LPG Cylinder Price : ಎಲ್‌ಪಿಜಿ ಗ್ರಾಹಕರಿಗೆ ಗುಡ್‌ನ್ಯೂಸ್‌ : ಸರಕಾರದ ಈ ಯೋಜನೆಯಡಿ ಅರ್ಧ ದರದಲ್ಲಿ 14.2 ಕೆಜಿ ಸಿಲಿಂಡರ್ ಲಭ್ಯ

ನವದೆಹಲಿ : ಎಲ್‌ಪಿಜಿ ಗ್ರಾಹಕರಿಗೆ ಗುಡ್‌ನ್ಯೂಸ್‌. ಇದೀಗ ಎಲ್‌ಪಿಜಿ ಸಿಲಿಂಡರ್‌ನ್ನು (LPG Cylinder Price) ಬಳಸುವ ಸಾಮಾನ್ಯ ಜನರಿಗೆ ಈ ಸುದ್ದಿಯಿಂದ ದೊಡ್ಡ ರಿಲೀಫ್‌ ಸಿಕ್ಕಂತೆ ಆಗುತ್ತದೆ. ಇದೀಗ ಎಲ್‌ಪಿಜಿ ಗ್ರಾಹಕರಿಗೆ ಅರ್ಧದಷ್ಟು ದರದಲ್ಲಿ 14.2 ಕೆಜಿ ಸಿಲಿಂಡರ್ ಸಿಗುತ್ತದೆ. ಇದ್ದರಿಂದಾಗಿ ದಿನಿನಿತ್ಯ ಜೀವನದ ಅಗತ್ಯ ಬೇಡಿಕೆಯಲ್ಲಿ ಎಲ್‌ಪಿಜಿ ಬಳಕೆದಾರರಿಗೆ ದೊಡ್ಡ ಪರಿಹಾರ ಸಿಕ್ಕಂತೆ ಆಗುತ್ತದೆ.

ಅಡುಗೆ ಅನಿಲದ ಬೆಲೆ ಏರಿಕೆಯಿಂದಾಗಿ ಜನರು ಹಣದುಬ್ಬರವನ್ನು ಎದುರಿಸಬೇಕಾಗಿದೆ. ಇದೀಗ ಎಲ್‌ಪಿಜಿ ಸಿಲಿಂಡರ್‌ ಬೆಲೆ 1 ಸಾವಿರ ರೂಪಾಯಿಗೂ ಹೆಚ್ಚು ಬೆಲೆ ನೀಡಿ ತೆಗೆದುಕೊಳ್ಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಅಡುಗೆ ಅನಿಲದ ಬೆಲೆ ಇಳಿಕೆಯಿಂದಾಗಿ ತುಸು ನೆಮ್ಮದಿ ಸಿಕ್ಕಂತೆ ಆಗಿದೆ. ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಬೆಲೆ 1053 ರೂ., ಮುಂಬೈನಲ್ಲಿ 1052.50 ರೂ. ಮತ್ತು ಕೋಲ್ಕತ್ತಾದಲ್ಲಿ 1079 ರೂ. ಆದರೆ, ಇದೀಗ ನೀವು ಈ ಎಲ್‌ಪಿಜಿಯ ದುಬಾರಿ ಬೆಲೆಯನ್ನು ತಪ್ಪಿಸಬಹುದು.

ನೀವು ಕೇವಲ ರೂ.500 ಕ್ಕೆ ಅಡುಗೆ ಅನಿಲ ಸಿಲಿಂಡರ್‌ನ ಪ್ರಯೋಜನವನ್ನು ಪಡೆಯಬಹುದು. ಸರಕಾರದ ಯೋಜನೆಯಡಿ ಈ ಪ್ರಯೋಜನವನ್ನು ನಿಮಗೆ ನೀಡಲಾಗುವುದು. ಆದರೆ, ಈ ಪ್ರಯೋಜನವನ್ನು ಅದರ ಅಡಿಯಲ್ಲಿ ಅರ್ಹರಾದ ಜನರಿಗೆ ಮಾತ್ರ ನೀಡಲಾಗುತ್ತದೆ. ಈ ಯೋಜನೆಯಡಿ ನೀವು 500 ರೂ.ಗೆ ಸಿಲಿಂಡರ್ ಅನ್ನು ಹೇಗೆ ಪಡೆಯಬಹುದು ಮತ್ತು ಅದರ ಪ್ರಯೋಜನವನ್ನು ಯಾರಿಗೆ ನೀಡಲಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ಉಜ್ವಲಾ ಯೋಜನೆ ಅಡಿಯಲ್ಲಿ 76 ಲಕ್ಷ ಕುಟುಂಬಗಳಿಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲಾಗುತ್ತದೆ. ಈ ಘೋಷಣೆಯನ್ನು ರಾಜಸ್ಥಾನ ಸರಕಾರವು ತನ್ನ ಪ್ರಸ್ತುತ ಅವಧಿಯ ಬಜೆಟ್‌ನಲ್ಲಿ ಮಾಡಿದೆ. 2023-24ರ ಬಜೆಟ್ ಭಾಷಣದಲ್ಲಿ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. 2022 ರಲ್ಲಿಯೇ, ಗೆಹ್ಲೋಟ್ ಸರಕಾರವು ಬಡತನ ರೇಖೆಗಿಂತ ಕೆಳಗಿರುವ ಜನರು (ಬಿಪಿಎಲ್) ಒಂದು ವರ್ಷದಲ್ಲಿ 500 ರೂ ದರದಲ್ಲಿ 12 ಸಿಲಿಂಡರ್ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸೂಚಿಸಿತ್ತು.

ಇದನ್ನೂ ಓದಿ : Aadhaar Mitra : ಯುಐಡಿಎಐನಿಂದ ಆಧಾರ್ ಮಿತ್ರ ಪ್ರಾರಂಭ : ಆಧಾರ್ ಕಾರ್ಡ್ ಸ್ಥಿತಿ, ದೂರುಗಳನ್ನು ನೋಂದಾಯಿಸುವುದು ಹೇಗೆ ಗೊತ್ತಾ ?

ಇದನ್ನೂ ಓದಿ : Payrm LIC Premium : ಎಲ್‌ಐಸಿ ವಿಮಾ ಪ್ರೀಮಿಯಂನ್ನು ಪೇಟಿಎಂ ಮೂಲಕ ಪಾವತಿಸಲು ಬಯಸುವಿರಾ? ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

ಇದನ್ನೂ ಓದಿ : ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳನ್ನು ಮಾರಾಟ ಮಾಡುತ್ತಿದ್ದು ಈ 4 ಕಾರಣಕ್ಕೆ

ನೀವು ರಾಜಸ್ಥಾನ ರಾಜ್ಯದ ನಿವಾಸಿಯಾಗಿದ್ದರೆ ಮತ್ತು ನೀವು ಬಡತನ ರೇಖೆಗಿಂತ ಕೆಳಗಿದ್ದರೆ BPL ವರ್ಗದಲ್ಲಿ ಬಂದರೆ ನಿಮಗೆ LPG ಸಿಲಿಂಡರ್‌ನಲ್ಲಿ ಈ ಪ್ರಯೋಜನವನ್ನು ನೀಡಲಾಗುತ್ತದೆ. ಬೇರೆ ರಾಜ್ಯದ ನಾಗರಿಕರು ರಾಜಸ್ಥಾನದಲ್ಲಿ ವಾಸಿಸುತ್ತಿದ್ದರೆ, ಅವರಿಗೆ ಈ ಯೋಜನೆಯಡಿ ಪ್ರಯೋಜನವನ್ನು ನೀಡಲಾಗುವುದಿಲ್ಲ. ದಾಖಲೆಗಳ ಪರಿಶೀಲನೆಯ ನಂತರವೇ ಪ್ರಯೋಜನಗಳನ್ನು ನೀಡಲಾಗುವುದು.

LPG Cylinder Price: Good news for LPG consumers: 14.2 kg cylinder is available at half price under this government scheme.

Comments are closed.