ಕೊರೊನಾಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿದೆ ಈ ಔಷಧಿ !

0

ನವದೆಹಲಿ : ಕೊರೊನಾ ಅನ್ನೋ ಮಹಾಮಾರಿ ವಿಶ್ವವನ್ನೇ ಕಾಡುತ್ತಿದೆ. ಜಗತ್ತಿನ ಬಲಿಷ್ಠ ರಾಷ್ಟ್ರಗಳೇ ಕೊರೊನಾ ಹೆಮ್ಮಾರಿಯ ಎದುರು ನಡುಗಿ ಹೋಗಿವೆ. ಕೊರೊನಾ ತಡೆಗಾಗಿ ವಿಶ್ವದಾದ್ಯಂತ ದೊಡ್ಡಮಟ್ಟ ಹೋರಾಟವೇ ನಡೆಯುತ್ತಿದೆ.

ಕೊರೊನಾ ಔಷಧಿ ತಯಾರಿಕೆಯಲ್ಲಿ ಹಲವು ಸಂಶೋಧನೆಗಳು ನಿರಂತರವಾಗಿವೆ. ನಿಖರವಾದ ಔಷಧಿ ಇನ್ನೂ ಪತ್ತೆಯಾಗಿಲ್ಲ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆ ಈ ಔಷಧಿಯನ್ನೇ ಸದ್ಯಕ್ಕೆ ಕೊರೊನಾ ಮದ್ದಾಗಿ ನೀಡಬಹುದು ಅಂತಾ ಶಿಫಾರಸ್ಸು ಮಾಡಿದೆ.

ಅಮೇರಿಕಾ, ಚೀನಾ, ಇಟಲಿ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿ ಔಷಧ ಕಂಡು ಹಿಡಿಯಲು ದೊಡ್ಡಮಟ್ಟದಲ್ಲಿಯೇ ಸಂಶೋಧನೆ ನಡೆಯುತ್ತಿದೆ. ಆದರೆ ಹಲವು ಪ್ರಯೋಗಗಳು ಯಶಸ್ವಿಯೂ ಆಗಿವೆ. ಆದರೆ ಕೊರೊನಾ ಸೋಂಕಿಗೆ ನಿಖರ ಮದ್ದು ಅಂತಾ ಹೇಳೋದಕ್ಕೆ ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕವಾಗಿ ಭಾರತದ ವೈದ್ಯರು ಕೊರೊನಾ ಸೋಂಕಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಬಳಸುವಂತೆ ಸೂಚಿಸಲಾಗಿದೆ.

ಆದರೆ ವಿಶ್ವದ ಕೆಲವು ರಾಷ್ಟ್ರಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ಹಾಗೂ ಅಜಿತ್ರೋಮೈಸಿನ್ ಅನ್ನೋ ಔಷಧಿಗಳನ್ನು ಬಳಕೆ ಮಾಡುತ್ತಿವೆ. ಇದರ ನಡುವಲ್ಲೇ ವಿಶ್ವ ಆರೋಗ್ಯ ಸಂಸ್ಥೆಯ ಆಯೋಗ ಸದ್ಯಕ್ಕೆ ಕೊರೊನಾಗೆ ಮದ್ದಾಗಿ ರೆಮ್ ಡೆಸಿವಿರ್ (Remdesivir) ಔಷಧಿಯನ್ನು ಬಳಕೆ ಮಾಡುವಂತೆ ಶಿಫಾರಸ್ಸು ಮಾಡಿದೆ.

ಅಮೇರಿಕಾದ ಗಿಲೀಡ್ ಸೈನ್ಸಸ್ ಅನ್ನೋ ಎಂಬ ಫಾರ್ಮಾ ಸಂಸ್ಥೆ ಈ ರೆಮ್ ಡೆಸಿವಿರ್ ಔಷಧವನ್ನು ತಯಾರಿಸುತ್ತಿದೆ. ವಿಶ್ವದಾದ್ಯಂತ ಹಲವು ರಾಷ್ಟ್ರಗಳು ಈಗಾಗಲೇ ಬಳಕೆ ಮಾಡಿವೆ. ಅಮೇರಿಕಾ ಮತ್ತು ಚೀನಾ ದೇಶಗಳು ಕೊರೊನಾ ರೋಗಿಗಳ ಮೇಲೆ ಈ ಔಷಧಿಯನ್ನು ಪ್ರಯೋಗ ಮಾಡಿವೆ.

ಮಾತ್ರವಲ್ಲ ರೆಮ್ ಡಿಸಿವಿರ್ ಕೊರೊನಾ ಸೋಂಕಿಗೆ ಹೆಚ್ಚು ಪರಿಣಾಮಕಾರಿ ಔಷಧಿಯೆನಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದೇ ಔಷಧಿಯನ್ನೇ ಕೊರೊನಾ ಸೋಂಕಿಗೆ ಶಿಫಾರಸ್ಸು ಮಾಡುವ ಸಾಧ್ಯತೆಯಿದೆ.

ಈ ಹಿಂದೆ ಕಾಂಗೋ ದೇಶಗಳಲ್ಲಿ ಕಾಣಿಸಿಕೊಂಡಿದ್ದ ಎಬೋಲೋ ಮಹಾಮಾರಿಯ ವಿರುದ್ದವೂ ಇದೇ ರೆಮ್ ಡಿಸಿವಿರ್ ಔಷಧಿಯನ್ನೇ ಬಳಕೆ ಮಾಡಲಾಗಿತ್ತು. ಆದರೆ ತದನಂತರದಲ್ಲಿ ಈ ಔಷಧಿ ಬಳಕೆ ಅಷ್ಟಾಗಿಲ್ಲ.


ಕೊರೊನಾ ಮಹಾಮಾರಿಯ ವಿರುದ್ದ ರೆಮ್ ಡಿಸಿವಿರ್ ಔಷಧವನ್ನೇ ಬಳಕೆ ಮಾಡಲು ವಿಶ್ವದ ರಾಷ್ಟ್ರಗಳು ಮುಂದಾದ್ರೆ ಇನ್ನೊಂದು ಸಮಸ್ಯೆ ಎದುರಾಗೋ ಸಾಧ್ಯತೆಯಿದೆ. ರೆಮ್ ಡೆಸಿವಿರ್ ಔಷಧದ ಪೇಟೆಂಟ್ ಹಕ್ಕನ್ನು ಅಮೇರಿಕಾದ ಗಿಲೀಡ್ ಸೈನ್ಸಸ್ ಸಂಸ್ಥೆ ಹೊಂದಿದೆ.

ಒಂದೊಮ್ಮೆ ಉತ್ಪಾದನೆಯ ಸಂಪೂರ್ಣ ಹಕ್ಕನ್ನು ಸಂಸ್ಥೆ ನೀಡಿದ್ರೆ ಏಕಸ್ವಾಮ್ಯತೆಗೂ ಎಡೆಮಾಡಿಕೊಟ್ಟು, ಔಷಧಿಯ ಬೆಲೆಯನ್ನು ನಿಯಂತ್ರಣಕ್ಕೆ ತರಲಾರದ ಸ್ಥಿತಿ ನಿರ್ಮಾಣವಾಗಬಹುದು ಅನ್ನೋ ಆತಂಕವೂ ಇದೆ.

ಆದರೆ ಗಿಲೀಡ್ ಸೈನ್ಸಸ್ ಫಾರ್ಮಾ ಕಂಪೆನಿ ಔಷಧಿಯನ್ನು ಕಡಿಮೆ ಬೆಲೆಗೆ ಒದಗಿಸುವುದಾಗಿ ಹೇಳಿಕೊಂಡಿದೆಯಾದ್ರೂ, ರೆಮ್ ಡೆಸಿವಿರ್ ಔಷಧವಾಗಿಯಷ್ಟೇ ಬಳಕೆ ಮಾಡಬಹುದು. ಆದರೆ ವ್ಯಾಕ್ಸಿನ್ ಅಥವಾ ಲಸಿಕೆಯಾಗಿ ಬಳಕೆ ಮಾಡಬೇಕಾದ್ರೆ ಕನಿಷ್ಠ 15 ತಿಂಗಳವರೆಗಾದ್ರೂ ಕಾಯಲೇ ಬೇಕಾಗುತ್ತದೆ.

Leave A Reply

Your email address will not be published.