PAN ಕಾರ್ಡ್ ಮತ್ತು Aadhar ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31, 2022 ಕೊನೆಯ ದಿನವಾಗಿದೆ. ಇವೆರಡೂ ಒಂದಕ್ಕೊಂದು ಆ ದಿನಾಂಕದ ಒಳಗೆ ಲಿಂಕ್ ಆಗಿಲ್ಲದಿದ್ದರೆ ಹಣಕಾಸಿನ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಮಾರ್ಚ್ 31ರ ಒಳಗೆ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿಲ್ಲದಿದ್ದರೆ ಮೊದಲು ಪ್ಯಾನ್ ನಿಷ್ಕ್ರಿಯಗೊಳ್ಳುವುದು. ಒಂದು ಸಲ ಪ್ಯಾನ್ ನಿಷ್ಕ್ರಿಯಗೊಂಡರೆ ಹಣಕಾಸಿನ ಭಾಗಗಳಾದ ಬ್ಯಾಂಕ್ ಅಕೌಂಟ್, ಶೇರ್‌ಗಳಲ್ಲಿ ಹೂಡಿಕೆ, ಮ್ಯುಚ್ಯುವಲ್ ಫಂಡ್, ಟ್ಯಾಕ್ಸ್ ಬೆನಿಫಿಟ್ಸ್ ಮುಂತಾದವುಗಳಲ್ಲಿ ವ್ಯವಹರಿಸಲು ಆಗುವುದಿಲ್ಲ. ಆದಕಾರಣ ಅಂತಿಮ ದಿನದೊಳಗೆ ಪ್ಯಾನ್ ಮತ್ತು ಆಧಾರ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಹೇಗೆ ಗೊತ್ತೇ? ಇಲ್ಲದೆ ಅದರ ಕ್ರಮ:
- www.incometax.gov.in ವೆಬ್‌ಸೈಟ್‌ಗೆ ಹೋಗಿ.
- ವೆಬ್‌ಸೈಟ್‌ಗೆ ಮೊದಲ ಸಲ ಭೇಟಿ ಕೊಡುತ್ತಿದ್ದರೆ ಅಲ್ಲಿರುವ ನೊಂದಾಯಿಸಿ(Register) ಅನ್ನುವುದರ ಮೇಲೆ ಕ್ಲಿಕ್ಕಿಸಿ.
- OTP ನಮೂದಿಸಿ, PAN ಮಾಹಿತಿ ಒದಗಿಸಿ. ನಂತರ ಪಾಸ್‌ವರ್ಡ್ ರಚಿಸಿ. ಇದಾದಮೇಲೆ ಲಾಗ್‌ಇನ್ ಆಗಿ.
- ಈ ಮೊದಲೇ ಖಾತೆಯನ್ನು ಹೊಂದಿದ್ದರೆ ನೇರವಾಗಿ ಲಾಗ್‌ಇನ್ ಆಗಿರಿ.
- ಹೋಮ್ ಪೇಜ್‌ನಲ್ಲಿ ಕಾಣಿಸುವ ಲಿಂಕ್ ಆಧಾರ್ ಮೇಲೆ ಕ್ಲಿಕ್ಕಿಸಿ. ಹೊಸ ಪುಟ ತೆರೆದುಕೊಳ್ಳುವುದು. ಅಲ್ಲಿ ಪ್ಯಾನ್ ನಂಬರ್, ಆಧಾರ್ ನಂಬರ್, ಆಧಾರನಲ್ಲಿರುವಂತೆ ಹೆಸರು, ಮೊಬೈಲ್ ನಂಬರ್ ನಮೂದಿಸಿ.
- ನಂತರ ‘ಲಿಂಕ್ ಆಧಾರ್’ ಕ್ಲಿಕ್ಕಿಸಿ.
ಇಷ್ಟು ಮಾಡಿದರೆ ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗುವುದು.
ಇದನ್ನೂ ಓದಿ: TAX PAYERS ಗೆ ಸಿಹಿ ಸುದ್ಧಿ: ʼತೆರಿಗೆ ರಿಟರ್ನ್ಸ್ʼ ಸಲ್ಲಿಸಲು ಅವಧಿ ವಿಸ್ತರಿಸಿದ ಕೇಂದ್ರ ಸರಕಾರ
SMS ಮೂಲಕ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು:
ನೀವು SMS ಕಳುಹಿಸಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಬಯಸಿದ್ದೀರಾದರೆ 567678 ಅಥವಾ 56161 ಗೆ UIDPAN ಫಾರ್‍ಮೇಟ್ ನಲ್ಲಿ ಹೇಳಿದಂತೆ ಸಂದೇಶ ಕಳುಹಿಸಿ. ಅದು ಹೇಗೆ ಎಂದರೆ:
UIDPAN <ಆಧಾರ್‌ನ ಶಾಶ್ವತ 12 ಸಂಖ್ಯೆ><ಪ್ಯಾನ್‌ನ ಶಾಶ್ವತ 10 ಸಂಖ್ಯೆ>
ಉದಾಹರಣೆಗೆ: ನಿಮ್ಮ ಆದಾರ್ ಸಂಖ್ಯೆ 111122223333 ಮತ್ತು ಪ್ಯಾನ್ AAAPA8888Q ಆಗಿದ್ದರೆ, UIDPAN 111122223333 AAAPA8888Q ಇಷ್ಟು ಬರೆದು 567678 ಅಥವಾ 56161 ಗೆ ಸಂದೇಶ ಕಳುಹಿಸಿ. ಹೀಗೆ ಮಾಡಿದರೆ ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲಾಗುತ್ತದೆ.
(pan and Aadhar Link before march 31 it is necessary)