ನವದೆಹಲಿ : ಹೊಸ ಆರ್ಥಿಕ ವರ್ಷ ಇಂದಿನಿಂದ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಹಲವು ನಿಮಯಗಳಲ್ಲಿ ಬದಲಾವಣೆಗಳಾಗಲಿದೆ. ಮೊಬೈಲ್ ಪೋನ್ ಬಿಡಿಭಾಗ, ಪೆಟ್ರೋಲ್, ಡಿಸೇಲ್, ಮದ್ಯ ದುಬಾರಿಯಾಗಲಿದೆ. ಆದರೆ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ.

ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ಜಿಎಸ್ ಟಿ ವಿವರದ ಹೊಸ ನಿಯಮವನ್ನು ಜಾರಿಗೆ ತಂದಿದೆ. ನೌಕರರ ಪಿಂಚಣಿ ಯೋಜನೆಯಡಿಯಲ್ಲಿ ಬರುವ 6 ಕೋಟಿಗೂ ಅಧಿಕ ಇಪಿಎಫ್ ಪಿಂಚಣಿದಾರರಿಗೆ ದೊಡ್ಡ ಮೊತ್ತದ ಪಿಂಚಣಿ ಇಂದಿನಿಂದಲೇ ಜಾರಿಗೆ ಬರಲಿದೆ.

ಬಜೆಟ್ ನಲ್ಲಿ ಘೋಷಣೆಯಾಗಿರೋ ಹಿನ್ನೆಲೆಯಲ್ಲಿ ಎಪ್ರಿಲ್ 1ರಿಂದಲೇ ಹೊಸ ನಿಮಯಗಳು ಜಾರಿಗೆ ಬರುತ್ತಿದ್ದು, ಮೊಬೈಲ್ ಪೋನ್ ಗಳ ಬಿಡಿಭಾಗಗಳ ತೆರಿಗೆ ಶೇ.12 ರಿಂದ ಶೇ.18ರ ವರೆಗೆ ಏರಿಕೆಯಾಗಲಿದ್ರೆ, ಪ್ರವಾಸ ತೆರಿಗೆಯಲ್ಲಿ ಶೇ.5ರಷ್ಟು ದುಬಾರಿಯಾಗಲಿದೆ.

ಆರ್ ಬಿಐ ರೆಪೋದರ ಕಡಿತಗೊಳಿಸಿರುವುದರಿಂದಾಗಿ ಹಲವು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿವೆ. ಹೀಗಾಗಿ ಇಂದಿನಿಂದಲೇ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ.

ವಿಮಾನ ಸಂಬಂಧಿನ ನಿರ್ವಹಣೆ, ರಿಪೇರಿ, ಓವರ್ ಹೌಲ್, ಜಿಎಸ್ ಟಿ ಶೇ.18 ರಿಂದ ಶೇ.5ಕ್ಕೆ ಇಳಿಕೆಯಾಗಲಿದ್ದು, ವಿಮಾನ ನಿರ್ವಹಣೆಯ ವೆಚ್ಚ ಕಡಿಮೆಯಾಗಲಿದೆ. ಇನ್ನು ಗುಡಿಕೈಗಾರಿಕೆಯಲ್ಲಿ ಸಿದ್ದಗೊಳ್ಳುವ ಬೆಂಕಿ ಪೊಟ್ಟಣಗಳ ಜಿಎಸ್ ಟಿಯಲ್ಲಿಯೂ ಕಡಿತವಾಗಲಿದೆ. ಶೇ.18ರಷ್ಟು ಪಾವತಿ ಮಾಡುತ್ತಿದ್ದ ಜಿಎಸ್ ಟಿ ದರ ಶೇ.12ಕ್ಕೆ ಇಳಿಕೆಯಾಗಲಿದೆ.