KGF 2 Beast : ರಾಕಿಂಗ್ ಸ್ಟಾರ್ ಯಶ್ ಗೆ ಎದುರಾಳಿಯಾದ ನಟ ವಿಜಯ್ : ಕೆಜಿಎಫ್-2 ಗೆ ಟಕ್ಕರ್ ಕೊಡುತ್ತಾ ಬೀಸ್ಟ್

ಕೊರೋನಾ ಬಳಿಕ ಚಿತ್ರರಂಗ ಈಗ ನಿಧಾನಕ್ಕೆ ಚೇತರಿಸಿಕೊಳ್ಳಲಾರಂಭಿಸಿದೆ. ಹೀಗಾಗಿ ಒಂದೊಂದೆ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರಲಾರಂಭಿಸಿದೆ. ಈ ಮಧ್ಯೆ ಕೆಜಿಎಫ್-2 ಸಿನಿಮಾ ಕೂಡ ಇದೇ ಹೊತ್ತಲ್ಲಿ ತೆರೆಗೆ ಬರುತ್ತಿದ್ದು, ಬಿರುಬೇಸಿಗೆಯ ಏಪ್ರಿಲ್ 14 ರಂದು ಸಿನಿಮಾ ರೀಲಿಸ್ ಆಗಲಿದೆ. ಆದರೆ ವರ್ಷಗಳ ಕಾಲ ಹುಡುಕಾಡಿ, ಯಾರೂ ಸಿನಿಮಾ ರಿಲೀಸ್ ಮಾಡದ ಹೊತ್ತಲ್ಲಿ ಚಿತ್ರ ತೆರೆಗೆ ತರಲು ಹೊರಟಿದ್ದ ಕೆಜಿಎಫ್-2 (KGF 2) ಗೆ ಬೀಸ್ಟ್ (Beast) ಹೊಡೆತ ಎದುರಾಗಿದೆ.

ಹೌದು ಕೆಜಿಎಫ್-2 ಸಿನಿಮಾ ಈಗಾಗಲೇ ತೆರೆಗೆ ಬಂದು ವರ್ಷವಾಗಬೇಕಿತ್ತು. ಆದರೆ ಕೊರೋನಾ ಕಾರಣಕ್ಕೆ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗುತ್ತಲೇ ಇತ್ತು. ಆದರೆ ಈಗ ಚಿತ್ರತಂಡ ಏಪ್ರಿಲ್ 14 ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಬಿಗ್ ಬಜೆಟ್ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರ್ತಿರೋದರಿಂದ ಈ ಸಿನಿಮಾ ರಿಲೀಸ್ ನ ಆಸುಪಾಸಿನ ದಿನಾಂಕದಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಯಾರು ಮನಸ್ಸು ಮಾಡಿರಲಿಲ್ಲ . ಅಲ್ಲದೇ ರಿಲೀಸ್ ಆದ್ರೆ ಗೆಲ್ಲೋ ವಿಶ್ವಾಸವೂ ಇರಲಿಲ್ಲ.

ಆದರೆ ಈಗ ಬರ್ತಿರೋ ಬ್ರೇಕಿಂಗ್ ಸುದ್ದಿಯ ಪ್ರಕಾರ ತಮಿಳಿನ ಹೆಸರಾಂತ ನಟ ವಿಜಯ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ಬೀಸ್ಟ್ ಕೂಡ ಏಪ್ರಿಲ್ ನಲ್ಲೇ ತೆರೆಗೆ ಬರಲಿದೆಯಂತೆ. ಅದು ಕೆಜಿಎಫ್-2 ಸಿನಿಮಾ ರಿಲೀಸ್ ದಿನವಲ್ಲ. ಬದಲಾಗಿ ಕೆಜಿಎಫ್-೨ ರಿಲೀಸ್ ಗೂ ಒಂದು ದಿನ ಮೊದಲೇ ಬೀಸ್ಟ್ ಸಿನಿಮಾ ತೆರೆಗೆ ಬರಲಿದೆ. ಏಪ್ರಿಲ್ 13 ರಂದು ಬೀಸ್ಟ್ ತೆರೆಗೆ ಬರಲಿದ್ದು ಇದರಿಂದ ಕೆಜಿಎಫ್-2 ಕಲೆಕ್ಷನ್ ಮೇಲೆ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗ್ತಿದೆ. ನೆಲ್ಸನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಬೀಸ್ಟ್ ಸಿನಿಮಾ ಕೂಡಾ ಸಾಕಷ್ಟು ನೀರಿಕ್ಷೆ ಮೂಡಿಸಿದ್ದು, ಕಳೆದ ಎರಡು ವರ್ಷಗಳಿಂದ ವಿಜಯ್ ರನ್ನು ತೆರೆ ಮೇಲೆ ನೋಡದೇ ಕಂಗೆಟ್ಟಿರುವ ಅಭಿಮಾನಿಗಳಿಗೆ ಈ ಸಿನಿಮಾ ಬೀಸ್ಟ್ ರಸದೌತಣ ಸಿಗಲಿದೆ ಎಂದು ನೀರಿಕ್ಷಿಸಲಾಗಿದೆ.

ಹೀಗಾಗಿ ಕೆಜಿಎಫ್-2 ಹಾಗೂ ಬೀಸ್ಟ್ ನಡುವೆ ಬಿಗ್ ಫೈಟ್ ನಡೆಯೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಯಾರೂ ಕೂಡ ಕೆಜಿಎಫ್-2 ಗೆ ಟಕ್ಕರ್ ನೀಡಲು ಸಿದ್ಧವಾಗ್ದಿರೋ ಹೊತ್ತಿನಲ್ಲಿ ಬೀಸ್ಟ್ ಸಿನಿಮಾ ನಿರ್ಮಿಸಿರೋ ಸನ್ ಫಿಲ್ಷ್ಮ್ ಸಂಸ್ಥೆ ಇದೇ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ‌. ಈ ಹಿಂದೆ ಕೆಜಿಎಫ್ ರಿಲೀಸ್ ಆಗಿದ್ದ 2018 ರ ಡಿಸೆಂಬರ್ 21 ರ ವೇಳೆಗೆ ಬಾಲಿವುಡ್ ಹೀರೋ ಶಾರೂಕ್ ಖಾನ್ ನಟನೆಯ ಜೀರೋ ಸಿನಿಮಾ ತೆರೆಗೆ ಬಂದಿತ್ತು. ಆದರೆ ಬಳಿಕ ಸಿನಿಮಾ ಕೆಜಿಎಫ್ ಎದುರು ಗೆಲ್ಲಲಾಗದೇ ಮುಗ್ಗರಿಸಿತ್ತು.

ಇದನ್ನೂ ಓದಿ :  ಪ್ರಭಾಸ್, ರಾಜಮೌಳಿ ಕಾಂಬಿನೇಷನ್‌ನಲ್ಲಿ ತೆರೆಗೆ ಬರಲಿದೆ ಬಾಹುಬಲಿ -3

ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಸ್ಯಾಂಡಲ್ ವುಡ್ ಖ್ಯಾತ ನಟಿ ಸಹೋದರ ಅರೆಸ್ಟ್

Rocking star Yash Acting KGF and Actor Vijay Acting Beast Release Same Day

Comments are closed.