ಭಾನುವಾರ, ಏಪ್ರಿಲ್ 27, 2025
HomebusinessMutual Funds : ನಿಮಗೆ SIP ಬಗ್ಗೆ ಗೊತ್ತಾ? ಇದರ ಮೂಲಕವು ಲಕ್ಷಗಟ್ಟಲೇ ಹಣ ಗಳಿಸಬಹುದು.

Mutual Funds : ನಿಮಗೆ SIP ಬಗ್ಗೆ ಗೊತ್ತಾ? ಇದರ ಮೂಲಕವು ಲಕ್ಷಗಟ್ಟಲೇ ಹಣ ಗಳಿಸಬಹುದು.

- Advertisement -

ಈಗ ಹಣ ಹೂಡಿಕೆ (Investment)ಗೆ ಅನೇಕ ಮಾರ್ಗಗಳಿವೆ. ಸರ್ಕಾರದ ಯೋಜನೆ (Government Scheme) ಗಳ ಜೊತೆಗೆ ಸ್ಟಾಕ್‌ ಮಾರ್ಕೆಟ್‌ (Stock Market) ನ ವರಗೆ ಆಯ್ಕೆಗಳಿವೆ. ಹೂಡಿಕೆದಾರರು ಮ್ಯೂಚುವಲ್ ಫಂಡ್‌ (Mutual Funds) ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಸರ್ಕಾರಿ ಯೋಜನೆಗಳು ಮತ್ತು ಬ್ಯಾಂಕ್ ಎಫ್‌ಡಿಗಳಿಗಿಂತ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಆದಾಯವನ್ನು ಪಡೆಯಬಹುದಾಗಿದೆ. ಇವುಗಳು ಷೇರು ಪೇಟೆಗೆ ಅವಲಂಬಿಸಿರುವುದರಿಂದ ಅದರಲ್ಲಿ ಹಣವನ್ನು ಹೂಡಿಕೆ ಮಾಡುವುದು ಅಪಾಯಕಾರಿ ಎಂಬದು ಕೆಲವರ ಅನಿಸಿಕೆ. ಆದರೆ ಸರಿಯಾದ ಮಾಹಿತಿ ಮತ್ತು ದೀರ್ಘಕಾಲದವರೆಗೆ ಹಣವನ್ನು ಹೂಡಿಕೆ ಮಾಡುವ ಮೂಲಕ ಉತ್ತಮ ಲಾಭವನ್ನುಗಳಿಸಬಹುದು.

ನೀವು 10 ವರ್ಷಗಳಷ್ಟು ದೀರ್ಘಕಾಲದವರೆಗೆ ಹೂಡಿಕೆ ಮಾಡಬೇಕೆಂದುಕೊಂಡಿದ್ದರೆ ಅದಕ್ಕೆ, ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆಯಾಗಿದೆ. SIP ಮೂಲಕ ವ್ಯವಸ್ಥಿತ ರೀತಿಯಲ್ಲಿ ಹೂಡಿಕೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಾದರೆ ಯಾವ ಕಾರ್ಪಸ್ ಅನ್ನು ಆಯ್ಕೆ ಮಾಡಬೇಕೆಂದು ತಿಳಿಯೋಣ.

Mutual Funds : ಯೋಜನೆ ಹೀಗಿರಲಿ:

ಕೆಲವು ಇಕ್ವಿಟಿ ಮ್ಯೂಚುವಲ್ ಫಂಡ್‌ಗಳು ಉತ್ತಮ ರಿಟರ್ನ್ಸ್‌ ನೀಡುತ್ತವೆ. 10 ವರ್ಷಗಳವರೆಗೆ ಈಕ್ವಿಟಿ ಮಿಡ್ ಕ್ಯಾಪ್ ಫಂಡ್‌ನಲ್ಲಿ SIP ಮೂಲಕ ಹೂಡಿಕೆ ಮಾಡಿದರೆ ನೀರೀಕ್ಷಿತ ಲಾಭ ಗಳಿಸಬಹುದು. ಪ್ರತಿ ತಿಂಗಳು ನಿಗದಿತ ಹಣವನ್ನು SIP ಮೂಲಕ ಹೂಡಿಕೆ ಮಾಡುವುದು. ಒಂದೇ ಮ್ಯೂಚುವಲ್‌ ಫಂಡ್‌ನಲ್ಲಿ ತೊಡಗಿಸುವ ಬದಲಿಗೆ ನಾಲ್ಕೈದು ಉತ್ತಮ SIP ಖರೀದಿಸಿ ಅದರಲ್ಲಿ ಹಣ ತೊಡಗಿಸಬಹುದು.

ಈ ಮ್ಯೂಚುವಲ್ ಫಂಡ್‌ಗಳನ್ನು ನೀವು ಆಯ್ದುಕೊಳ್ಳಬಹುದು:
ತಜ್ಞರ ಪ್ರಕಾರ ಕೆಲವು ಲಾರ್ಜ್‌ ಕ್ಯಾಪ್‌ ಫಂಡ್‌ಗಳು ಉತ್ತಮ ರಿಟರ್ನ್ಸ್‌ ನೀಡುತ್ತಿವೆ. ಅವುಗಳೆಂದರೆ
ಕ್ವಾಂಟ್ ಫೋಕಸ್ಡ್ ಫಂಡ್
ಐಸಿಐಸಿಐ ಪ್ರುಡೆನ್ಶಿಯಲ್ ಬ್ಲೂಚಿಪ್ ಫಂಡ್
ಎಚ್‌ಡಿಎಫ್‌ಸಿ ಇಂಡೆಕ್ಸ್ ಫಂಡ್
ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ ಪ್ಲಾನ್ ಮತ್ತು
ಕೆನರಾ ರೊಬೆಕೊ ಬ್ಲೂಚಿಪ್ ಇಕ್ವಿಟಿ ಫಂಡ್‌ಗಳು

ಮಿಡ್‌ ಕ್ಯಾಪ್‌ನಲ್ಲಿ ಉತ್ತಮವಾಗಿರುವ ಮ್ಯೂಚುವಲ್‌ ಫಂಡ್‌ಗಳೆಂದರೆ
ಆಕ್ಸಿಸ್ ಮಿಡ್ ಕ್ಯಾಪ್ ಫಂಡ್ ಮತ್ತು
ಕೋಟಾಕ್ ಎಮರ್ಜಿಂಗ್ ಇಕ್ವಿಟಿ ಫಂಡ್‌ಗಳು ಸೇರಿವೆ.

ಇದನ್ನೂ ಓದಿ : Bank Holidays In December 2022 : ಡಿಸೆಂಬರ್‌ 2022ನಲ್ಲಿ ಒಟ್ಟು 14 ದಿನ ಬ್ಯಾಂಕ್‌ ರಜೆ; ಕರ್ನಾಟಕದಲ್ಲಿ 6 ದಿನ ಬ್ಯಾಂಕ್‌ ರಜೆ

ಇದನ್ನೂ ಓದಿ : SBI Recruitment 2022-2023 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಾವಕಾಶ ಕೂಡಲೇ ಅರ್ಜಿ ಸಲ್ಲಿಸಿ

(Mutual Funds investment in different large-cap and midcap SIP)

RELATED ARTICLES

Most Popular