Twitter : ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಟೆಸ್ಲಾ ಕಂಪನಿ ಸಿಇಓ ಎಲಾನ್ ಮಾಸ್ಕ್ ಸಾಮಾಜಿಕ ಜಾಲತಾಣದ ಬಹುಮುಖ್ಯ ವೇದಿಕೆ ಟ್ವಿಟರ್ ಖರೀದಿ ಮಾಡಿರುವುದು ಎಲ್ಲರಿಗೂ ತಿಳಿದೇ ಇದೆ. ಎಲಾನ್ ಮಸ್ಕ್ ಟ್ವಿಟರ್ ವೇದಿಕೆಯನ್ನು ಖರೀದಿ ಮಾಡಿದ ಬಳಿಕ ಟ್ವಿಟರ್ನಲ್ಲಿ ಬಹುತೇಕ ಬದಲಾವಣೆಗಳು ಆಗಲಿವೆ ಎಂಬುದನ್ನು ಬಹುತೇಕ ಎಲ್ಲರೂ ನಿರೀಕ್ಷಿಸಿದ್ದರು. ಅದರಂತೆ ಎಲಾನ್ ಮಸ್ಕ್ ಕೂಡ ಈ ವಿಚಾರವಾಗಿ ಅನೇಕ ಸುಳಿವುಗಳನ್ನೂ ನೀಡಿದ್ದರು. ಅದೇ ರೀತಿ ಇದೀಗ ಎಲಾನ್ ಮಸ್ಕ್ ಟ್ವಿಟರ್ ಖಾತೆಯ ನಿರ್ವಹಣೆಯು ಸಾಮಾನ್ಯ ಜನತೆಗೆ ಉಚಿತವಾಗಿಯೇ ಇರಲಿದೆ. ಆದರೆ ವಾಣಿಜ್ಯ ಬಳಕೆಗೆ ಹಾಗೂ ಸರ್ಕಾರದ ಬಳಕೆಗೆ ಕೊಂಚ ಹಣ ಪಾವತಿ ಮಾಡಬೇಕಾಗಬಹುದು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದ ಈ ವೇದಿಕೆಯು ಪ್ರಭಾವಿ ವರ್ಗಕ್ಕೆ ಸೇರಿದ್ದು ಎಂಬ ಅಭಿಪ್ರಾಯವನ್ನು ಹೋಗಲಾಡಿಸಿ ಟ್ವಿಟರ್ ಎಲ್ಲರಿಗೂ ಸೇರಿದ ಮಾಧ್ಯಮವಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಎಲಾನ್ ಮಸ್ಕ್ ಈ ಹಿಂದೆ ಹೇಳಿದ್ದರು. ಅದರಂತೆ ಇದೀಗ ಟ್ವೀಟ್ ಮಾಡಿರುವ ಎಲಾನ್ ಮಾಸ್ಕ್ ಸಾಮಾನ್ಯ ಜನತೆಗೆ ಟ್ವಿಟರ್ ಉಚಿತ
ಸೇವೆ ನೀಡಲಿದೆ . ಆದರೆ ವಾಣಿಜ್ಯ ಹಾಗೂ ಸರ್ಕಾರದ ಬಳಕೆದಾರರು ಸ್ವಲ್ಪ ಶುಲ್ಕ ಪಾವತಿ ಮಾಡಬೇಕಾಗಿ ಬರಬಹುದು ಎಂದು ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯು ಪ್ರತಿಕ್ರಿಯೆಗಾಗಿ ಟ್ವಿಟರ್ನ್ನು ಸಂಪರ್ಕಿಸಿದರೂ ಸಹ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಕಂಪನಿಯು ನಿರಾಕರಿಸಿದೆ ಎನ್ನಲಾಗಿದೆ.
ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಕಳೆದ ತಿಂಗಳಿನಿಂದ ಟ್ವಿಟರ್ನಲ್ಲಿ ಅನೇಕ ಬದಲಾವಣೆಗಳ ಮುನ್ಸೂಚನೆಗಳನ್ನು ನೀಡುತ್ತಲೇ ಇದ್ದಾರೆ. ಇತ್ತೀಚಿಗೆ ಕಂಪನಿಯನ್ನು ಕೊಂಡುಕೊಂಡ ಬಳಿಕ ಮಸ್ಕ್ ತನ್ನದೇ ಆದ ರೀತಿಯಲ್ಲಿ ಈ ಸಾಮಾಜಿಕ ಮಾಧ್ಯಮದ ವೇದಿಕೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಟ್ವಿಟರ್ನ ಅಲ್ಗೊರಿದಂನ್ನು ಸಾರ್ವಜನಿಕಗೊಳಿಸಲು ಪ್ರಯತ್ನಿಸುತ್ತಿದ್ದಾರೆ .ಹೊಸ ಫೀಚರ್ಗಳನ್ನು ಬಳಕೆಗೆ ತರುವ ಮೂಲಕ ಸ್ಪ್ಯಾಮ್ಗಳನ್ನು ತಡೆಯುವುದು ಹಾಗೂ ನಂಬಿಕೆಯನ್ನು ಗಳಿಸಿಕೊಳ್ಳುವುದು ನಮ್ಮ ಧ್ಯೇಯವಾಗಿದೆ ಎಂದು ಎಲಾನ್ ಮಸ್ಕ್ ಹೇಳುತ್ತಲೇ ಬಂದಿದ್ದಾರೆ.
ಇದನ್ನು ಓದಿ : Asha Bhat : ನಾಯಕಿಯಿಂದ ಗಾಯಕಿ ಪಟ್ಟಕ್ಕೆ: ಇದು ರಾಬರ್ಟ್ ಬೆಡಗಿಯ ಹೊಸ ಕಹಾನಿ
ಇದನ್ನೂ ಓದಿ : Pooja Hegde : ಕಾಪು ಮಾರಿಗುಡಿಗೆ ರಾಧೇ ಶ್ಯಾಮ್ ಬೆಡಗಿ ಪೂಜಾ ಹೆಗ್ಡೆ : ಸೋಲಿನಿಂದ ಕಂಗೆಟ್ಟ ನಟಿಗೆ ದೇವರ ಅಭಯ
“Maybe A Slight Cost For…”: Elon Musk On Whether Twitter Will Stay Free