NPCI mandatory for Gruha Lakshmi Scheme : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಈಗಾಗಲೇ ಐದು ಕಂತುಗಳ ಹಣವನ್ನು ಸ್ವೀಕಾರ ಮಾಡಿದ್ದಾರೆ. 6ನೇ ಕಂತಿನ ಹಣಕ್ಕಾಗಿ ಕಾದು ಕುಳಿತಿದ್ದಾರೆ. ಈ ನಡುವಲ್ಲೇ ಸರಕಾರ ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಲು ಹೊಸ ರೂಲ್ಸ್ ಜಾರಿ ಮಾಡಿದ್ದು, ಎನ್‌ಪಿಸಿಐ (NPCI) ಕಡ್ಡಾಯ ಗೊಳಿಸಿದೆ. ಅಷ್ಟಕ್ಕೂ ಏನಿದು ಎನ್‌ಸಿಪಿಐ ? ಅದನ್ನು ಮಾಡುವುದು ಹೇಗೆ ಅನ್ನೋ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ಮೂಲಕ ಮನೆಯ ಯಜಮಾನಿ ಪ್ರತೀ ತಿಂಗಳು 2 ಸಾವಿರ ರೂಪಾಯಿ ಸಹಾಯಧನವನ್ನು ಪಡೆಯುತ್ತಿದ್ದಾಳೆ. ಆದರೆ ಬಹುತೇಕರಿಗೆ ಇನ್ನೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಕ್ಕಿಲ್ಲ. ಆದರೆ ಕೆಲವರು 6ನೇ ಕಂತಿನ ಹಣಕ್ಕಾಗಿ ಕಾದು ಕುಳಿತಿದಿದ್ದಾರೆ.

ರಾಜ್ಯ ಸರಕಾರದ ಉನ್ನತ ಮೂಲಗಳ ಮಾಹಿತಿಯ ಪ್ರಕಾರ ಗೃಹಲಕ್ಷ್ಮೀ ಯೋಜನೆಯ 6ನೇ ಕಂತಿನ ಹಣ ಯಾವಾಗ ವರ್ಗಾವಣೆ ಎಂಬ ಪ್ರಶ್ನೆಗೆ ಸದ್ಯ ಉತ್ತರ ದೊರಕಿದೆ. ಫೆಬ್ರವರಿ ಮೊದಲ ವಾರದಲ್ಲೇ ಜಮೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಇಲಾಖೆಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಈ ನಡುವಲ್ಲೇ ರಾಜ್ಯ ಸರಕಾರ ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಹೊಸ ರೂಲ್ಸ್ ಜಾರಿ ಮಾಡಿದೆ. ಇಕೆವೈಸಿ, ಆಧಾರ್ ಸೀಡಿಂಗ್ ಮಾಡಿದ್ದರೂ ಕೂಡ ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಬೇಕಾದ್ರೆ ಕಡ್ಡಾಯವಾಗಿ ಎನ್‌ಪಿಸಿಐ ಮಾಡಿಸಲೇ ಬೇಕಾಗಿದೆ. ಎನ್‌ಪಿಸಿಐ ಮಾಡಿಸದೇ ಇದ್ದರೆ ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗುವುದಿಲ್ಲ.
ಇದನ್ನೂ ಓದಿ : ಯುವನಿಧಿಗೆ ಸರ್ಕಾರಿ ನಿಯಮಗಳೇ ಅಡ್ಡಿ: ಇದುವರೆಗೂ ಸಲ್ಲಿಕೆಯಾದ ಅರ್ಜಿ ಎಷ್ಟು ಗೊತ್ತಾ ?
ಏನಿದು ಎನ್‌ಪಿಸಿಐ (NPCI) ? ಮಾಡಿಸುವುದು ಹೇಗೆ ?
ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (National Payment Corporation of India- NPCI) ಪ್ರತಿಯೊಬ್ಬರೂ ಕೂಡ ಇನ್ಮುಂದೆ ಎನ್‌ಪಿಸಿಐ ಮಾಡಿಸಲೇ ಬೇಕಾಗಿದೆ. ಎನ್‌ಪಿಸಿಐಯನ್ನು ನಿಮ್ಮ ಸಮೀಪದ ಬ್ಯಾಂಕ್‌ಗೆ ತೆರಳಿ ಮಾಡಿಸಿಕೊಳ್ಳಬಹುದಾಗಿದೆ. ಆಧಾರ್ ಕಾರ್ಡ್ (Aadhaar Card) , ರೇಷನ್ ಕಾರ್ಡ್ (Ration Card) ದಾಖಲಾತಿಯ ಜೊತೆಗೆ ಬ್ಯಾಂಕ್ ವಿವರವನ್ನು ನೀಡಿದ್ರೆ, ಎನ್‌ಪಿಸಿಐ ಮಾಡಿಸಿಕೊಡುತ್ತಾರೆ.

ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲು ಕೂಡ ರಾಜ್ಯ ಸರಕಾರ ಅವಕಾಶವನ್ನು ಕಲ್ಪಿಸಿದೆ. ತಾಂತ್ರಿಕ ಕಾರಣ ಗಳಿಂದಾಗಿ ಹಲವರು ಸಲ್ಲಿಸಿದ್ದ ಗೃಹಲಕ್ಷ್ಮೀ ಯೋಜನೆಯ ಅರ್ಜಿ ತಿರಸ್ಕಾರ ಗೊಂಡಿತ್ತು. ಆದ್ರೀಗ ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸಲ್ಲಿಸ ಬಹುದಾಗಿದೆ. ಈಗಾಗಲೇ ಅರ್ಜಿಯನ್ನು ಸಲ್ಲಿಸಿ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರೆ ನೀವು ಕೂಡಲೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನೂ ಓದಿ : ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇದ್ರೆ ಸಾಕು, ಮಹಿಳೆಯರಿಗೆ ಸಿಗಲಿದೆ ಬಡ್ಡಿ ರಹಿತ 3 ಲಕ್ಷ ರೂಪಾಯಿ ಸಾಲ
ಇಷ್ಟೇ ಅಲ್ಲಾ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಐದು ಕಂತುಗಳ ಹಣ ಲಭಿಸಿಲ್ಲ. ಹೀಗಾಗಿ ಈಗಾಗಲೇ ಮೂರು, ನಾಲ್ಕು ಕಂತುಗಳ ಹಣ ಪಾವತಿಯಾಗಿ ಉಳಿದ ಹಣ ಪಾವತಿ ಆಗದೇ ಇದ್ದರೆ, ಅಂತಹವರ ಖಾತೆಗೆ ಹಣ ಜಮೆ ಮಾಡಲು ರಾಜ್ಯ ಸರಕಾರ ನಿರ್ಧಾರ ಮಾಡಿದೆ. ಹೀಗಾಗಿ 6ನೇ ಕಂತು ಪಾವತಿಯ ವೇಳೆಯಲ್ಲಿ ಪೆಂಡಿಂಗ್ ಇರುವ ಹಣವೂ ಕೂಡ ಜಮೆ ಆಗಲಿದೆ.
NPCI is mandatory for Gruha Lakshmi Scheme, Government has implemented new rules