ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?

How to Apply for yuva nidhi yojana : ರಾಜ್ಯ ಸರ್ಕಾರ ಡಿಸೆಂಬರ್ ನಿಂದ ಯುವನಿಧಿ ಯೋಜನೆಯಡಿ (Yuva Nidhi Scheme) ಪದವೀಧರರಿಗೆ ಮೂರು ಸಾವಿರ ಹಾಗೂ ಡಿಪ್ಲೋಮಾ ಪದವಿ ಪಡೆದವರಿಗೆ ಒಂದೂವರೆ ಸಾವಿರ ಸಹಾಯಧನ ಎಂದಿದೆ.

yuva nidhi yojana  : ರಾಜ್ಯದಲ್ಲಿ ಸದ್ಯ ಕರ್ನಾಟಕ ‌ಸರಕಾರದ ಗ್ಯಾರಂಟಿ ಯೋಜನೆಗಳು ಜನರ ಮನಗೆದ್ದಿವೆ. ಈಗಾಗಲೇ ಫ್ರೀ ಬಸ್, ಗೃಹಿಣಿಯರಿಗೆ 2 ಸಾವಿರ ರೂಪಾಯಿ ಸಹಾಯಧನ ಹಾಗೂ ಗೃಹಜ್ಯೋತಿ,  ಫ್ರೀ ಅಕ್ಕಿ ಹೀಗೆ ಸೌಲಭ್ಯಗಳ ಮಹಾಪೂರವನ್ನೇ ಹರಿಸಿರೋ ಸರ್ಕಾರ ಕೊನೆಯ ಭಾಗ್ಯವಾಗಿರೋ ಯುವ ನಿಧಿಗೆ ಮುಹೂರ್ತ ಫಿಕ್ಸ್ ಮಾಡಿದೆ. ಇದೇ ಬರುವ ಡಿಸೆಂಬರ್ ನಲ್ಲಿ ಯೋಜನೆ ಆರಂಭ ವಾಗಲಿದೆ. ಹಾಗಿದ್ದರೇ ಯುವನಿಧಿ ಯೋಜನೆ (Yuva Nidhi Scheme) ಹಣ ಪಡೆಯೋಕೆ ಏನೆಲ್ಲ ಬೇಕು ? ಯಾವೆಲ್ಲ ದಾಖಲೆಗಳು ಬೇಕು ? ಇಲ್ಲಿದೆ ಡಿಟೇಲ್ಸ್.

How to Apply for yuva nidhi yojana yuva nidhi scheme get 3000 for graduate, 1500 for diploma Holders in Karnataka
Image Credit to Oiginal Source

ರಾಜ್ಯದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು (Congress Gurantee)  ಘೋಷಿಸಿತ್ತು. ಅದರಲ್ಲಿ ನಿರುದ್ಯೋಗಿಗಳಿಗಾಗಿ ಸಹಾಯಧನ ನೀಡುವ ಯೋಜನೆ ಕೂಡ ಒಂದು. ಯುವನಿಧಿ ಎಂದು ಹೆಸರಿಡಲಾಗಿತ್ತು. ಆದರೆ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಈ ಯೋಜನೆಯ ಬಗ್ಗೆ ಸರ್ಕಾರ‌ ಚಕಾರ ಎತ್ತಿರಲಿಲ್ಲ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಇಂದೇ ಈ ಕೆಲಸ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗೋದು ಗ್ಯಾರಂಟಿ

ಹೀಗಾಗಿ ಬಿಜೆಪಿ ಸೇರಿದಂತೆ ವಿಪಕ್ಷಗಳು ಸರ್ಕಾರ ಯುವನಿಧಿ ಹಣ ನೀಡದೇ ಯುವಕರನ್ನು ಮೂರ್ಖರನ್ನಾಗಿಸಿದೆ ಎಂದು ಆರೋಪಿಸಿತ್ತು. ಆದರೆ ಲೋಕಸಭಾ ಚುನಾವಣೆಯವರೆಗೆ ಯಾವುದೇ ಕಾರಣಕ್ಕೂ ಜನರ ವಿಶ್ವಾಸ ಕಳೆದುಕೊಳ್ಳದಿರಲು ಪ್ಲ್ಯಾನ್ ಮಾಡಿರೋ ರಾಜ್ಯ ಸರ್ಕಾರ ಡಿಸೆಂಬರ್ ನಿಂದ ಯುವನಿಧಿ ಯೋಜನೆಯಡಿ (Yuva Nidhi Scheme) ಪದವೀಧರರಿಗೆ ಮೂರು ಸಾವಿರ ಹಾಗೂ ಡಿಪ್ಲೋಮಾ ಪದವಿ ಪಡೆದವರಿಗೆ ಒಂದೂವರೆ ಸಾವಿರ ಸಹಾಯಧನ ಎಂದಿದೆ.

How to Apply for yuva nidhi yojana yuva nidhi scheme get 3000 for graduate, 1500 for diploma Holders in Karnataka
Image Credit to Oiginal Source

ಈ ಬಗ್ಗೆ ಸ್ವತಃ ಸಿಎಂ ಸಿದ್ಧರಾಮಯ್ಯ (CM Siddaramaiah)  ಹಾಗೂ ಉನ್ನತ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮಾತನಾಡಿದ್ದು, ಡಿಸೆಂಬರ್ ನಿಂದ ಈ ಯೋಜನೆ ಜಾರಿಗೆ ಬರಲಿದೆ. ಇದಕ್ಕಾಗಿ ಅಂದಾಜು 2500 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಮುಂದಿನ ಐದು ವರ್ಷಗಳ ಅವಧಿಗೆ ಸಿಗಲಿದೆ ಫ್ರೀ ಅಕ್ಕಿ, ಬೇಳೆ : ಪ್ರಧಾನಿ ಮೋದಿ ಗುಡ್​ನ್ಯೂಸ್​

ಇನ್ನೇನು ಕೆಲ ದಿನಗಳಲ್ಲಿ ಯುವನಿಧಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಇನ್ನು ಕರ್ನಾಟಕದ ಯುವನಿಧಿ ಯೋಜನೆಯ ಫಲಾನುಭವಿ ಆಗುವುದಕ್ಕೆ ಇರಬೇಕಾದ ಅರ್ಹತೆ ಮತ್ತು ಸಿಗುವ ಭತ್ಯೆ ವಿವರಗಳೇನು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. 2022 ಮತ್ತು 23 ನೇ ಸಾಲಿನಲ್ಲಿ ವಿವಿಧ ವೃತ್ತಿಪರ ಕೋರ್ಸ್ ಸೇರಿದಂತೆ ವಿವಿಧ ಕೋರ್ಸ್ ಗಳಲ್ಲಿ ಉತ್ತೀರ್ಣರಾದ ಎಲ್ಲ ಪದವೀಧರರಿಗೆ ಆರು ತಿಂಗಳ ಕಾಲ ಎಲ್ಲೂ ಉದ್ಯೋಗ ದೊರೆಯದೇ ಹೋದಲ್ಲಿ ಅವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ? 

  • ಈ ಯೋಜನೆಗೆ ಅರ್ಜಿಯನ್ನು ಕಡ್ಡಾಯವಾಗಿ ಸೇವಾಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸಬೇಕು.
  • ನಿರುದ್ಯೋಗಿಗಳಾಗಿರೋದರ ಬಗ್ಗೆ ಸ್ವಯಂ ಘೋಷಣೆ ಸಾಕು.
  • ಈ ಯೋಜನೆ ಕೇವಲ ಕನ್ನಡಿಗರಿಗೆ ಮಾತ್ರ ಅನ್ವಯ. ಅದು ಶಿಕ್ಷಣ ಮುಗಿದ ಆರು ತಿಂಗಳ ಬಳಿಕವೂ ಉದ್ಯೋಗ ದೊರೆಯದವರಿಗೆ ಮಾತ್ರ ಈ ಯೋಜನೆ ಅನ್ವಯ
  • ಈ‌ ಯೋಜನೆ ಒಬ್ಬ ನಿರುದ್ಯೋಗಿಗೆ ಎರಡು ವರ್ಷಗಳ ಕಾಲ‌ಮಾತ್ರ ಸೀಮಿತ. ಎರಡು ವರ್ಷದಲ್ಲಿ ಉದ್ಯೋಗ ದೊರೆತರೇ ಯೋಜನೆ ಸ್ಥಗಿತ.
  • ಪ್ರತಿ ತಿಂಗಳು ಡಿಬಿಟಿ ಮೂಲಕ ಹಣ ಸಂದಾಯವಾಗಲಿದೆ.
  • ಉದ್ಯೋಗ ದೊರೆತಿದ್ದನ್ನೂ ಸ್ವಯಂ ಘೋಷಣೆ ಮಾಡಿಕೊಂಡು ಭತ್ಯೆ ಸ್ವೀಕರಿಸುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ.
  • ಈ ಅರ್ಜಿಗೆ ಪದವಿ ಪ್ರಮಾಣ ಪತ್ರ, ಆಧಾರ ಕಾರ್ಡ್, ಪಾನ್ ಕಾರ್ಡ್ ಹಾಗೂ ವಾಸ್ತವ್ಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
  • ಆದರೆ ಈ ಯೋಜನೆಗೆ ಬಿಪಿಎಲ್ ಅಥವಾ ಆಹಾರ ಪಡಿತರ ಚೀಟಿ ಕಡ್ಡಾಯವೇ ಎಂಬುದರ ಬಗ್ಗೆ ಇನ್ನೂ ಸರ್ಕಾರ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ ಬಿಗ್​ ಗಿಫ್ಟ್​ : ಕೇವಲ 3 ಸಾವಿರ ವಿನಿಯೋಗಿಸಿ ಗಳಿಸಿ ಲಕ್ಷಾಂತರ ಹಣ !

ಒಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯದ ಕಾಂಗ್ರೆಸ್‌ ಸರಕಾರ ಇದೀಗ ಯುವನಿಧಿ ಯೋಜನೆ ಜಾರಿಗೆ ತರಲು ಮುಂದಾಗಿದೆ. ಸದ್ಯದಲ್ಲೆ ಸರ್ಕಾರ ನಿರುದ್ಯೋಗಿಗಳ ಕಿಸೆಗೆ ಪಾಕೆಟ್ ಮನಿ ತುಂಬಿಸೋ ಮೂಲಕ ಲೋಕಸಭೆ ಚುನಾವಣೆಗೆ ಓಟ್ ಬ್ಯಾಂಕ್ ಭದ್ರ ಮಾಡಿಕೊಳ್ತಿರೋದಂತು ನಿಜ.

How to Apply for yuva nidhi yojana , yuva nidhi scheme get 3000 for graduate, 1500 for diploma Holders in Karnataka

Comments are closed.