಡಿಸ್ಪ್ಲೆ ಅಳವಡಿಸಲಾಗಿದೆ. ಇನ್ನು ನೆಕ್ಸಾನ್‌ ಕಾರು ಸದ್ಯ ಅತೀ ಹೆಚ್ಚು ಶ್ರೇಣಿಗಳನ್ನು ಹೊಂದಿದ್ದು, ಆರು ವಿಭಿನ್ನ ವೇರಿಯಂಟ್‌ಗಳಲ್ಲಿ ಬಿಡುಗಡೆ ಗೊಳಿಸಲಾಗಿದೆ.

Nexon EV launched at Cauvery Motors Kundapur 463 km Milege on a single charge
Image Credit : Tata

ಇನ್ನು ಗ್ರಾಹಕರ ಅನುಕೂಲಕ್ಕಾಗಿ ಆಟೋ ಹೋಲ್ಡಿಂಗ್‌ ಜೊತೆಗೆ ಎಲೆಕ್ಟ್ರಾನಿಕ್‌ ಪಾರ್ಕಿಂಗ್‌ ಬ್ರೇಕ್‌, 360° ಕ್ಯಾಮೆರಾ, ಜೊತೆಗೆ ಗ್ರಾಹಕರ ಸೇಫ್ಟಿಗಾಗಿ 6 ಏರ್‌ಬ್ಯಾಗ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸದ್ಯ ನೆಕ್ಸಾನ್‌ ಇವಿ ಕಾರಿನಲ್ಲಿ 20 ಮತ್ತು ಬ್ಯಾಟರಿ ಪ್ಯಾಕ್‌ ಒಳಗೊಂಡಿದ್ದು, 20 ನಲ್ಲಿ ಒಂದೇ ಚಾರ್ಜ್‌ನಲ್ಲಿ 325 ಕಿ.ಮೀ. ಹಾಗೂ 40.5 ಇದರಲ್ಲಿ 463 ಕಿ.ಮೀ. ಮೈಲೇಜ್‌ ನೀಡುವ ಸಾಮರ್ಥ್ಯವನ್ನು ಒಳಗೊಂಡಿದೆ.

Nexon EV launched at Cauvery Motors Kundapur 463 km Milege on a single charge
Image Credit : Tata

ಟಾಟಾ ನೆಕ್ಸಾನ್‌ ಇದೇ ಮೊದಲ ಬಾರಿಗೆ V2V ಚಾರ್ಜಿಂಗ್‌ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ. ಈ ಸೌಲಭ್ಯವು ಕಾರುಗಳನ್ನು ಬೇಗ ಚಾರ್ಜಿಂಗ್‌ ಮಾಡಲು ಸಹಕಾರಿಯಾಗಿ ಇರಲಿದೆ. ಜೊತೆಗೆ V2L ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಪವರ್‌ ಬ್ಯಾಂಕ್‌ ಆಗಿಯೂ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾವೇರಿ ಟಾಟಾ ಮೋಟಾರ್ಸ್‌ ಶೋ ರೂಂಗಳಿಗೆ ಖುದ್ದು ಭೇಟಿ ನೀಡಬಹುದು. ಅಥವಾ ಕಾವೇರಿ ಟಾಟಾ ಮೋಟಾರ್ಸ್‌ ಕುಂದಾಪುರ ಶಾಖೆಯನ್ನು ( 9606025181 )  ಸಂಪರ್ಕಿಸಬಹುದಾಗಿದೆ.

Nexon EV launched at Cauvery Motors Kundapur463 km Milege on a single charge

Comments are closed.