PAN Card Update News : ಇನ್ಮುಂದೆ ಹಣಕಾಸಿನ ವಹಿವಾಟಿಗೆ ಪಾನ್‌ ಕಾರ್ಡ್ ಅಗತ್ಯವಿಲ್ಲ

ನವದೆಹಲಿ :ಕೇಂದ್ರ ಸರಕಾರವು ಪಾನ್‌ ಕಾರ್ಡ್‌ (PAN Card Update News)ಬಳಕೆ ಬಗ್ಗೆ ಮಹತ್ವದ ಸುದ್ದಿಯೊಂದನ್ನು ಪ್ರಕಟಿಸಿದೆ. ಮುಂಬರುವ ಬಜೆಟ್ 2023-24 ರಲ್ಲಿ ಕೇಂದ್ರ ಸರಕಾರವು ಪಾನ್‌ ಕಾರ್ಡ್ ಸಂಖ್ಯೆನ್ನು ಒದಗಿಸುವ ಅಗತ್ಯವನ್ನು ತೆಗೆದುಹಾಕಲು ಪ್ರಸ್ತಾಪಿಸುವ ಸಾಧ್ಯತೆ ಇದೆ. ಮುಂಬರುವ ಹಣಕಾಸು ವರ್ಷದಿಂದ ಕೆಲವು ಹಣಕಾಸು ವಹಿವಾಟುಗಳಿಗೆ ಪಾನ್ ಕಾರ್ಡ್ ಅಗತ್ಯವಿರುವುದಿಲ್ಲ. ಹಾಗಾಗಿ ಹಣಕಾಸಿನ ವಹಿವಾಟುಗಳಿಗೆ ಆಧಾರ್ ಬೆಂಬಲಿತವಾಗಿರುತ್ತದೆ. ಹಣಕಾಸು ಸಚಿವಾಲಯದ ಈ ಕ್ರಮವು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳ ಬೇಡಿಕೆಯಂತೆ ನಿಯಮಗಳನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ.

ಇತ್ತೀಚೆಗೆ, ದೇಶದ ಕೆಲವು ಪ್ರಮುಖ ಬ್ಯಾಂಕ್‌ಗಳು ಪಾನ್‌ನ ಅಗತ್ಯವನ್ನು ಕೈಬಿಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿದೆ. ಏಕೆಂದರೆ ಹೆಚ್ಚಿನ ಖಾತೆಗಳು ಈಗಾಗಲೇ ಆಧಾರ್‌ನೊಂದಿಗೆ ಲಿಂಕ್ ಆಗಿರುವುದರಿಂದ ಪಾನ್‌ ಕಾರ್ಡ್‌ನ ಆಗತ್ಯವನ್ನು ಕೈ ಬಿಡುವಂತೆ ಒತ್ತಾಯಿಸಿದೆ. ಈ ವಿಷಯದ ಬೆಳವಣಿಗೆಗಳಿಗೆ ಹತ್ತಿರವಿರುವ ಮೂಲವೊಂದು ಮಾಧ್ಯಮಕ್ಕೆ ತಿಳಿಸಿದ್ದು, ಈ ಸಂಬಂಧ ಸರಕಾರವು ಪ್ರಾತಿನಿಧ್ಯಗಳನ್ನು ಸ್ವೀಕರಿಸಿದೆ ಮತ್ತು ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 206AA ಪ್ರಕಾರ, ಪಾನ್ ಒದಗಿಸದ ಹಣಕಾಸಿನ ವಹಿವಾಟುಗಳು 20% ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆಗೆ (TDS) ಒಳಪಟ್ಟಿರುತ್ತದೆ. ಹಾಗೇ ಕೆಲವು ಪ್ರಮುಖ ಬ್ಯಾಂಕ್‌ಗಳು ಪ್ರಸ್ತುತ ವ್ಯವಸ್ಥೆಯಿಂದಾಗಿ ಅನಗತ್ಯ ದ್ವಂದ್ವತೆ ಮತ್ತು ಗೊಂದಲವನ್ನು ತಪ್ಪಿಸಲು ಆದಾಯ ತೆರಿಗೆ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ಬಯಸುತ್ತಿದೆ.

ಇದನ್ನೂ ಓದಿ : Public Provident Fund Latest Update : ಪಿಪಿಎಫ್‌ ಖಾತೆದಾರರಿಗೆ ಗುಡ್‌ ನ್ಯೂಸ್‌ : ಡಿಸೆಂಬರ್‌ 31 ರ ಮೊದಲು ಬಡ್ಡಿ ದರ ಹೆಚ್ಚಳ

ಇದನ್ನೂ ಓದಿ : Mother Dairy price hike : ಇಂದಿನಿಂದ ಹಾಲಿನ ದರ ಲೀಟರ್‌ 2 ರೂ. ಹೆಚ್ಚಳ : ಗ್ರಾಹಕರಿಗೆ ಮತ್ತೆ ಬರೆ

ಇದನ್ನೂ ಓದಿ : PAN Card Update : ಮಾರ್ಚ್‌ 31, 2023 ರ ಮೊದಲು ಪಾನ್‌ ಕಾರ್ಡ್‌ ಆಧಾರ್‌ಗೆ ಲಿಂಕ್‌ ಆಗದಿದ್ದರೆ ಏನಾಗುತ್ತೇ ಗೊತ್ತಾ ?

ಈ ನಿಟ್ಟಿನಲ್ಲಿ, ಬಹುತೇಕ ಎಲ್ಲಾ ವೈಯಕ್ತಿಕ ಖಾತೆಗಳನ್ನು ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದೆ ಎಂದು ಬ್ಯಾಂಕ್‌ಗಳು ಅಭಿಪ್ರಾಯಪಟ್ಟಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139A (5E) ಕೆಲವು ವಹಿವಾಟುಗಳಿಗೆ ಪಾನ್ ಕಾರ್ಡ್‌ನ ಬದಲಿಗೆ ಆಧಾರ್ ಸಂಖ್ಯೆಯನ್ನು ಒದಗಿಸುವಂತೆ ಬಳಕೆದಾರರಿಗೆ ಅನುಮತಿಸುತ್ತಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಸರಕಾರದಿಂದ ಇದರ ಬಗ್ಗೆ ಅಧಿಕೃತ ಮಾಹಿತಿಗಾಗಿ ಕಾಯಬೇಕಾಗಿದೆ.

ಇದನ್ನೂ ಓದಿ : PAN Card News : ಪ್ಯಾನ್‌ ಬಳಕೆದಾರರು ಎರಡು ಪ್ಯಾನ್‌ ಕಾರ್ಡ್‌ ಬಳಸುತ್ತಿದ್ದರೆ ಎಚ್ಚರ !

PAN Card Update News : PAN card is no longer required for financial transactions

Comments are closed.