ನವದೆಹಲಿ : ಮಹಾಮಾರಿ ಕರೋನಾ ವಿಶ್ವವನ್ನೇ ಭಯಭೀತಗೊಳಿಸಿದೆ. ಇದೀಗ ವಿಶ್ವದ ಪ್ರಖ್ಯಾತ ಸ್ಪೋರ್ಟ್ ಕಂಪೆನಿ ನೈಕ್ ಗೂ ಕೊರೊನಾ ಭೀತಿ ತಟ್ಟಿದೆ. ನೈಕ್ ಕಂಪೆನಿ ವಿಶ್ವದ ತನ್ನೆಲ್ಲಾ ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಿದೆ.

ಕಂಪೆನಿಯ ಸಿಬ್ಬಂದಿ ಹಾಗೂ ಗ್ರಾಹಕರ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆಯಾಗಿದ್ದು, ಅಮೇರಿಕಾ ಸೇರಿದಂತೆ ವಿಶ್ವದಲ್ಲಿರುವ ನೈಕ್ ಮಳಿಗೆಗೆಗಳನ್ನು ನೈಕ್ ಕಂಪೆನಿ ತಾತ್ಕಾಲಿಕವಾಗಿ ಮುಚ್ಚಲಿದೆ.

ವೈರಸ್ ಸೋಂಕು ಹರಡದಂತೆ ತಡೆಯವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ನೈಕ್ ಕಂಪೆನಿ ಅಧಿಕೃತವಾಗಿ ಹೇಳಿಕೊಂಡಿದೆ. ಮಾರ್ಚ್ 27ರ ವರೆಗೆ ವಿಶ್ವದ ಎಲ್ಲಾ ನೈಕ್ ಮಳಿಗೆಗಳು ಬಂದ್ ಆಗಲಿವೆ.