LPG Link : ಎಲ್‌ಪಿಜಿ ಗ್ರಾಹಕರಿಗೆ ಡಿಸೆಂಬರ್‌ 31ರ ಒಳಗೆ eKYC ಕಡ್ಡಾಯವೇ ? ಆಹಾರ ಇಲಾಖೆಯಿಂದ ಹೊಸ ಆದೇಶ

LPG Gas e-KYC: ಎಲ್‌ಪಿಜಿ ಗ್ರಾಹಕರು ಕಡ್ಡಾಯವಾಗಿ 2023 ಡಿಸೆಂಬರ್‌ 31 ರ ಒಳಗಾಗಿ ಇಕೆವೈಸಿಯನ್ನು(LPG Gas eKYC) ಕಡ್ಡಾಯವಾಗಿ ಮಾಡಿಸಬೇಕು ಎಂಬ ಸುದ್ದಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಆಹಾರ ಇಲಾಖೆ ಇದೀಗ ಇಕೆವೈಸಿ ಅಂತಿಮ ಗಡುವಿನ ಕುರಿತು ಹೊಸ ಆದೇಶವೊಂದನ್ನು ಹೊರಡಿಸಿದೆ.

LPG Gas e-KYC: ಎಲ್‌ಪಿಜಿ ಗ್ರಾಹಕರು ಕಡ್ಡಾಯವಾಗಿ 2023 ಡಿಸೆಂಬರ್‌ 31 ರ ಒಳಗಾಗಿ ಇಕೆವೈಸಿಯನ್ನು(LPG Gas eKYC) ಕಡ್ಡಾಯವಾಗಿ ಮಾಡಿಸಬೇಕು ಎಂಬ ಸುದ್ದಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಗ್ರಾಹಕರು ಗ್ಯಾಸ್‌ ಏಜೆನ್ಸಿಗಳ ಮುಂದೆ ಸಾಲುಗಟ್ಟಿನಿಂತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಆಹಾರ ಇಲಾಖೆ ಇದೀಗ ಇಕೆವೈಸಿ ಅಂತಿಮ ಗಡುವಿನ ಕುರಿತು ಹೊಸ ಆದೇಶವೊಂದನ್ನು ಹೊರಡಿಸಿದೆ.

ಗೃಹಬಳಕೆಯ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆಧಾರ್‌ ಕಾರ್ಡ್‌ನ್ನು ನೀಡಿ ಇಕೆವೈಸಿ ಮಾಡಿಸಿಕೊಳ್ಳಬೇಕು. ಉಜ್ವಲ ಯೋಜನೆಯ ಗ್ರಾಹಕರು ಮೊದಲ ಪ್ರಾಶಸ್ತ್ಯದಲ್ಲಿ ಇಕೆವೈಸಿಯನ್ನು ಮಾಡಿಸಬೇಕು. ಆದರೆ ಡಿಸೆಂಬರ್‌ 21 ರ ಅಂತಿಮ ಗಡುವು ನೀಡಿಲ್ಲ. ಗ್ರಾಹಕರು ಇಕೆವೈಸಿ ಮಾಡಿಸುವ ಮೂಲಕ ಸಬ್ಸಿಡಿಯನ್ನು ಪಡೆಯಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

LPG Gas Link Is eKYC mandatory for LPG customers by December 31 New order from Karnataka food department
Image credit to Original Source

ಉಜ್ವಲ ಯೋಜನೆಯ ಗ್ರಾಹಕರು ಆನ್‌ಲೈನ್‌ ಅಥವಾ ಆಪ್‌ಲೈನ್‌ ಮೂಲಕವೂ ಇಕೆವೈಸಿಯನ್ನು ಮಾಡಿಸಬಹುದಾಗಿದೆ. ತಮ್ಮ ಆಧಾರ್‌ ಕಾರ್ಡ್‌ ಅನ್ನು ಗ್ಯಾಸ್‌ ಏಜೆನ್ಸಿಗೆ ನೀಡುವ ಮೂಲಕ ತಮ್ಮ ಇಕೆವೈಸಿಯನ್ನು ಮಾಡಿಸಬಹುದಾಗಿದೆ. ಆದರೆ ಇಕೆವೈಸಿ ಮಾಡಿಸಲು ಯಾವುದೇ ಅಂತಿಮ ಗಡುವು ವಿಧಿಸಿಲ್ಲ.

ಇದನ್ನೂ ಓದಿ : LPG EKYC : ಎಲ್‌ಪಿಜಿ ಗ್ಯಾಸ್‌ ಸಬ್ಸಿಡಿ ಪಡೆಯಲು ಮನೆಯಿಂದಲೇ ಮಾಡಿ ಇಕೆವೈಸಿ

ಸಾಮಾಜಿಕ ಜಾಲತಾಣಗಳಲ್ಲಿ ಗ್ಯಾಸ್‌ ಸಂಪರ್ಕ ಹೊಂದಿದವರು ಇಕೆವೈಸಿಯನ್ನು ಮಾಡಿಕೊಂಡ್ರೆ ಸಬ್ಸಿಡಿ ದರದಲ್ಲಿ 500 ರೂಪಾಯಿಗೆ ಗ್ಯಾಸ್‌ ಸಿಲಿಂಡರ್‌ ದೊರೆಯಲಿದೆ. ಅದ್ರಲ್ಲೂ 2023 ರ ಡಿಸೆಂಬರ್‌ 31 ರ ಒಳಗಾಗಿ ಇಕೆವೈಸಿಯನ್ನು ಮಾಡಿಸಬೇಕೆಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದು ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಯಾಗಿದೆ.

ಆದರೆ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಆಹಾರ ಇಲಾಖೆ ಸ್ಪಷ್ಟನೆಯನ್ನು ನೀಡಿದೆ. ಇನ್ನು ಒಂದೊಮ್ಮೆ ಇಕೆವೈಸಿ ಮಾಡಿಸಬೇಕಾದ್ರೆ ನೀವು ಗ್ಯಾಸ್‌ ಏಜೆನ್ಸಿಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ನೀವು LPG ಗ್ಯಾಸ್ ಗ್ರಾಹಕರಾಗಿದ್ದರೆ ಮತ್ತು ಈ ಹಂತವನ್ನು ಇನ್ನೂ ತೆಗೆದುಕೊಳ್ಳದಿದ್ದರೆ, ನೀವು ಅದನ್ನು ಮನೆಯಲ್ಲಿಯೇ ಕುಳಿತು ಸುಲಭವಾಗಿ ಮಾಡಬಹುದು.

ಇದನ್ನೂ ಓದಿ : ಅಂಚೆ ಕಚೇರಿ ಹೊಸ ಯೋಜನೆ : ಕೇವಲ 1500 ರೂ ಹೂಡಿಕೆ ಮಾಡಿ 35 ಲಕ್ಷ ರೂ ಪಡೆಯಿರಿ !

ಆನ್‌ಲೈನ್‌ ಮೂಲಕ ಇಕೆವೈಸಿ ಮಾಡುವ ವಿಧಾನ : 

  • ಮೊದಲನೆಯದಾಗಿ, ಇ-ಕೆವೈಸಿ ಮಾಡಲು, ನೀವು ಅಧಿಕೃತ ವೆಬ್‌ಸೈಟ್‌ www.mylpg.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಗ್ಯಾಸ್‌ ಏಜೆನ್ಸಿಯನ್ನು ಆರಿಸಿಕೊಳ್ಳಿ.
  • ನಂತರ, ನೀವು ಹೊಸ ಬಳಕೆದಾರರಿಗಾಗಿ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಕೇಳಲಾಗುತ್ತದೆ.
  • ನಿಮ್ಮ ಸಂಪೂರ್ಣ ಮಾಹಿತಿಯನ್ನು ನೀವು ಸಲ್ಲಿಸಿದ ನಂತರ, ನೀವು ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಸ್ವೀಕರಿಸುತ್ತೀರಿ, ಅದನ್ನು ನೀವು ಸುರಕ್ಷಿತವಾಗಿರಿಸಬೇಕು.
  • ಪೋರ್ಟಲ್‌ನಲ್ಲಿ ನೋಂದಣಿಯನ್ನು ಪೂರ್ಣಗೊಳಿಸಿದ ನಂತರ, ನೀವು ಮತ್ತೆ ಈ ವೆಬ್‌ಸೈಟ್‌ಗೆ ಹಿಂತಿರುಗಬೇಕು.
  • ಸೈನ್ ಇನ್ ಆಯ್ಕೆಯನ್ನು ಕ್ಲಿಕ್  ಮಾಡಿದ್ರೆ  ಲಾಗಿನ್ ಪುಟವನ್ನು ತೆರೆಯುತ್ತದೆ.
  • ಅಲ್ಲಿಂದ ಲಾಗಿನ್ ಆದ ನಂತರ, ನೀವು ಪ್ರೊಫೈಲ್ ಆಯ್ಕೆಯನ್ನು ಪಡೆಯುತ್ತೀರಿ, ಅದರ ಮೇಲೆ ಕ್ಲಿಕ್ ಮಾಡುವ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಬಳಸಿಕೊಂಡು ನೀವು ಸುಲಭವಾಗಿ e-KYC  ಮಾಡಬಹುದಾಗಿದೆ.
  • ಹೀಗಾಗಿ, ಈ ಸಂಪೂರ್ಣ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನೀವು ಮನೆಯಲ್ಲಿ ಕುಳಿತು ನಿಮ್ಮ ಇ-ಕೆವೈಸಿ ಅನ್ನು ನವೀಕರಿಸಬಹುದು.

ಇದನ್ನೂ ಓದಿ :  ಮನೆಯಲ್ಲಿ ಎಷ್ಟು ನಗದು ಇರಿಸಿಕೊಳ್ಳಬಹುದು ? ಹಣ ವರ್ಗಾವಣೆಗೆ ಜಾರಿಯಾಯ್ತು ಹೊಸ ರೂಲ್ಸ್‌

LPG Gas Link: Is eKYC mandatory for LPG customers by December 31? New order from Karnataka food department

Comments are closed.