Salary Slip Details : ನಿಮಗಿದು ಗೊತ್ತೇ? ಸ್ಯಾಲರಿ ಸ್ಲಿಪ್‌ ಏನೆಲ್ಲಾ ಒಳಗೊಂಡಿರುತ್ತದೆ ಎಂದು !!

ಉದ್ಯೋಗದಾತರಿಂದ ನಿಯತಕಾಲಿಕವಾಗಿ ಉದ್ಯೋಗಿಗಳು ವೇತನವನ್ನು ಪಡೆಯುತ್ತಾರೆ. ವೇತನವು (Salary)ವು ಮೂಲ ವೇತನ(Basic Salary), ಭತ್ಯೆಗಳು(Allowances), ಕಡಿತ, ತೆರಿಗೆಗಳು(Taxes), ಉದ್ಯೋಗದಾತರ ವಿವಿರ, ಉದ್ಯೋಗಿಗಳ ವಿವರ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ ವಿಷಯಗಳು ಸ್ಯಾಲರಿ ಸ್ಲಿಪ್‌ ನಲ್ಲಿ ನಮೂದಿಸಿರುತ್ತದೆ ಮತ್ತು ಇದನ್ನು ಉದ್ಯೋಗಿಗಳಿಗೆ ಕಳುಹಿಸಲಾಗುವುದು.

ಸ್ಯಾಲರಿ ಸ್ಲಿಪ್‌ ಅಥವಾ ಪೇ ಸ್ಲಿಪ್‌ ಇದು ಎಲ್ಲಾ ವಿವಿರಗಳನ್ನು ಒಳಗೊಂಡಿರುವ ಉದ್ಯೋಗಿಗಳ ದಾಖಲೆಯಾಗಿದೆ. ಇದರಲ್ಲಿ ಪ್ರಮುಖವಾಗಿ ಮೂಲ ವೇತನ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಭತ್ಯೆ, ಸಾರಿಗೆ ಭತ್ಯೆ, ವಿಶೇಷ ಭತ್ಯೆ, ಪ್ರೊಫೆಷನಲ್ಲ ಟ್ಯಾಕ್ಸ್‌, TDS ಮತ್ತು EPF ಗಳ ಬಗ್ಗೆ ಮಾಹಿತಿ ಇರುತ್ತದೆ.

ಸ್ಯಾಲರಿ ಸ್ಲಿಪ್‌ ಒಳಗೊಂಡಿರುವ ಮಾಹಿತಿಗಳೆಂದರೆ :

ಆದಾಯಗಳು :

  • ಬೇಸಿಕ್‌ ಪೇ (ಮೂಲ ವೇತನ):
    ಇದು ಸ್ಯಾಲರಿಯ ಪ್ರಮುಖ ಅಂಶ. ಇದು ಸಂಬಳದ ಶೇಕಡಾ 30–50 ರಷ್ಟಿರುತ್ತದೆ ಮತ್ತು ಇತರ ಅಂಶಗಳಿಗೂ ಆದಾರವಗಿರುತ್ತದೆ. ಜೂನಿಯರ್‌ ಹಂತದಲ್ಲಿ ಮೂಲಭೂತ ಅಂಶಗಳು ಮಾತ್ರ ಹೆಚ್ಚಾಗಿರುತ್ತದೆ. ಉದ್ಯೋಗಿ ಬೆಳದಂತೆ ಇತರ ಭತ್ಯೆಗಳು ಹೆಚ್ಚಾಗುತ್ತಾ ಹೋಗುತ್ತವೆ. ಉದ್ಯೋಗಿ ಸಂಬಳದ ರೀತಿಯಲ್ಲಿ ಪಡೆಯುವ ಹಣವು 100 ಪ್ರತಿಶತ ತೆರಿಗೆಗೆ ಒಳಪಟ್ಟಿರುತ್ತದೆ.
  • ಡಿಎ (DA):
    ವೇತನದ ಮೇಲೆ ಹಣದುಬ್ಬರದ ಪ್ರಭಾವನ್ನು ಸರಿದೂಗಿಸಲು ಪಾವತಿಸುವ ಮೊತ್ತವನ್ನು ಡಿಎ ಎನ್ನುತ್ತಾರೆ. ಸಾಮಾನ್ಯವಾಗಿ ಮೂಲವೇತನದ ಶೇ 30–40 ರಷ್ಟಿರುತ್ತದೆ. ಡಿಎ ನೇರವಾಗಿ ಜೀವನ ವೆಚ್ಚವನ್ನು ಆಧರಿಸಿದೆ. ಆದ್ದರಿಂದ ಬೇರೆ ಬೇರೆ ಸ್ಥಳಗಳಿಗೆ ಡಿಎ ವಿಭಿನ್ನವಾಗಿರುತ್ತದೆ. ಆದಾಯ ತೆರಿಗೆಯು ಬೇಸಿಕ್‌ ಮತ್ತು ಡಿಎ ಯನ್ನು ವೇತನ ಎಂದು ಪರಿಗಣಿಸುತ್ತದೆ. ಆದ್ದರಿಂದ ಇದು ತೆರಿಗೆ ಸಂಬಂಧ ಪಟ್ಟಿದೆ.
  • ಎಚ್‌ಆರ್‌ಎ (HRA):
    ಬಾಡಿಗೆ ಮನೆಗಳಲ್ಲಿ ವಾಸಿಸುವ ಉದ್ಯೋಗಿಗಳಿಗೆ ಮನೆ ಬಾಡಿಗೆ ನೀಡುವ ಸಲುವಾಗಿ HRA ನೀಡಲಾಗುತ್ತದೆ. ಇದು ಉದ್ಯೋಗಿ ವಾಸಿಸುವ ನಗರವನ್ನು ಅವಲಂಬಿಸಿರುತ್ತದೆ. ಮೆಟ್ರೋ ನಗರಕ್ಕೆ ಮೂಲ ವೇತನದ ಶೇಕಡಾ 50 ರಷ್ಟು HRA ಇದೆ. ಕೆಲವು ನಿರ್ದಿಷ್ಟ ಮಿತಿಯವರೆಗೆ ಇದು ತೆರಿಗೆ ವಿನಾಯಿತಿ ಹೊಂದಿದೆ.
  • ಸಾಗಣೆ ಭತ್ಯೆ (TA) :
    ಉದ್ಯೋಗದಾತರು ಉದ್ಯೋಗಿಗಳಿಗೆ ಕೆಲಸಕ್ಕೆ ಹೋಗುವ ಸಲುವಾಗಿ ಪಾವತಿಸುವ ಮೊತ್ತವಾಗಿದೆ. ಇದೂ ಕೂಡ ನಿರ್ದಿಷ್ಟ ಮಿತಿಯವರೆಗೆ ತೆರಿಗೆ ವಿನಾಯಿತಿ ಹೊಂದಿದೆ.
  • ವೈದ್ಯಕೀಯ ಭತ್ಯೆ (Medical Allowance):
    ಉದ್ಯೋಗದಾತನು ಉದ್ಯೋಗದ ಅವಧಿಯಲ್ಲಿ ವೈದ್ಯಕೀಯ ವೆಚ್ಚಗಳಿಗಾಗಿ ಉದ್ಯೋಗಿದೆ ಪಾವತಿಸುವ ಮೊತ್ತವನ್ನು ವೈದ್ಯಕೀಯ ಭತ್ಯೆ ಎನ್ನುತ್ತಾರೆ. ಇದರ ಮೇಲೆ ಆದಾಯ ತೆರಿಗೆಯನ್ನು ಉಳಿಸಬಹುದಾಗಿದೆ. ಅದಕ್ಕಾಗಿ ಉದ್ಯೋಗಿಯು ವೈದ್ಯಕೀಯ ಬಿಲ್‌ಗಳನ್ನು ಪುರಾವೆಯಾಗಿ ಪಾವತಿಸಬೇಕಾಗುತ್ತದೆ.
  • ಪ್ರಯಾಣ ಭತ್ಯೆ ಬಿಡಿ (LTA) :
    ಉದ್ಯೋಗಿಯು ರಜೆಯಲ್ಲಿರುವಾಗ ಪ್ರಯಾಣದ ವೆಚ್ಚವನ್ನು ಭರಿಸಲು ಉದ್ಯೋಗದಾತರು ನೀಡುತ್ತಾರೆ. ಇದು ಉದ್ಯೋಗಿಯ ಕುಟುಂಬದ ಸದಸ್ಯರ ಪ್ರಯಾಣ ವೆಚ್ಚವನ್ನು ಸಹ ಒಳಗೊಂಡಿದೆ. ಇದಕ್ಕೆ ಪ್ರಯಾಣದ ಪುರಾವೆಯ ಅಗತ್ಯವಿದೆ. ಈ ವಿನಾಯಿತಿಯು ನಾಲ್ಕು ವರ್ಷಗಳ ಬ್ಲಾಕ್‌ನಲ್ಲಿ ಕೈಗೊಂಡ ಎರಡು ಪ್ರಯಾಣಗಳಿಗೆ ಮಾತ್ರ ಅನ್ವಯಿಸುತ್ತದೆ.
  • ವಿಶೇಷ ಭತ್ಯೆ :
    ಇದು ಉದ್ಯೋಗಿಯು ಕೆಲಸದ ವೇಳೆ ತೋರಿಸಿದ ಕಾರ್ಯಕ್ಷಮತೆಯ ಮೇಲೆ ನೀಡಲಾಗುತ್ತದೆ. ಇದನ್ನೂ ಸಾಮಾನ್ಯವಾಗಿ ಉದ್ಯೋಗಿಗಳು ಕೆಲಸವನ್ನು ಇನ್ನೂ ಉತ್ತಮವಾಗಿ ಮಾಡುವಂತೆ ಉತ್ತೇಜಿಸುಲು ನೀಡುವ ಭತ್ಯೆಯಾಗಿದೆ. ಈ ಭತ್ಯೆಯು ಕಂಪನಿಯಿಂದ ಕಂಪನಿಗೆ ಬದಲಾಗುತ್ತಿರುತ್ತದೆ. ಇದು 100 ಪ್ರತಿಶತ ತೆರಿಗೆ ವಿನಾಯಿತಿ ಹೊಂದಿದೆ.

ಇದನ್ನೂ ಓದಿ : Add Beneficiary in SBI YONO : SBI YONO ದಲ್ಲಿ ಬೆನಿಫಿಷಿಯರಿಗಳನ್ನು ಸೇರಿಸುವುದು ಹೇಗೆ ಗೊತ್ತಾ?

ಕಡಿತಗಳು :
ಸ್ಯಾಲರಿ ಸ್ಲಿಪ್‌ ನ ಕಡಿತಗಳ ವಿಭಾಗದಲ್ಲಿ ಪ್ರೊಫೇಶನಲ್‌ ಟ್ಯಾಕ್ಸ್‌, TDS, ಮತ್ತು EPFಗಳನ್ನು ಒಳಗೊಂಡಿದೆ.

  • ಪ್ರೊಫೇಶನಲ್‌ ಟ್ಯಾಕ್ಸ್‌ :
    ವೃತ್ತಿಪರತೆಯನ್ನು ಗಳಿಸಲು ರಾಜ್ಯ ಸರ್ಕಾರಗಳು ವಿಧಿಸುವ ಒಂದು ಸಣ್ಣ ತೆರಿಗೆಯಾಗಿದೆ. ಇದನ್ನು ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಮಾತ್ರ ಪಾವತಿಸುತ್ತವೆ. ಇದು ವೃತ್ತಿಪರರಿಗೆ ಮಾತ್ರ ಸೀಮಿತವಾಗಿರದೇ ಕೆಲವು ಮಾಧ್ಯಮಗಳ ಮೂಲಕ ಜೀವನ ನಡೆಸುವವರ ಮೇಲೂ ವಿಧಿಸಲಾಗಿದೆ. ಇದು ತೆರಿಗೆಯ ಸ್ಲ್ಯಾಬ್‌ಗೆ ಒಳಪಟ್ಟಿರುತ್ತದೆ.
  • TDS :
    ಉದ್ಯೋಗದಾತರು ಆದಾಯ ತೆರಿಗೆ ಇಲಾಖೆಯ ಪರವಾಗಿ ಕಡಿತಗೊಳಿಸುವ ಮೊತ್ತವಾಗಿದೆ. ಇದನ್ನು ಈಕ್ವಿಟಿ ಫಂಡ್‌ಗಳು, ಇಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗಳು, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌), ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌) ಮತ್ತು ತೆರಿಗೆ ಉಳಿಸುವ ಸ್ಥಿರ ಠೇವಣಿಗಳು ಇಂತಹವುಗಳಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆ ಕಡಿಮೆ ಮಾಡಬಹುದು. ಹೂಡಿಕೆ ಮಾಡಿದ ಪುರಾವೆಗಳನ್ನು ಕಂಪನಿಗೆ ಸಲ್ಲಿಸುವುದರಿಂದ TDS ರಿಟರ್ನ್ಸ್‌ ಕ್ಲೈಮ್‌ ಮಾಡಬಹುದು.
  • ಭವಿಷ್ಯ ನಿಧಿ (EPF) :
    ಇದು ಭವಿಷ್ಯ ನಿಧಿಗೆ ಉದ್ಯೊಗಿ ನೀಡುವ ಕೊಡುಗೆಯಾಗಿದೆ. ಇದು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80C ಮಾನ್ಯವಾಗಿದೆ. ಉದ್ಯೋಗಿಯ ನಿವೃತ್ತಿ ಅವಧಿಗೆ ಸಂಗ್ರಹವಾಗುವ ನಿಧಿಯಾಗಿದೆ. ಇದನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ನಿಯಂತ್ರಿಸುತ್ತದೆ. ಉದ್ಯೋಗಿಯ ಮೂಲ ವೇತನದ 12 ಪ್ರತಿಶತ ಮೊತ್ತವು ಇಪಿಎಫ್‌ಗೆ ಹೋಗುತ್ತದೆ.

ಇದನ್ನೂ ಓದಿ: Senior Citizens : ಹಿರಿಯ ನಾಗರಿಕರಿಗೆ FDಗಳ ಮೇಲೆ ಹೆಚ್ಚಿನ ಬಡ್ಡಿ!!

(Salary Slip Details Do you know what are the parts there in the salary slip)

Comments are closed.