Mukesh Ambani : ಕೋಟ್ಯಾಧಿಪತಿ ಮುಕೇಶ್ ಅಂಬಾನಿ ಸೋಮವಾರದಂದು ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ (Mukesh Ambani steps down) ರಾಜೀನಾಮೆ ನೀಡಿದ್ದು ಕಂಪನಿಯ ಅಧಿಕಾರವನ್ನು ತಮ್ಮ ಹಿರಿಯ ಪುತ್ರ ಆಕಾಶ್ ಅಂಬಾನಿ ಹಸ್ತಾಂತರಿಸಿದ್ದಾರೆ. ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ರಿಲಯನ್ಸ್ ಜಿಯೋ ಕಂಪನಿಯ ಮಂಡಳಿಯ ಸಭೆಯಲ್ಲಿ ಕಂಪನಿಯ ನಿರ್ದೇಶಕದ ಮಂಡಳಿಯ ಅಧ್ಯಕ್ಷರಾಗಿ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಕಾಶ್ ಅಂಬಾನಿಯನ್ನು ನೇಮಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮಂಡಳಿಯು ತನ್ನ ಸಭೆಯಲ್ಲಿ ಪಂಕಜ್ ಮೋಹನ್ ಪವಾರ್ ಜೂನ್ 27 ರಿಂದ ಐದು ವರ್ಷಗಳ ಅವಧಿಗೆ ರಿಲಯನ್ಸ್ ಜಿಯೋದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ಅನುಮೋದನೆ ನೀಡಲಾಗಿದೆ. ರಮೀಂದರ್ ಸಿಂಗ್ ಗುಜ್ರಾಲ್ ಹಾಗೂ ಕೆವಿ ಚೌಧರಿಯನ್ನು ಸ್ವತಂತ್ರ ನಿರ್ದೇಶಕರಾಗಿ ನೇಮಿಸಲಾಗಿದೆ.
ಮುಕೇಶ್ ಅಂಬಾನಿ ರಿಲಯನ್ಸ್ ಜಿಯೋ ಸೇರಿದಂತೆ ಎಲ್ಲಾ ಜಿಯೋ ಡಿಜಿಟಲ್ ಸೇವೆಗಳ ಬ್ರ್ಯಾಂಡ್ ಹೊಂದಿರುವ ಕಂಪನಿಯಾದ ಜಿಯೋ ಫ್ಲಾಟ್ಫಾರ್ಮ್ಸ್ ಲಿಮಿಟೆಡ್ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.ಅಮೆರಿಕದ ಬ್ರೌನ್ ವಿಶ್ವ ವಿದ್ಯಾಲಯದಿಂದ ಅರ್ಥಶಾಸ್ತ್ರ ಪದವಿಧರರಾಗಿರುವ ಆಕಾಶ್ ಹೊಸ ತಂತ್ರಜ್ಞಾನ ಹಾಗೂ ಸಾಮರ್ಥ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಡೇಟಾ ಮತ್ತು ತಂತ್ರಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪಿಸಲು ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
TRAI ಅಂಕಿಅಂಶಗಳ ಪ್ರಕಾರ, ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಏಪ್ರಿಲ್‌ನಲ್ಲಿ 16.8 ಲಕ್ಷ ಮೊಬೈಲ್ ಚಂದಾದಾರರನ್ನು ಹೊಂದಿದೆ. ಮಾರುಕಟ್ಟೆ ಯಲ್ಲಿ ತನ್ನ ಮುನ್ನಡೆಯನ್ನು ದೃಢಪಡಿಸಿದೆ. ಮುಕೇಶ್ ಅಂಬಾನಿ ಹಲವು ವರ್ಷಗಳಿಂದಲೂ ಮುಕೇಶ್ ಅಂಬಾನಿ ಅವರು ರಿಯಾಲಯನ್ಸ್ ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ರಿಯಲನ್ಸ್ ಸಂಸ್ಥೆಯ ಮುಖ್ಯಸ್ಥನ ಹುದ್ದೆಯಿಂದ ಕೆಳಗೆ ಇಳಿಯುವುದಾಗಿ ಘೋಷಣೆಯನ್ನು ಮಾಡಿದ್ದರು. ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ಯನ್ನು ಸಲ್ಲಿಸಿದ್ದಾರೆ. ಇನ್ನು ಆಕಾಶ್ ಅಂಬಾನಿ ಅವರು ಮುಂದಿನ ರಿಯಲ್ಸ್ ಸಂಸ್ಥೆಯ ಮುಖ್ಯಸ್ಥರಾಗುತ್ತಾರೆ ಅನ್ನೋ ಕುರಿತು ನ್ಯೂಸ್ ನೆಕ್ಸ್ಟ್ ಈ ಹಿಂದೆಯೇ ವರದಿ ಮಾಡಿತ್ತು.
ತಾಜಾ ಸುದ್ದಿಗಾಗಿ ತಪ್ಪದೇ ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ : Jaspreet Bumrah to lead India : ಟೀಮ್ ಇಂಡಿಯಾಗೆ ಬುಮ್ರಾ ನಾಯಕ ?
ಇದನ್ನೂ ಓದಿ : Afghanistan earthquake : ಅಪ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ : 255ಕ್ಕೂ ಅಧಿಕ ಮಂದಿ ಸಾವು
Mukesh Ambani steps down as Reliance Jio’s director, son Akash appointed chairman