ಯುವನಿಧಿಗೆ ಸರ್ಕಾರಿ ನಿಯಮಗಳೇ ಅಡ್ಡಿ: ಇದುವರೆಗೂ ಸಲ್ಲಿಕೆಯಾದ ಅರ್ಜಿ ಎಷ್ಟು ಗೊತ್ತಾ ?

Yuva Nidhi Scheme : ಕರ್ನಾಟಕದಲ್ಲಿ ಯುವನಿಧಿಗೆ ಅರ್ಜಿ ಸಲ್ಲಿಕೆಯಾಗಿಲ್ಲ. ಹಾಗಿದ್ದರೇ ಏನದು ಸಮಸ್ಯೆ ಇಲ್ಲಿದೆ ಡಿಟೇಲ್ಸ್.

Yuva Nidhi Scheme : ರಾಜ್ಯದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕೊನೆಯ ಗ್ಯಾರಂಟಿ ಯುವನಿಧಿ ಚಾಲನೆಗೆ ದಿನಗಣನೆ ನಡೆದಿದೆ. ಆದರೆ ಈ ಯೋಜನೆ ಫಲಾನುಭವಿಗಳಾಗಲು ಅಭ್ಯರ್ಥಿಗಳಿಗೆ ಸಮಸ್ಯೆಯೊಂದು ಕಾಡುತ್ತಿದೆ. ಹೀಗಾಗಿ ನೀರಿಕ್ಷಿತ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಯುವನಿಧಿಗೆ ಅರ್ಜಿ ಸಲ್ಲಿಕೆಯಾಗಿಲ್ಲ. ಹಾಗಿದ್ದರೇ ಏನದು ಸಮಸ್ಯೆ ಇಲ್ಲಿದೆ ಡಿಟೇಲ್ಸ್.

ಜನವರಿ 12 ರಂದು ಯುವನಿಧಿ ಗೆ ಅದ್ದೂರಿ ಚಾಲನೆ ಸಿಗಲಿದೆ. ಯುವಜನರಿಗೆ ಸ್ಪೂರ್ತಿಯಾಗಿದ್ದ ವಿವೇಕಾನಂದ ಸವಿನೆನಪಿಗಾಗಿ ಜನವರಿ 12 ರಂದು ಯುವನಿಧಿಯ ಮೊದಲ ಕಂತು ಪದವೀಧರ ನಿರುದ್ಯೋಗಿಗಳ ಜೇಬು ಸೇರಲಿದೆ. ಶಿವಮೊಗ್ಗದಲ್ಲಿ ನಡೆಯೋ ಕಾರ್ಯಕ್ರಮದಲ್ಲಿ ಸಿಎಂ ಹಾಗೂ ಡಿಸಿಎಂ ಯೋಜನೆಗೆ ಚಾಲನೆ ನೀಡಲಿದ್ದಾರೆ. ಆದರೆ ಈ ಯೋಜನೆ ಕಾಂಗ್ರೆಸ್ ನ ಇತರ ಯೋಜನೆಗಳಷ್ಟು ಜನಪ್ರಿಯತೆ ಹಾಗೂ ಜನೋಪಯೋಗಿ ಎನ್ನಿಸಿಲ್ಲ. ಕಾರಣ ಸರ್ಕಾರದ ನಿಯಮ.

Yuva Nidhi Scheme Government regulations are a hindrance Do you know how many applications have been submitted so far
Image Credit to Original Source

ಹೌದು ಸರ್ಕಾರ ಯುವನಿಧಿಗೆ ಅರ್ಜಿ ಸಲ್ಲಿಸುವವರಿಗೆ ಅಂಕಪಟ್ಟಿ ನಕಲು ಸಲ್ಲಿಕೆ ಕಷ್ಟವಾಗ್ತಿದೆ. ವಿವಿಗಳ ಸಮಸ್ಯೆಯಿಂದಾಗಿ ಇನ್ನೂ ಹಲವು ವಿದ್ಯಾರ್ಥಿಗಳಿಗೆ ಅವರ ಅಂತಿಮ ವರ್ಷದ ಅಂಕಪಟ್ಟಿ ಲಭ್ಯವಾಗಿಲ್ಲ. ಹೀಗಾಗಿ ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ ಯುವನಿಧಿ ಯೋಜನೆ ಆರಂಭದಲ್ಲೇ ವಿಘ್ನ. ಎದುರಾಗಿದೆ. ಬೆಂಗಳೂರು ವಿವಿ, ಕರ್ನಾಟಕ ವಿವಿ, ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಅಭ್ಯರ್ಥಿಗಳಿಗೆ ಹೆಚ್ಚಿನ ಸಮಸ್ಯೆಯಾಗಿದೆ.

ಇದನ್ನೂ ಓದಿ : ಆಯುಷ್ಮಾನ್ ಭಾರತ್ ಕಾರ್ಡ್ 2024 : ನಿಮ್ಮ ಮೊಬೈಲ್‌ನಿಂದಲೇ ಡೌನ್‌ಲೋಡ್ ಮಾಡಿ

ವಿವಿಗಳು ನ್ಯಾಡ್ ನಲ್ಲಿ ಅಂಕಪಟ್ಟಿ ದಾಖಲೆ ಅಪ್ಲೋಡ್ ಮಾಡುವಲ್ಲಿ ನಿರಾಸಕ್ತಿ ತೋರುತ್ತಿವೆ. ಹೀಗಾಗಿ ಪದವೀಧರರು ಅರ್ಜಿ ಸಲ್ಲಿಕೆಗೆ ದಾಖಲೆಗಳ ಕೊರತೆಯಿಂದ ನಿರಾಸಕ್ತಿ ತೋರುತ್ತಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿ 14 ದಿನಗಳು ಕಳೆದಿದ್ದರೂ ಕೇವಲ 40 ಸಾವಿರ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಈ ಪೈಕಿ ಮೊದಲ ಹಂತದಲ್ಲಿ ಐದು ಸಾವಿರ ಅರ್ಜಿಗಳನ್ನು ಪರಿಶೀಲಿಸಲಾಗಿದೆ.

Yuva Nidhi Scheme Government regulations are a hindrance Do you know how many applications have been submitted so far
Image Credit to Original Source

ಈ ಐದು ಸಾವಿರ ಅರ್ಜಿಯಲ್ಲಿ ಅರ್ಹ ರಿಗೆ ಜನವರಿ 12 ರಂದು ಶಿವಮೊಗ್ಗದಲ್ಲಿ ನಡೆಯೋ ಕಾರ್ಯಕ್ರಮದ ಬಳಿಕ ಪದವೀಧರರಿಗೆ 3 ಸಾವಿರ ಹಾಗೂ ಡಿಪ್ಲೋಮಾ ದವರಿಗೆ 1500 ರೂಪಾಯಿ ಹಣ ಸಂದಾಯವಾಗಲಿದೆ. ಇನ್ನೂ ಈಗಾಗಲೇ ಸಲ್ಲಿಕೆಯಾಗಿರೋ ಅರ್ಜಿಗಳಲ್ಲಿ ಬೆಳಗಾವಿ ಪದವೀಧರರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರು ಎರಡನೇ ಸ್ಥಾನದಲ್ಲಿದ್ದರೇ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ.

ಇದನ್ನೂ ಓದಿ :  ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್‌ : ಈ ಕೆಲಸ ಮಾಡದಿದ್ರೆ ಸಿಗಲ್ಲ 5ನೇ ಕಂತಿನ ಹಣ

ಕೆಲವರಿಗೆ ಸರ್ಕಾರ ಕಡ್ಡಾಯ ಎಂದಿರುವ ವಾಸ್ತವ್ಯ ಪ್ರಮಾಣ ಪತ್ರ ಒದಗಿಸುವುದು ತೊಡಕಾಗಿದೆ. ಹೀಗಾಗಿ ಕಳೆದ 14 ದಿನದಲ್ಲಿ ಕೇವಲ 40 ಸಾವಿರ ಅರ್ಜಿ ಸಲ್ಲಿಕೆ ಯಾಗಿದೆ. ಕನಿಷ್ಠ ಒಂದು ಲಕ್ಷ ಅರ್ಜಿಗಳು ಸಲ್ಲಿಕೆಯಾಗಬಹುದೆಂದು ನೀರಿಕ್ಷಿಸಲಾಗಿತ್ತು. ರಾಜ್ಯದಲ್ಲಿ ಚುನಾವಣೆ ವೇಳೆ ಐದು ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ ಪದವಿ ಪಡೆದು 180 ದಿನ ಕಳೆದರೂ ಉದ್ಯೋಗ ಲಭಿಸದಿದ್ದರೇ ಅಂತವರು ಈ ಭತ್ಯೆ ಪಡೆಯಬಹುದು ಎಂದಿತ್ತು. ಈಗ ಕೊನೆಯ ಗ್ಯಾರಂಟಿಯಾಗಿರೋ ಯುವನಿಧಿ ಜಾರಿಗೆ ಮುಂದಾಗಿದೆ.

ಇದನ್ನೂ ಓದಿ : ಯುವನಿಧಿ ಯೋಜನೆ : ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಿಗಲ್ಲ ಯುವನಿಧಿ ಹಣ, ಇಲ್ಲಿದೆ ಯುವನಿಧಿ ಅರ್ಹತಾ ಪಟ್ಟಿ

ಆದರೆ ಸರ್ಕಾರದ ಹಲವು ನಿಯಮಗಳು ಪದವೀಧದರನ್ನು ಯೋಜನೆಗೆ ಅರ್ಜಿ ಸಲ್ಲಿಸಲು ಹಿಂದೇಟು ಹಾಕುವಂತೆ ಮಾಡಿದೆ. ಸರ್ಕಾರದ ನಿಯಮದ ಪ್ರಕಾರ ಎಲ್ಲ ಪದವಿಧರರಿಗೂ ಮಾಸಿಕ ಭತ್ಯೆ ಲಭ್ಯವಾಗುವುದಿಲ್ಲ. ಸ್ವಯಂ ಉದ್ಯೋಗಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಆರ್ಥಿಕ ಸಹಾಯ ಪಡೆದವರು, ತರಬೇತಿ ಭತ್ಯೆ ಪಡೆಯುತ್ತಿರುವವರು ಸರ್ಕಾರಿ ಅಥವಾ ಖಾಸಗಿ ಉದ್ಯೋಗ ನಿರ್ವಹಿಸುತ್ತಿರುವವರು ಮತ್ತು ಉನ್ನತ ಶಿಕ್ಷಣಕ್ಕೆ ದಾಖಲಾದವರು ಈ ಯೋಜನೆಗೆ ಅರ್ಹರಲ್ಲ ಎಂದಿದೆ.

ಸದ್ಯ ಮೊದಲ ಹಂತದಲ್ಲಿ ಐದು ಸಾವಿರ ಜನರು ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಮಧ್ಯೆ ಯುವನಿಧಿಗೆ ಅರ್ಜಿ ಸಲ್ಲಿಸಲಾಗದ ಅಭ್ಯರ್ಥಿಗಳು ಸರ್ಕಾರ ವಿವಿಗಳಿಗೆ ಅಂಕಪಟ್ಟಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.

Yuva Nidhi Scheme Government regulations are a hindrance: Do you know how many applications have been submitted so far ? 

Comments are closed.