ಗೃಹ ಸಾಲ ಪಡೆದವರಿಗೆ ಗುಡ್‌ನ್ಯೂಸ್ : ಆರ್‌ಬಿಐ ಹೊಸ ರೂಲ್ಸ್‌, 50 ಲಕ್ಷರೂ. ಗೃಹ ಸಾಲಕ್ಕೆ33 ಲಕ್ಷ ರೂ. ಬಡ್ಡಿ ಉಳಿತಾಯ

Home Loan Intrest Rate : ಗೃಹಸಾಲ ಬಡ್ಡಿದರ ಹೆಚ್ಚಳವಾದಾಗ ಸಾಲಗಾರರ ಅನುಕೂಲಕ್ಕೆ ಇಎಂಐ ಅವಧಿಯನ್ನು ಬ್ಯಾಂಕುಗಳು ಹೆಚ್ಚಳ ಮಾಡುತ್ತವೆ. ಹೀಗಾಗಿ ಹೆಚ್ಚಿನ ಬಡ್ಡಿಯನ್ನು ಗ್ರಾಹಕರು ಪಾವತಿ ಸಬೇಕು. ಇದೀಗ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಹೊಸ ರೂಲ್ಸ್‌ ಜಾರಿಗೆ ತಂದಿದ್ದು, ಬರೋಬ್ಬರಿ 33 ಲಕ್ಷ ಬಡ್ಡಿ ಉಳಿತಾಯವಾಗಲಿದೆ.

Home Loan Calculator : ಮನೆಕಟ್ಟುವುದು ಮಧ್ಯಮ ವರ್ಗದವರಿಗೆ ಕನಸಿನ ಮಾತು. ಆದ್ರೆ ಬ್ಯಾಂಕುಗಳು ಸಾಲ  (Bank Loan) ನೀಡುವ ಮೂಲಕ ಬಡವರು, ಮಧ್ಯಮ ವರ್ಗದವರ ಕನಸನ್ನು ಸಾಕಾರಗೊಳಿಸುತ್ತಿವೆ. ಇದೀಗ ಗೃಹಸಾಲ (Home Loan) ಪಡೆದವರಿಗೆ ಕೇಂದ್ರ ಸರಕಾರ (Central Government) ಗುಡ್‌ನ್ಯೂಸ್‌ ಕೊಟ್ಟಿದೆ. ಒಂದೊಮ್ಮೆ 50 ಲಕ್ಷ ರೂ. ಗೃಹ ಸಾಲಕ್ಕೆ ಪಡೆದಿದ್ರೆ ನಿಮಗೆ 33 ಲಕ್ಷ ರೂ. ಬಡ್ಡಿ ಉಳಿತಾಯವಾಗಲಿದೆ.

New RBI rules can help you save Rs 33 lakh in home loan interest in a Rs 50-lakh loan know how Home Loan Calculator
Image Credit to Original Source

ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of india) ರೇಪೋ ದರಗಳನ್ನು (Repo Rate ) 250 ಬೇಸಿಸ್ ಪಾಯಿಂಟ್‌ಗಳಿಂದ 4 ಪ್ರತಿಶತದಿಂದ 6.50 ಪ್ರತಿಶತಕ್ಕೆ ಹೆಚ್ಚಿಸಿದೆ/ ಇದರಿಂದಾಗಿ ಹೊಸದಾಗಿ ಗೃಹ ಸಾಲ ಪಡೆಯುವವರು ಹೆಚ್ಚು ಇಎಂಐ ಕಟ್ಟಬೇಕಾಗುತ್ತದೆ, ಆದರೆ ಈಗಾಗಲೇ ಸಾಲ ಪಡೆದವರಿಗೆ ಬ್ಯಾಂಕ್ ಗಳು ಸಾಲ ಮರುಪಾವತಿ ಅವಧಿಯನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ :  ಗೃಹಿಣಿಯರಿಗೆ ಗುಡ್ ನ್ಯೂಸ್ ಕೊಟ್ಟ ಸರಕಾರ , ಖಾತೆಗೆ 4000ರೂ. ಜಮೆ

ಅಂದರೆ ನೀವು ದೀರ್ಘಾವಧಿಯವರೆಗೆ EMI ಅನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕ್‌ಗಳು ಅಧಿಕಾರಾವಧಿಯನ್ನು ಇನ್ನೂ ಕೆಲವು ವರ್ಷ ಹೆಚ್ಚಳ ಮಾಡುವುದರಿಂದ ಸಾಲಗಾರರು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗಿದೆ. ಆದ್ರೆ ಆರ್‌ಬಿಐ ಇದೀಗ ಹೊಸ ರೂಲ್ಸ್‌ ಜಾರಿಗೆ ತಂದಿದೆ. ಇದು ಗೃಹಸಾಲ ಪಡೆದ ಸಾಲಗಾರರಿಗೆ ಪ್ರಯೋಜನವನ್ನು ತಂದುಕೊಡಲಿದೆ.

New RBI rules can help you save Rs 33 lakh in home loan interest in a Rs 50-lakh loan know how Home Loan Calculator
Image Credit Original Source

ಆರ್‌ಬಿಐ ಆಗಸ್ಟ್ 18 ರಂದು ಈ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹೊಸ ರೂಲ್ಸ್‌ ಪ್ರಕಾರ, ಬಡ್ಡಿದರಗಳು ಹೆಚ್ಚಾದಾಗ ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಕಂಪನಿಗಳು ಸಾಲಗಾರರಿಗೆ ತಿಳಿಸಬೇಕು. ಜೊತೆಗೆ ಇಎಂಐ ಹೆಚ್ಚಿಸಬೇಕೇ ಅಥವಾ ಅವಧಿಯನ್ನು ಹೆಚ್ಚಳ ಮಾಡಬೇಕೇ ಎನ್ನುವ ಆಯ್ಕೆಯನ್ನು ಗ್ರಾಹಕರು ಮಾಡಿಕೊಳ್ಳಲು ತಿಳಿಸಬೇಕು.

ಇದನ್ನೂ ಓದಿ : ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಅವಕಾಶವೇ ಇಲ್ಲ ! ಜಾರಿಯಾಯ್ತು ಸರಕಾರದ ಹೊಸ ಆದೇಶ

ಇನ್ನು ಸಾಲಗಾರರಿಗೆ ಸ್ಥಿರ ಬಡ್ಡಿದರ ಅಥವಾ ಪ್ಲೋಟಿಂಗ್‌ ಬಡ್ಡಿದರದ ಆಯ್ಕೆಯನ್ನು ಒದಗಿಸಬೇಕು. ನಿಗದಿತ ಬಡ್ಡಿದರದಿಂದ ಫ್ಲೋಟಿಂಗ್ ಬಡ್ಡಿದರಕ್ಕೆ ಬದಲಾಯಿಸುವ ಸಮಯದಲ್ಲಿ ಅಥವಾ ಫ್ಲೋಟಿಂಗ್‌ನಿಂದ ಸ್ಥಿರ ಬಡ್ಡಿದರಕ್ಕೆ ಬದಲಾಯಿಸುವ ಸಮಯದಲ್ಲಿ ಮಾತ್ರ ಶುಲ್ಕಗಳ ವಿವರಗಳನ್ನು ಗ್ರಾಹಕರಿಗೆ ವಿವರಿಸಬೇಕು. ಸಾಲ ಮಂಜೂರಾತಿ ಸಮಯದಲ್ಲಿ ಈ ವಿವರಗಳನ್ನು ಸೇರಿಸಬೇಕು.

ಸಾಲಗಾರರಿಗೆ ಸಾಲದ ಅವಧಿಯನ್ನು ಹೆಚ್ಚಿಸುವ, EMI ಮೊತ್ತವನ್ನು ಹೆಚ್ಚಿಸುವ ಅಥವಾ ಎರಡರ ಆಯ್ಕೆಯನ್ನು ನೀಡಬೇಕು. ಈ ಹೊಸ ನಿಯಮ ದೊಂದಿಗೆ, ಬ್ಯಾಂಕ್‌ಗಳು ಇಎಂಐ ಅವಧಿಯನ್ನು ಹೆಚ್ಚಿಸುವಾಗ ಅನಿಯಂತ್ರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಹೊಂದಿರುವುದಿಲ್ಲ.

50 ಲಕ್ಷ ರೂ. ಗೃಹ ಸಾಲಕ್ಕೆ (Home Loan) ರೂ.33 ಲಕ್ಷ ಬಡ್ಡಿ ಉಳಿತಾಯ !

ಬ್ಯಾಂಕುಗಳಿಂದ ಈವು ಒಂದೊಮ್ಮೆ 50 ಲಕ್ಷ ರೂ. ಗೃಹ ಸಾಲ ತೆಗೆದುಕೊಂಡಿದ್ದರೆ, ಸಾಲದ ಮರುಪಾವತಿಗೆ 38,765 ರೂ. ಇಎಂಐ, ಪಾವತಿ ಮಾಡಬೇಕು. ಈ ಲೆಕ್ಕಾಚಾರದಲ್ಲಿ ನೀವು ಒಟ್ಟು 43.04 ಲಕ್ಷ ರೂಪಾಯಿ ಬಡ್ಡಿದರವನ್ನು ನೀವು ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ. ನೀವು ಸಾಲ ತೆಗೆದುಕೊಂಡ ಮೂರು ವರ್ಷಗಳವರೆಗೆ ಬಡ್ಡಿ ದರವು ಶೇಕಡಾ 9.25 ಕ್ಕೆ ಹೆಚ್ಚಾಗುತ್ತದೆ.

New RBI rules can help you save Rs 33 lakh in home loan interest in a Rs 50-lakh loan know how Home Loan Calculator
Image Credit Original Source

ಇದನ್ನೂ ಓದಿ : ಪ್ರಧಾನಿ ವಿಶ್ವಕರ್ಮ ಯೋಜನೆ : ಕುಶಲಕರ್ಮಿಗಳಿಗೆ ಸಿಗುತ್ತೆ 2 ಲಕ್ಷರೂ. ಸಬ್ಸಿಡಿ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ?

ಒಂದು ವರ್ಷದೊಳಗೆ ರೆಪೋ ದರ ಶೇ.2.50ರಷ್ಟು ಏರಿಕೆಯಾಗಿದೆ. ಆರ್‌ಬಿಐ ಹೊಸ ನಿಯಮದ ಪ್ರಕಾರ,ಇಎಂಐ ಹೆಚ್ಚಿಸಬೇಕೇ ? ಅಥವಾ ಅವಧಿ ವಿಸ್ತರಣೆ ಮಾಡಬೇಕೆ ಎಂಬ ನಿರ್ಧಾರದ ಮೇಲೆ ನಿಮ್ಮ ಗೃಹಸಾಲದ ಬಡ್ಡಿದರ ಇಳಿಕೆ ಮಾಡಿಕೊಳ್ಳಬಹುದು. ಸಾಲ ಪಡೆದುಕೊಂಡ ಮೂರು ವರ್ಷಗಳ ನಂತರ ನೀವು 17 ವರ್ಷಗಳಲ್ಲಿ ಗೃಹ ಸಾಲವನ್ನು ಮರುಪಾವತಿಸಿದ್ರೆ, ಇಎಂಐ( EMI) 44,978 ರೂ.ಕ್ಕೆ ಏರಿಕೆ ಆಗಲಿದೆ. ಒಟ್ಟು ಬಡ್ಡಿ ರೂ. 55.7 ಲಕ್ಷ ಇರುತ್ತದೆ.

New RBI rules can help you save Rs 33 lakh in home loan interest in a Rs 50-lakh loan know how Home Loan Calculator

Comments are closed.