LIC IPO ಮೇ 4 ರಂದು ಆರಂಭ ! ಪಾಲಿಸಿಹೋಲ್ಡರ್‌ಗಳು LIC IPO ಷೇರ್‌ಗಳನ್ನು ಖರೀದಿಸುವುದು ಹೇಗೆ?

ದಲಾಲ್‌ ಸ್ಟ್ರೀಟ್‌ನಲ್ಲಿ LIC IPO ಮೇ 4 ರಂದು (ಇಂದು) ಪ್ರಾರಂಭವಾಗುವುದರೊಂದಿಗೆ ಕಾಯುವಿಕೆ ಬಹುತೇಕ ಮುಗಿದಿದೆ. ಭಾರತದ ಅತಿ ದೊಡ್ಡ ವಿಮಾ ಕಂಪನಿ ಲೈಫ್‌ ಇನ್ಶುರೆನ್ಸ್‌ ಕಾರ್ಪೋರೇಷನ್‌(ಎಲ್‌ಐಸಿ) ಯ ಬಹು ನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಇಂದು (ಮೇ 4) ಸಾರ್ವಜನಿಕರಿಗೆ ಪ್ರಾರಂಭವಾಗಲಿದೆ. ಆಂಕರ್‌ ಇನ್ವೆಸ್ಟಿಂಗ್‌ ಆಪ್ಷನ್‌ ಈಗಾಗಲೇ ಅಂದರೆ ಮೇ 2 ರಿಂದ ಆರಂಭವಾಗಿದ್ದು, ಬಲವಾದ ಬೇಡಿಕೆಯೊಂದಿಗೆ ಓವರ್‌ಸ್ಬ್‌ಸ್ಕ್ರೈಬ್‌ ಆಗಿದೆ. ಇದೇ ವೇಳೆಯಲ್ಲಿ, LIC IPO ದ ಮುಖ್ಯ ಭಾಗವು ಇಂದು ತೆರೆಯಲಿದೆ. ಎಲ್ಲಾ ವರ್ಗದ ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡಲು ಎದುರು ನೋಡುತ್ತಿದ್ದಾರೆ. ಕಂಪನಿಯು ಮೊದಲ ಬಾರಿಗೆ ಪಾಲಿಸಿದಾರರಿಗೆ ಪ್ರತ್ಯೇಕ ಕೋಟಾವನ್ನು ಇರಿಸಿದೆ. ಅರ್ಹ ವ್ಯಕ್ತಿಗಳು LIC ಷೇರುಗಳನ್ನು ಖರೀದಿಸುವಾಗ ಶೇಕಡಾ 10 ರಷ್ಟು ಕಾಯ್ದಿರಿಸಿದ ಭಾಗವನ್ನು ಮತ್ತು ರಿಯಾಯಿತಿಯನ್ನು ಪಡೆಯುಬಹುದಾಗಿದೆ.

LIC IPO ಓಪನ್‌ ಆಗುವುದು ಯಾವಾಗ?

ಮೆಗಾ LIC IPO ಸಬ್‌ಸ್ಕ್ರಿಪ್ಷನ್‌ ಇದೇ ಮೇ 4 ಬುಧವಾರ ದಂದು ಪ್ರಾರಂಭವಾಗುವುದು. ಆಂಕರ್‌ ಇನ್ವೆಸ್ಟರ್‌ಗಳು ಈಗಾಗಲೇ ಬುಕ್‌ ಮಾಡಿದ್ದು, ರೂಪಾಯಿ 7,000 ಕೋಟಿಗೂ ಹೆಚ್ಚು ಬಿಡ್‌ಗಳೊಂದಿಗೆ ಓವರ್‌ಸಬ್‌ಸ್ಕ್ರೈಬ್‌ ಆಗಿದೆ. ಮೇ 2 ರಂದೇ ಆಂಕರ್‌ ಬುಕಿಂಗ್‌ ತೆರೆಯಲಾಗಿತ್ತು. LIC IPO ದ ಬಿಡ್ಡಿಂಗ್‌ ಮೇ 9 ರವರೆಗೆ ತೆರೆದಿರುತ್ತದೆ.

LIC IPO ಗೆ ಅಪ್ಲೈ ಮಾಡುವುದು ಹೇಗೆ?

ಹೂಡಿಕೆದಾರರು ಮತ್ತು ಪಾಲಿಸಿ ಹೊಲ್ಡರ್‌ಗಳು LIC IPO ಗೆ ಅಪ್ಲೈ ಮಾಡಲು ಡಿಮ್ಯಾಟ್‌ ಖಾತೆ ಹೊಂದಿರಬೇಕು. ಡಿಮ್ಯಾಟ್‌ ಖಾತೆ ತೆರೆಯಲು ವಿವಿಧ ಬ್ರೋಕರೇಜ್‌ ಆಪ್‌ ಗಳಾದ ಝಿರೋಧಾ, ಜಿಯೋಜಿತ್‌, ಉಪ್‌ಸ್ಟಾಕ್‌ ಮುಂತಾದವುಗಳನ್ನು ಬಳಸಿಕೊಳ್ಳಬಹುದಾಗಿದೆ.

  • LIC IPO ದಲ್ಲಿ ಬಿಡ್‌ ಮಾಡಲು ಮೊದಲು ನಿಮ್ಮ ಡಿಮ್ಯಾಟ್‌ ಅಕೌಂಟ್‌ ತೆರೆಯಿರಿ.
  • ಒಮ್ಮೆ ತೆರೆದ ನಂತರ IPOದಲ್ಲಿ ಪಾಲ್ಗೊಳ್ಳುವವರು ತಮ್ಮ ಪ್ರೋಫೈಲ್‌ಗೆ ಭೇಟಿ ನೀಡಿ. ಈ ನ್ಯಾವಿಗೇಷನ್‌ ಪ್ರಕ್ರಿಯೆಯು ಪ್ಲಾಟ್‌ಫಾರ್ಮ ನಿಂದ ಫ್ಲಾಟ್‌ಫಾರ್ಮ್‌ಗೆ ಬದಲಾಗಬಹುದು.
  • ಈಗ LIC IPO ಟಾಬ್‌ ಅನ್ನು ಆಯ್ದುಕೊಳ್ಳಿ. ಅದರಲ್ಲಿ ಇನ್ವೆಸ್ಟರ್‌ ಟೈಪ್‌ಗೆ ಹೋಗಿ. ಒಂದು ವೇಳೆ ನೀವು ಪಾಲಿಸಿಹೋಲ್ಡರ್‌ ನಲ್ಲಿ ಅಪ್ಲೈ ಮಾಡುವುದಾದರೆ ಅದನ್ನೇ ಆಯ್ದು ಕೊಳ್ಳಿ.
    ಅದಕ್ಕಾಗಿ ಅಗತ್ಯ ಬ್ಯಾಂಕ್‌ ಮಾಹಿತಿಗಳನ್ನು ಒದಗಿಸಿ. ಇಲ್ಲವಾದಲ್ಲಿ ಇಂಡಿವಿಜ್ಯವಲ್‌ ಇನ್ವೆಸ್ಟರ್‌ ಆಯ್ದುಕೊಳ್ಳಬಹುದು.
  • ಇದಾದ ನಂತರ ಬಿಡ್‌ ಪ್ರೈಸ್‌ ಮತ್ತು ಖರೀದಿಸ ಬೇಕೆಂದಿರುವ ಷೇರ್‌ಗಳನ್ನು ಸಂಖ್ಯೆಯನ್ನು ನಮೂದಿಸಿ.
  • ಟರ್ಮ್ಸ್‌ ಮತ್ತು ಕಂಡೀಷನ್‌ಗಳನ್ನು ಸರಿಯಾಗಿ ಓದಿ, ನಂತರ ಸಬ್ಮಿಟ್‌ ಅಥವಾ ಅಪ್ಲೈ ಮೇಲೆ ಕ್ಲಿಕ್ಕಿಸಿ.
  • ನಂತರ UPI ಮೂಲಕ ಹಣ ಪಾವತಿಸಿ. ನೀವು UPI ಅಥವಾ ಬೇರೆ ಯಾವುದೇ ರೀತಿಯ ಪೇಮೆಂಟ್‌ ಆಪ್ಷನ್‌ಗಳನ್ನು LIC IPO ಷೇರ್‌ ಖರೀದಿಸಲು ಬಳಸಬಹುದು.

LIC IPO ಲಿಸ್ಟಿಂಗ್‌ ದಿನಾಂಕ ಯಾವುದು?
BSE ಮತ್ತು NSE ಇವೆರಡರಲ್ಲೂ LIC IPO ದ ಲಿಸ್ಟಿಂಗ್‌ ದಿನಾಂಕವು ಮೇ 17, 2022 ಆಗಿದೆ.

ಇದನ್ನೂ ಓದಿ :Demat Account LIC IPO: ಡಿಮ್ಯಾಟ್ ಖಾತೆ ಎಂದರೇನು? LIC IPOದಲ್ಲಿ ಹೂಡಿಕೆ ಮಾಡಲು ಮೊಬೈಲ್‌ನಲ್ಲೇ ಡಿಮ್ಯಾಟ್ ಅಕೌಂಟ್ ತೆರೆಯುವುದು ಹೇಗೆ?

ಇದನ್ನೂ ಓದಿ :LIC IPO Policy Holders: ಎಲ್‌ಐಸಿ ಪಾಲಿಸಿ ಇದ್ದರೆ ರಿಯಾಯಿತಿ ದರದಲ್ಲಿ ಸಿಗಲಿದೆಯೇ ಎಲ್‌ಐಸಿ ಐಪಿಒ

(LIC IPO How to apply for lic ipo as a policyholder)

Comments are closed.