Kumble Sundar Rao: ಹಿರಿಯ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್‌ ರಾವ್‌ ವಿಧಿವಶ

ಮಂಗಳೂರು: (Kumble Sundar Rao) ಯಕ್ಷರಂಗದ ಅಪ್ರತಿಮ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ (88ವರ್ಷ ) ಅವರು ವಯೋಸಹಜ ಕಾಯಿಲೆಯಿಂದ ಇಂದು ವಿಧಿವಶರಾಗಿದ್ದಾರೆ. ಇಬ್ಬರು ಪುತ್ರರು, ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದು, ಅಂತ್ಯ ಸಂಸ್ಕಾರ ಗುರುವಾರ(ನಾಳೆ) ನೆರವೇರಲಿದೆ. ಮಂಗಳೂರು ಪಂಪ್‌ವೆಲ್ ಬಳಿ ಇರುವ ಅವರ ಮನೆಯಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ಯಕ್ಷಗಾನ ಮತ್ತು ತಾಳ-ಮದ್ದಳೆ ಕಲಾವಿದರಾಗಿದ್ದ ಸುಂದರ್ ರಾವ್ (Kumble Sundar Rao), ಮಂಗಳೂರಿನ ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿಯೂ ಸೇವೆ‌ ಸಲ್ಲಿಸಿದ್ದರು.  1934 ಮಾರ್ಚ್ 20 ರಂದು ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ ಕುಂಬಳೆ ಸುಂದರ್ ರಾವ್ ಅವರು, 1994 ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಇವರು ಕಾರ್ಯ ನಿರ್ವಹಿಸಿದ್ದು, ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ‌ ಸಲ್ಲಿಸಿದ್ದಾರೆ. ಜೊತೆಗೆ ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂದಲೇ ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆ‌ಗೂ ಕೂಡ ಸುಂದರ್‌ ರಾವ್‌ ಅವರು ಪಾತ್ರರಾಗಿದ್ದಾರೆ.

ತಮಗಿರುವ ಯಕ್ಷಗಾನದ ಆಸಕ್ತಿಯಿಂದ ಅವರು ಕೇರಳದ ಕುಂಬಳೆಯಿಂದ ಮಂಗಳೂರಿಗೆ ಬಂದು ಯಕ್ಷಗಾನ ಕಲಾವಿದರಾಗಿ ಬಣ್ಣ ಹಚ್ಚಿದರು.  ತಮ್ಮ ಮಾತಿನ ಮೋಡಿಯಿಂದ ಎಂಥವರನ್ನೂ ತಲೆದೂಗುವಂತೆ ಮಾಡುತ್ತಿದ್ದರು. ಬಿಜೆಪಿಯ ಹಿರಿಯ ನಾಯಕ ಲಾಲಕೃಷ್ಣ ಅಡ್ವಾಣಿ ಅವರು ರಥಯಾತ್ರೆ ನಡೆಸಿದಾಗ ಕುಂಬಳೆ ಅವರು ಬಿಜೆಪಿ ಪರ ಮಾಡುತ್ತಿದ್ದ ಭಾಷಣಗಳನ್ನು ಗಮನಿಸಿದ್ದ ಬಿಜೆಪಿ 1994ರ ವಿಧಾನಸಭೆ ಚುನಾವಣೆಗೆ ಸುರತ್ಕಲ್ ಕ್ಷೇತ್ರದಿಂದ ಸ್ಪರ್ಧಿಸಲು ಕುಂಬಳೆ ಅವರಿಗೆ ಟಿಕೆಟ್ ನೀಡಿತ್ತು. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್​ನ ವಿಜಯಕುಮಾರ್ ಶೆಟ್ಟಿ ವಿರುದ್ಧ 4 ಸಾವಿರ ಮತಗಳ ಅಂತರದಿಂದ ಕುಂಬಳೆ ಗೆದ್ದಿದ್ದರು. ನಂತರ  1999 ರಲ್ಲಿ ವಿಜಯ್‌ ಕುಮಾರ್ ಶೆಟ್ಟಿ ಅವರ ವಿರುದ್ದ ನಿಂತು ಚುನಾವಣೆಯಲ್ಲಿ ಸೋತಿದ್ದು, ನಂತರ ಅವರಿಗೆ ಶಾಸಕರ ಸ್ಥಾನ ಸಿಗಲಿಲ್ಲ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ರಂಗಮಂದಿರವನ್ನು ಯಕ್ಷಗಾನ ಪ್ರದರ್ಶನಕ್ಕೆ ಒದಗಿಸಬೇಕು ಎಂದು ಹೋರಾಡಿದವರಲ್ಲಿ ಕುಂಬಳೆ ಸುಂದರ್​ ರಾವ್ ಪ್ರಮುಖರು. ಅವರ ಬದುಕಿನ ಕಥೆ ‘ಸುಂದರ ಕಾಂಡ’ ಹೆಸರಿನಲ್ಲಿ ಪ್ರಕಟವಾಗಿದೆ. ಯಕ್ಷಗಾನ ಅವ ಜೀವವಾಗಿತ್ತು. ‘ಯಕ್ಷಗಾನವನ್ನು ಆರ್ಥಿಕ ದೃಷ್ಟಿಯಿಂದ ನೋಡದೆ ಮಾನಸಿಕ ಸಮತೊಲನ ದೃಷ್ಟಿಯಿಂದ ಎಲ್ಲರೂ ನಮ್ಮದು ಎಂದುಕೊಳ್ಳಬೇಕು. ಯಕ್ಷಗಾನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ನಮಗೆಲ್ಲರಿಗೂ ಇದೆ. ಯಕ್ಷಗಾನ ಅವರದ್ದಲ್ಲ, ನನ್ನದಲ್ಲ ಎಂಬ ಭಾವನೆ ಸಲ್ಲದು. ಯಕ್ಷಗಾನವು ನಮ್ಮೆಲ್ಲರಿಗೂ ಸೇರಿದ್ದು ಎಂಬ ಭಾವನೆಯಿಂದ ಮುಂದುವರಿಯಬೇಕು’ ಎಂದು ಅವರು ಆಗಾಗ ಹೇಳುತ್ತಿದ್ದರು.

ಇದನ್ನೂ ಓದಿ : BMTC Bus Accident: ಬೈಕ್‌ – ಬಿಎಂಟಿಸಿ ಬಸ್‌ ಭೀಕರ ಅಪಘಾತ: ಇಬ್ಬರು ಸಾವು

ಇದನ್ನೂ ಓದಿ : BMTC Bus Accident: ಬೈಕ್‌ – ಬಿಎಂಟಿಸಿ ಬಸ್‌ ಭೀಕರ ಅಪಘಾತ: ಇಬ್ಬರು ಸಾವು

ಸುಂದರ್ ರಾವ್ ಅವರ ಯಕ್ಷಗಾನದ ಮೇಲಿನ ಆಸಕ್ತಿ, ಅವರ ಕಲೆ, ಮಾತುಗಾರಿಕೆಗಳನ್ನು ಮೆಚ್ಚಿ ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಕರ್ನಾಟಕ ರಾಜ್ಯ ಪ್ರಶಸ್ತಿ, ಬೆಹರಿನ್ ಕರ್ನಾಟಕ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ , ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ , ಪೇಜಾವರ ವಿಶ್ವೇಶ್ವ ತೀರ್ಥರಿಂದ ವಿಜಯವಿಠಲ ಪ್ರಶಸ್ತಿ, ಸೋದೆ ಮಠದ ಪರ್ಯಾಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಮೂಡಬಿದಿರೆ ಯಕ್ಷಸಂಗಮ ಪ್ರಶಸ್ತಿ , ಪಾವಂಜೆ ಯಕ್ಷಗಾನ ಸಪ್ತಾಹ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

ಯಕ್ಷರಂಗದ ಅಪ್ರತಿಮ ಕಲಾವಿದರಾದ ಕುಂಬಳೆ ಸುಂದರ್‌ ರಾವ್‌ ಅವರು ಇಂದು ಇಡೀ ಯಕ್ಷಲೋಕವನ್ನೇ ತೊರೆದು ಸ್ವರ್ಗಾಧೀನರಾಗಿದ್ದಾರೆ.

Kumble Sundar Rao (Kumble Sundar Rao) Legendary Yaksharang artist, former MLA Kumble Sundar Rao (88 years old) passed away today due to age related disease. He is survived by two sons and three daughters and the last rites will be performed on Thursday (tomorrow). Public viewing is allowed at his house near Mangalore Pumpwell.

Comments are closed.