ಭಾನುವಾರ, ಏಪ್ರಿಲ್ 27, 2025
HomebusinessLPG eKYC : ಎಲ್‌ಪಿಜಿ ಗ್ಯಾಸ್‌ ಸಬ್ಸಿಡಿ ಪಡೆಯಲು ಮನೆಯಿಂದಲೇ ಮಾಡಿ ಇಕೆವೈಸಿ

LPG eKYC : ಎಲ್‌ಪಿಜಿ ಗ್ಯಾಸ್‌ ಸಬ್ಸಿಡಿ ಪಡೆಯಲು ಮನೆಯಿಂದಲೇ ಮಾಡಿ ಇಕೆವೈಸಿ

- Advertisement -

LPG Gas eKYC subsidy : ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಸಬ್ಸಿಡಿ (LPG Gas Cylinder Subsidy) ಪಡೆಯಲು ಕೇಂದ್ರ ಸರಕಾರ ಅವಕಾಶವನ್ನು ಕಲ್ಪಿಸಿದೆ. ಗ್ಯಾಸ್‌ ಸಬ್ಸಿಡಿ ಪಡೆಯಲು ಡಿಸೆಂಬರ್‌ 31 ರ ಒಳಗಾಗಿ ಕೆವೈಸಿ ಮಾಡಿ ಅನ್ನೋ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದಾಗಿ ಗ್ರಾಹಕರು ಗ್ಯಾಸ್‌ ಏಜೆನ್ಸಿಯ ಮುಂದೆ ಜಮಾಯಿಸುತ್ತಿದ್ದಾರೆ. ಆದರೆ ಮನೆಯಲ್ಲಿಯೇ ಕುಳಿತು ಸುಲಭವಾಗಿ ಇಕೆವೈಸಿ ಮಾಡಬಹುದಾಗಿದೆ.

ಕರ್ನಾಟಕದಲ್ಲಿ ಗ್ಯಾಸ್‌ ಸಬ್ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಇಕೆವೈಸಿ ಮಾಡಿಸಿದ್ರೆ ಕೇವಲ 500  ರೂಪಾಯಿಗೆ ಸಿಲಿಂಡರ್‌ ಲಭ್ಯವಾಗಲಿದೆ ಅನ್ನೋ ಕಾರಣಕ್ಕೆ ಇಕೆವೈಸಿ ಮಾಡಿಸಲು ಗ್ಯಾಸ್‌ ಏಜೆನ್ಸಿಗಳ ಮುಂದೆ ಜನರು ಜಮಾಯಿಸುತ್ತಿದ್ದಾರೆ. ಆದರೆ, ಗ್ಯಾಸ್‌ ಏಜೆನ್ಸಿ ಮಾಲೀಕರು ಉಜ್ವಲ ಯೋಜನೆ (Ujwala Yojana) ಕೇವಲ ಉಜ್ವಲ ಯೋಜನೆಯ ಗ್ರಾಹಕರಿಗೆ ಮಾತ್ರವೇ ಇಕೆವೈಸಿ  ಮಾಡಿಸಿ ವಾಪಾಸ್‌ ಕಳುಹಿಸುತ್ತಿದ್ದಾರೆ.

LPG gas subsidy ekyc online
Image Credit to Original Source

ಸದ್ಯ ಉಜ್ವಲ ಯೋಜನೆಯ ಗ್ರಾಹಕರಿಗೆ ಮಾತ್ರವೇ ಕೇಂದ್ರ ಸರಕಾರ ಇಕೆವೈಸಿ ಮಾಡಿಸಲು ಸೂಚನೆಯನ್ನು ನೀಡಿದೆ. ಆದರೆ ಇಕೆವೈಸಿ ಮಾಡಿಸುವ ಅಂತಿಮ ಗಡುವನ್ನು ನೀಡಿಲ್ಲ. ಗ್ರಾಹಕರು ಯಾವುದೇ ಕಾರಣಕ್ಕೂ ಮುಗಿಬಿದ್ದು, ಇಕೆವೈಸಿ ಮಾಡಿಸುವ ಅಗತ್ಯವಿಲ್ಲ. ಕೇವಲ ಉಜ್ವಲ ಯೋಜನೆಯ ಗ್ರಾಹಕರು ಕಡ್ಡಾಯವಾಗಿ ಇಕೆವೈಸಿ ಮಾಡಿಸಬೇಕು. ಆದರೆ ಉಳಿದ ಗ್ರಾಹಕರಿಗೆ ಸಬ್ಸಿಡಿ ನೀಡುವ ಕುರಿತು ಕೇಂದ್ರ ಸರಕಾರ ಯಾವುದೇ ಸೂಚನೆಯನ್ನು ನೀಡಿಲ್ಲ.

ಇದನ್ನೂ  ಓದಿ : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಡಿಸೆಂಬರ್‌ನಲ್ಲಿ 18 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ

ಮನೆಯಲ್ಲಿಯೇ ಕುಳಿತು ಆನ್‌ಲೈನ್‌ ಮೂಲಕ ಇಕೆವೈಸಿ ಮಾಡಿಸುವುದು ಹೇಗೆ ?

  • LPG ಗ್ಯಾಸ್‌ ವೆಬ್‌ಸೈಟ್‌ ಗೆ www.mylpg.in  ಭೇಟಿ ನೀಡಿ
  • ಭಾರತ್‌/ಎಚ್.ಪಿ/ ಇಂಡೇನ್‌ ಗ್ಯಾಸ್‌ ಆಯ್ಕೆಯನ್ನು ಮಾಡಿ.
  • ಅದರಲ್ಲಿ ನಿಮ್ಮ ಗ್ಯಾಸ್‌ ಏಜೆನ್ಸಿ (Gas Agency)  ಯಾವುದು ಎಂದು ಕ್ಲಿಕ್‌ ಮಾಡಿ
  • ನೋಂದಾಯಿಸಿಕೊಂಡಿರುವ ಮೊಬೈಲ್‌ ಸಂಖ್ಯೆ ಮೂಲಕ ಸೈನ್‌ಇನ್‌ (Sign in) ಮಾಡಿ
  • ಲಾಗಿನ್‌ ಆದ ನಂತರದಲ್ಲಿ ಗ್ಯಾಸ್‌ ಸಂಪರ್ಕದ ವಿವರ ಗೋಚರಿಸುತ್ತದೆ.
  • ಎಡಭಾಗದಲ್ಲಿ ಆಧಾರ್‌ ದೃಢೀಕರಣವನ್ನು ಆಯ್ಕೆ ಮಾಡಿ
  • ಆಧಾರ್‌ ಸಂಖ್ಯೆಯನ್ನು (aadhaar card) ನಮೋದಿಸಿದ ನಂತರ ಓಟಿಪಿ (OTP) ಕ್ಲಿಕ್‌ ಮಾಡಿ
  • ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಸ್ವೀಕೃತವಾಗಿರುವ ಒಟಿಪಿ ಯನ್ನು ನಮೋದಿಸಿದೆ.
  • ದೃಢೀಕರಣ ಯಶಸ್ವಿ ಆದ ನಂತರದಲ್ಲಿ ಸಂದೇಶ ನಿಮ್ಮ ಮೊಬೈಲ್‌ಗೆ ಬರುತ್ತದೆ.
  • ನಿಮ್ಮ ಕೆವೈಸಿ (KYC) ಪೂರ್ಣಗೊಂಡಿದೆಯಾ ಇಲ್ಲವೇ ಎಂದು ಚೆಕ್‌ ಮಾಡಲು ಬಯಸಿದರೆ ಆಧಾರ್‌ ದೃಢೀಕರಣ ಆಯ್ಕೆಯನ್ನು ಕ್ಲಿಕ್‌ ಮಾಡಿ.
  • ನಂತರದಲ್ಲಿ ಇ ಕೆವೈಸಿ ಪೂರ್ಣಗೊಂಡ ಮೆಸೇಜ್‌ ನಿಮ್ಮ ಮೊಬೈಲ್‌ಗೆ ಬರುತ್ತದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಬಾಕಿ ಮೊತ್ತ ಬಿಡುಗಡೆ : ನಿಮಗೂ ಬಂದಿದ್ಯಾ ಒಮ್ಮೆ ಚೆಕ್‌ ಮಾಡಿ

ಆನ್‌ಲೈನ್‌ನಲ್ಲಿ ಅತ್ಯಂತ ಸುಲಭವಾಗಿ ಇಕೆವೈಸಿ ಪ್ರಕ್ರೀಯೆಯನ್ನು ಪೂರ್ಣಗೊಳಿಸಬಹುದು. ಒಂದೊಮ್ಮೆ ಆನ್‌ಲೈನ್‌ನಲ್ಲಿ ಇಕೆವೈಸಿ ಮಾಡಿಸಲು ಅಸಾಧ್ಯವಾದವರು ಆಪ್‌ಲೈನ್‌ ಮೂಲಕವೂ ಗ್ಯಾಸ್‌ ಏಜೆನ್ಸಿಗಳಿಗೆ ಭೇಟಿ ನೀಡಿ ಇಕೆವೈಸಿ ಪೂರ್ಣಗೊಳಿಸಬಹುದು.

LPG gas subsidy ekyc online
Image Credit to Original Source

ಗ್ಯಾಸ್‌ ಸಿಲಿಂಡರ್‌ ಹೊಂದಿರುವ ಪ್ರತಿಯೊಬ್ಬರೂ ಕೂಡ ಇಕೆವೈಸಿ ಪೂರ್ಣಗೊಳಿಸಬೇಕು ಎಂಬ ನಿಯಮವಿಲ್ಲ. ಆದರೆ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್‌ ಸಿಲಿಂಡರ್‌ ಪಡೆದುಕೊಂಡವರು ಇಕೆವೈಸಿ ಮಾಡಿಸಿದ್ರೆ ಮಾತ್ರವೇ ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ. ಗ್ಯಾಸ್‌ ಏಜೆನ್ಸಿಯ ಮುಂದೆ ಸಾಲು ನಿಲ್ಲುವ ಬದಲು ಮನೆಯಲ್ಲಿಯೇ ಕುಳಿತು ಇ ಕೆವೈಸಿ ಪೂರ್ಣಗೊಳಿಸಿ.

ಇದನ್ನೂ ಓದಿ : UPI ಪಾವತಿಯಲ್ಲಿ ಬಾರೀ ಬದಲಾವಣೆ : ಮೋದಿ ಸರಕಾರದಿಂದ ಹೊಸ ರೂಲ್ಸ್‌ ಜಾರಿ

LPG gas subsidy ekyc online 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular