PAN Card News Rules : ಭಾರತೀಯ ಪ್ರಜೆಗಳಿಗೆ ಕೇಂದ್ರ ಸರಕಾರ ಆಧಾರ್ ಕಡ್ಡಾಯಗೊಳಿಸಿದೆ. ಯಾವುದೇ ವ್ಯವಹಾರಕ್ಕೆ ಆಧಾರ್ (Aadhaar Card) ಎಷ್ಟು ಮಹತ್ವವೋ ಅಷ್ಟೇ ಪ್ಯಾನ್ ಕಾರ್ಡ್ (Pan Card) ಕೂಡ. ಆಸ್ತಿ ಖರೀದಿ, ಆಸ್ತಿ ಮಾರಾಟ, ಬ್ಯಾಂಕಿಂಗ್ ವ್ಯವಹಾರ ಸೇರಿದಂತೆ ಎಲ್ಲಾ ಹಣಕಾಸಿನ ವ್ಯವಹಾರದಕ್ಕೆ (money Transactions) ಪ್ಯಾನ್ ಕಡ್ಡಾಯ. ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹೊಸ ರೂಲ್ಸ್ ಜಾರಿಗೆ ತಂದಿದ್ದು, ಈ ಕೆಲಸ ಮಾಡಿಸದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗುವುದು ಗ್ಯಾರಂಟಿ.
ದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹಲವು ಕಾನೂನುಗಳನ್ನು ರೂಪಿಸುತ್ತಿದೆ. ಇದರ ಭಾಗವಾಗಿಯೇ ಪ್ರತಿಯೊಬ್ಬರೂ ಕೂಡ ಪ್ಯಾನ್ ಕಾರ್ಡ್ ಹೊಂದುವುದನ್ನು ಕಡ್ಡಾಯಗೊಳಿಸಿದೆ. ಅಲ್ಲದೇ ಪ್ಯಾನ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವಂತೆಯೂ ತಿಳಿಸಿದೆ.

ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ (Aadhaar Card -Pan Card Link) ಮಾಡಲು ಕೇಂದ್ರ ಸರಕಾರ ಈಗಾಗಲೇ ಆದೇಶವನ್ನು ಹೊರಡಿಸಿತ್ತು. ಆರಂಭ ದಲ್ಲಿ ಉಚಿತವಾಗಿ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಸೂಚಿಸಿದ್ದು, ನಂತರ ದಂಡ ಪಾವತಿಸಿ ಲಿಂಕ್ ಮಾಡಬಹುದಾಗಿತ್ತು. ಆದ್ರೆ ಇನ್ಮುಂದೆ ಹಣ ಪಾವತಿ ಮಾಡಿದ್ರೂ ಕೂಡ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಅಸಾಧ್ಯ.
ಇದನ್ನೂ ಓದಿ : ಮುಂದಿನ ಐದು ವರ್ಷಗಳ ಅವಧಿಗೆ ಸಿಗಲಿದೆ ಫ್ರೀ ಅಕ್ಕಿ, ಬೇಳೆ : ಪ್ರಧಾನಿ ಮೋದಿ ಗುಡ್‌ನ್ಯೂಸ್
ಒಂದೊಮ್ಮೆ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಆಗದೇ ಇದ್ರೆ ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಲು ಸಾಧ್ಯ ಆಗುವುದಿಲ್ಲ. ಅಷ್ಟೇ ಯಾಕೆ ಬ್ಯಾಂಕಿನಲ್ಲಿ ಖಾತೆ ಹೊಂದಬೇಕಾದ್ರೂ ಪ್ಯಾನ್ ಕಾರ್ಡ್ ಕಡ್ಡಾಯ. ವಯಸ್ಕರಿಗೆ ಮಾತ್ರವಲ್ಲ, ಸಣ್ಣ ಮಕ್ಕಳು ಬ್ಯಾಂಕ್ ಖಾತೆ (Bank Account) ತೆರೆಯುವಾಗಲೂ ಪ್ಯಾನ್ ಕಡ್ಡಾಯಗಳನ್ನು ಬ್ಯಾಂಕುಗಳು ಕೇಳುತ್ತಿವೆ.
ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ನೀವು ಈಗಾಗಲೇ ಲಿಂಕ್ ಮಾಡಿಸಿದ್ದರೆ ನಿಮಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಒಂದೊಮ್ಮೆ ಆಧಾರ್ ಕಾರ್ಡ್ ಜೊತೆಗೆ ನೀವು ಪ್ಯಾನ್ ಕಾರ್ಡ್ ಲಿಂಕ್ ಮಾಡದೇ ಇದ್ದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಕೂಡ ರದ್ದಾಗಲಿದೆ.
ಇದನ್ನೂ ಓದಿ : ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?
ಕೇಂದ್ರ ಸರಕಾರಗಳು ಇಷ್ಟು ಅವಕಾಶ ನೀಡಿದ್ದರೂ ಕೂಡ ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡಲು ವಿಳಂಬ ನೀತಿಯನ್ನು ಅನುಸರಿಸಿದ್ದವರಿಗೆ, ಹಣಕಾಸಿನ ವ್ಯವಹಾರಗಳನ್ನು ನಡೆಸೋದಕ್ಕೆ ಸಾಧ್ಯವಿಲ್ಲ. ಅಷ್ಟೇ ಯಾಕೆ ಯಾವುದೇ ಆಸ್ತಿಯನ್ನು ಖರೀದಿ ಮಾಡಲು ಇನ್ಮುಂದೆ ಅಸಾಧ್ಯವಾಗಲಿದೆ ಎನ್ನಲಾಗುತ್ತಿದೆ.

ನೀವಿನ್ನೂ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಲಿಂಕ್ ಮಾಡದೇ ಇದ್ದು, ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ನಡೆಸಿ ಸಿಕ್ಕಿಬಿದ್ರೆ ಆದಾಯ ತೆರಿಗೆ ಇಲಾಖೆ (Income tax Department) ನಿಮಗೆ ದುಪ್ಪಟ್ಟು ದಂಡವನ್ನು ವಿಧಿಸಲಿದೆ. ಹಿಂದೆಲ್ಲಾ ತೆರಿಗೆ ಪಾವತಿ ಮಾಡುವವರು ಮಾತ್ರವೇ ಪ್ಯಾನ್ ಕಾರ್ಡ್ ಹೊಂದಬೇಕಾಗಿತ್ತು. ಆದರೆ ಇದೀಗ ಬ್ಯಾಂಕುಗಳು ಖಾತೆಯನ್ನು ತೆರೆಯಲು ಕೂಡ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿವೆ.
ಇದನ್ನೂ ಓದಿ : ವಾರಕ್ಕೆ 5 ದಿನ ಕೆಲಸ, ವೇತನದಲ್ಲಿ ಶೇ.15ರಷ್ಟು ಹೆಚ್ಚಳ : ನೌಕರರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್
New Rules for Pan Card Holders, Aadhaar Pan Link New Order by Central Government