No LPG subsidy : ಮೊದಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ದೇಶದ ಜನತೆಗೆ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಶಾಕ್ ನೀಡಿದೆ. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಗಳಿಗೆ ಯಾವುದೇ ಸಬ್ಸಿಡಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ವಿಚಾರವಾಗಿ ಮಾತನಾಡಿದ ಇಂಧನ ಇಲಾಖೆಯ ಕಾರ್ಯದರ್ಶಿ ಪಂಕಜ್ ಚೌಧರಿ, ಗ್ರಾಹಕರು ಇನ್ಮುಂದೆ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಗಳನ್ನು ಮಾರುಕಟ್ಟೆಯ ದರದಲ್ಲಿಯೇ ಖರೀದಿ ಮಾಡಬೇಕು. ಕೋವಿಡ್ ಶುರುವಾದಾಗಿನಿಂದ ಎಲ್ಪಿಜಿ ಸಬ್ಸಿಡಿ ನೀಡಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿಯೂ ಸಬ್ಸಿಡಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೋವಿಡ್ಗಿಂತಲೂ ಮುಂಚೆ ಗೃಹ ಬಳಕೆಯ ಸಿಲಿಂಡರ್ಗಳು ಸಬ್ಸಿಡಿ ದರದಲ್ಲಿ ಸಿಗುತ್ತಿದ್ದವು. ಆದರೆ ಸಬ್ಸಿಡಿ ಹಣಕ್ಕೆ ನೀಡಲಾಗುತ್ತಿದ್ದ ಸಿಲಿಂಡರ್ಗಳು ದುರುಪಯೋಗವಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ನಿಯಮಾವಳಿಗಳಲ್ಲಿ ಬದಲಾವಣೆಯನ್ನು ಮಾಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಬ್ಸಿಡಿ ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಹಾಕುತ್ತಿತ್ತು. ಆದರೆ ಕೋವಿಡ್ ಸಂಕಷ್ಟ ಎದುರಾದಾಗಿನಿಂದ ಈ ಯೋಜನೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿತ್ತು.
ಸಮಾಧಾನಕಾರ ವಿಚಾರ ಏನೆಂದರೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡವರು ಎಲ್ಪಿಜಿ ಸಿಲಿಂಡರ್ಗಳಿಗೆ ಸಬ್ಸಿಡಿಯನ್ನು ಪಡೆಯಲಿದ್ದಾರೆ. ಆದರೆ ಉಳಿದವರಿಗೆ ಸಬ್ಸಿಡಿ ಭಾಗ್ಯ ಇರುವುದಿಲ್ಲ. ಹೀಗಾಗಿ ಸಾಮಾನ್ಯ ಜನತೆಗೆ ಮಾರುಕಟ್ಟೆಯ ದರದಲ್ಲಿ 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ 1006 ರೂಪಾಯಿಗಳಿಗೆ ಸಿಕ್ಕರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು 200 ರೂಪಾಯಿ ಸಬ್ಸಿಡಿಯನ್ನು ಪಡೆಯಲಿದ್ದಾರೆ.
ಇದನ್ನು ಓದಿ : Kerala HC Reunites Lesbian : ಪೋಷಕರ ಒತ್ತಡದಿಂದ ದೂರಾದ ಸಲಿಂಗಕಾಮಿಗಳನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್
ಇದನ್ನೂ ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್ರೇಪ್ಗೆ ಸುಪಾರಿ ಕೊಟ್ಟ ಪತ್ನಿ
No LPG subsidy to households, Rs 200 LPG dole limited to Ujjwala beneficiaries