LIC Policy : ಎಲ್‌ಐಸಿಯ ಈ ಪಾಲಿಸಿ ಮಾಡಿ; ತಿಂಗಳಿಗೆ 12,000 ರೂಪಾಯಿ ಪೆನ್ಷನ್‌ ಪಡೆಯಿರಿ

ಭಾರತೀಯ ಜೀವ ವಿಮಾ ನಿಗಮ (LIC) ಅನೇಕ ವಿಮಾ ಪಾಲಿಸಿ (LIC Policy) ಆಯ್ಕೆಗಳನ್ನು ನೀಡಿದೆ. ಇದು ನಿರ್ದಿಷ್ಟ ಗುಂಪಿನ ವ್ಯಕ್ತಿಗಳಿಗೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿದೆ. ಎರಡು ವರ್ಷಗಳ ಹಿಂದೆ ಕೋವಿಡ್‌–19 ಸಾಂಕ್ರಾಮಿಕ ರೋಗವು ಭಾರತಕ್ಕೆ ನೀಡಿದ ಹೊಡೆತದ ನಂತರ ವಿಮಾ ಯೋಜನೆಗಳ ಅಗತ್ಯ ಹೆಚ್ಚಿದೆ. ಬಿಕ್ಕಟ್ಟಿನ ಸಮಯದಲ್ಲಿ ಆರ್ಥಿಕ ಸ್ಥಿರತೆಯು ನಮ್ಮ ಬೆನ್ನೆಲುಬಾಗಿ ನಿಲ್ಲಿವುದಕ್ಕೆ ವಿಮಾ ಪಾಲಿಸಿಗಳು ಸಹಾಯಕವಾಗುತ್ತವೆ ಎಂದು ಜನರು ಅರಿತುಕೊಂಡಿದ್ದಾರೆ.

ಕುಟುಂಬದ ಆರ್ಥಿಕ ಭದ್ರತೆಯ ವಿಷಯ ಬಂದಾಗ ಎಲ್‌ಐಸಿಯ ಜೀವನ್‌ ಸರಳ್‌ ಯೋಜನೆಯು ಸುರಕ್ಷಿತ ಆಯ್ಕೆಯಾಗಿದೆ. ಈ ಯೋಜನೆಗೆ 40 ರಿಂದ 80 ವರ್ಷದೊಳಗಿನವರು ಅರ್ಹರಾಗಿರುತ್ತಾರೆ. ಇದರಲ್ಲಿ ವಿಮಾ ಖರೀದಿದಾರರು ಪ್ರೀಮಿಯಂಗಳನ್ನು ಪಾವತಿಸುವ ಮೊತ್ತ ಮತ್ತು ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಎಲ್‌ಐಸಿ ಜೀವನ್ ಸರಳ್ ಯೋಜನೆಯು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ಮಾರ್ಗಸೂಚಿಗಳ ಪ್ರಕಾರ ಪ್ರಮಾಣಿತ ತಕ್ಷಣದ ವರ್ಷಾಶನ ಯೋಜನೆಯಾಗಿದೆ. ಇದು ಎಲ್ಲಾ ಲೈಫ್‌ ಇನ್ಶುರೆನ್ಸ್‌ ಗಳಿಗೂ ಒಂದೇ ರೀತಿಯ ನಿಯಮಗಳು ಮತ್ತು ಷರತ್ತುಗಳನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ, ಪಾಲಿಸಿದಾರರು ಒಟ್ಟು ಮೊತ್ತದ ಪಾವತಿಯ ಮೇಲೆ ಲಭ್ಯವಿರುವ ಎರಡು ಆಯ್ಕೆಗಳಿಂದ ವರ್ಷಾಶನದ ಪ್ರಕಾರವನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.

ಇದನ್ನೂ ಓದಿ : Karnataka Police Recruitment 2022: ಕರ್ನಾಟಕ ಪೊಲೀಸ್ ನೇಮಕಾತಿ 2022: ಶೀಘ್ರದಲ್ಲೇ 5000 ಪೊಲೀಸ್ ಹುದ್ದೆಗಳಿಗೆ ಅಧಿಸೂಚನೆ

ವರ್ಷಾಶನ ದರಗಳನ್ನು ಪಾಲಿಸಿಯ ಪ್ರಾರಂಭದಲ್ಲಿ ಖಾತರಿಪಡಿಸಲಾಗುತ್ತದೆ ಮತ್ತು ವರ್ಷಾಶನವನ್ನು ವರ್ಷಾಶನದಾರರ (ಗಳ) ಜೀವಿತಾವಧಿಯಲ್ಲಿ ಪಾವತಿಸಲಾಗುತ್ತದೆ. ಈ ಯೋಜನೆಯನ್ನು ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್‌ನಲ್ಲಿ LIC ಯ ವೆಬ್‌ಸೈಟ್ www.licindia.in ಮೂಲಕ ಖರೀದಿಸಬಹುದು ಎಂದು LIC ತಿಳಿಸಿದೆ.

ಎಲ್ಐಸಿ ಸರಳ್ ಪಿಂಚಣಿ ಯೋಜನೆಯು ಹೂಡಿಕೆದಾರರಿಗೆ ಕೇವಲ ಒಂದೇ ಪ್ರೀಮಿಯಂ ಪಾವತಿಸುವ ಮೂಲಕ ಪ್ರತಿ ತಿಂಗಳು 12,000 ರೂ. ಪಿಂಚಣಿ ಪಡೆಯಬಹುದಾಗಿದೆ. ಈ ಯೋಜನೆಯಡಿಯಲ್ಲಿ ಪಾಲಿಸಿದಾರರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಪಿಂಚಣಿಯನ್ನು ಆರಿಸಿಕೊಳ್ಳಬಹುದು. ಪಾಲಿಸಿದಾರ ಅಥವಾ ನಾಮಿನಿಗೆ 60 ವರ್ಷ ತುಂಬಿದ ನಂತರ ಪಿಂಚಣಿ ಲಭ್ಯವಾಗುತ್ತದೆ.

LIC ಸರಳ್ ಪಿಂಚಣಿ ಯೋಜನೆಯು ಗ್ರಾಹಕರಿಗೆ ಬಹು ಪ್ರೀಮಿಯಂ ಅಂದರೆ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ಪ್ರೀಮಿಯಂ ಮೊತ್ತವನ್ನು ಪಾಲಿಸಿ ಅವಧಿಯ ಉದ್ದಕ್ಕೂ ಅಥವಾ ಅಕಾಲಿಕ ಮರಣದವರೆಗೆ ಸಂಬಳದಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.

ಪಾಲಿಸಿದಾರರು ಯೋಜನೆ ಪ್ರಾರಂಭವಾದ 6 ತಿಂಗಳ ನಂತರ ಅದರ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು ಎಂಬುದು ಗಮನಿಸಬೇಕಾದ ವಿಷಯವಾಗಿದೆ.

ಇದನ್ನೂ ಓದಿ : Music Therapy : ಸಂಗೀತದಿಂದ ಸ್ವಾಸ್ಥ್ಯ : ಸಾಮಾನ್ಯ ಮಾನಸಿಕ ಆರೋಗ್ಯ ಸುಧಾರಣೆಗೆ ಇದು ಬಹಳ ಮುಖ್ಯ

LIC Policy, Saral Pension Yojana gives you 12000 rs monthly pension

Comments are closed.