30 ವರ್ಷದ ಹೋಮ್‌ ಲೋನ್‌ 15 ವರ್ಷದಲ್ಲೇ ತೀರಿಸಿ : ಜೊತೆಗೆ 32 ಲಕ್ಷ ರೂಪಾಯಿ ಬಡ್ಡಿ ಉಳಿಸಿ

Personal Finance  Home Loan : ದೀರ್ಘಾವಧಿಯ ಹೋಮ್‌ಲೋನ್‌ ಪಡೆಯುವ ಬದಲು ಕಡಿಮೆ ಅವಧಿಗೆ ಲೋನ್‌ ಮರುಪಾವತಿ ಮಾಡುವುದರಿಂದ ಲಕ್ಷ ಲಕ್ಷ ರೂಪಾಯಿ ಹಣವನ್ನು ಉಳಿಕೆ ಮಾಡಬಹುದಾಗಿದೆ. ಅದ್ರಲ್ಲೂ 30 ವರ್ಷದ ಹೋಮ್‌ ಲೋನ್‌ 15  ವರ್ಷದಲ್ಲೇ ತೀರಿಸಬಹುದಾಗಿದೆ. ಜೊತೆಗೆ 32 ಲಕ್ಷ ರೂಪಾಯಿ ಬಡ್ಡಿಯನ್ನು ಉಳಿಕೆ ಮಾಡಬಹುದಾಗಿದೆ.

Personal Finance  Home Loan : ಸ್ವತಃ ಮನೆ ಕಟ್ಟಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಕನಸಿನ ಮನೆ ಕಟ್ಟೋ ಸಲುವಾಗಿಯೇ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಮುಖ್ಯವಾಗಿ ಹೋಮ್‌ ಲೋನ್‌ ಪಡೆಯುವ ವೇಳೆಯಲ್ಲಿ ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಅದ್ರಲ್ಲೂ ಹೋಮ್‌ ಲೋನ್‌ ಬಡ್ಡಿದರವನ್ನು (Home Loan Interest Rate) ಲೆಕ್ಕಾಚಾರ ಹಾಕುವುದು ಬಹಳ ಮುಖ್ಯವಾಗಿದೆ.

Personal Finance 30-year home loan Repayment in Just 15 years plus save 32 lakh rupees in interest by Vinod Kharvi
Image Credit to Original Source

ಹೋಮ್‌ ಲೋನ್‌ ಪಡೆಯುವ ವೇಳೆಯಲ್ಲಿ ನೀವು ಸ್ವಲ್ಪ ಫ್ಲ್ಯಾನ್‌ ಮಾಡಿದ್ರೂ ಕೂಡ ಲಕ್ಷ ಲಕ್ಷ ರೂಪಾಯಿ ಬಡ್ಡಿಯನ್ನು ಉಳಿಸಬಹುದು. ಅದರಲ್ಲೂ ದೀರ್ಘಾವಧಿಯ ಹೋಮ್‌ಲೋನ್‌ ಪಡೆಯುವ ಬದಲು ಕಡಿಮೆ ಅವಧಿಗೆ ಲೋನ್‌ ಮರುಪಾವತಿ ಮಾಡುವುದರಿಂದ ಲಕ್ಷ ಲಕ್ಷ ರೂಪಾಯಿ ಹಣವನ್ನು ಉಳಿಕೆ ಮಾಡಬಹುದಾಗಿದೆ. ಅದ್ರಲ್ಲೂ 30 ವರ್ಷದ ಹೋಮ್‌ ಲೋನ್‌ 15  ವರ್ಷದಲ್ಲೇ ತೀರಿಸಬಹುದಾಗಿದೆ. ಜೊತೆಗೆ 32 ಲಕ್ಷ ರೂಪಾಯಿ ಬಡ್ಡಿಯನ್ನು ಉಳಿಕೆ ಮಾಡಬಹುದಾಗಿದೆ.

ಒಂದೊಮ್ಮೆ ನೀವು ಎಚ್‌ಡಿಎಫ್‌ಸಿ ಬ್ಯಾಂಕಿನಿಂದ (HDFC BANK)  30ಲಕ್ಷ ರೂಪಾಯಿ ಹೋಮ್‌ ಲೋನ್‌ ಪಡೆದುಕೊಂಡಿದ್ರೆ, ಶೇ.9 ರ ಬಡ್ಡಿದರದಲ್ಲಿ ಸಾಲವನ್ನು 30 ವರ್ಷಗಳ ಅವಧಿಗೆ ಮರು ಪಾವತಿಸಿದ್ರೆ ನೀವು 56,89,924 ರೂಪಾಯಿ ಬಡ್ಡಿ ಪಾವತಿಸಬೇಕಾಗಿದೆ. ಹೀಗಾಗಿ 30 ಲಕ್ಷ ರೂಪಾಯಿ ಸಾಲಕ್ಕೆ ಅಸಲು ಬಡ್ಡಿ ಸೇರಿ ಒಟ್ಟು 86, 89 924 ರೂಪಾಯಿ ಹಣವನ್ನು ಪಾವತಿ ಮಾಡಬೇಕಾಗಿದೆ. ಪಡೆದ ಸಾಲಕ್ಕಿಂತ ದುಪ್ಪಟ್ಟು ಹಣವನ್ನು ಬಡ್ಡಿಗೆ ಪಾವತಿಸಬೇಕಾಗಿದೆ. ಇದರಿಂದಾಗಿ ದುಡಿದ ಹಣವೆಲ್ಲಾ ನಷ್ಟವಾಗಲಿದೆ.

Personal Finance 30-year home loan Repayment in Just 15 years plus save 32 lakh rupees in interest by Vinod Kharvi
Image Credit to Original Source

ಆದರೆ ನೀವು ಹೋಮ್‌ ಲೋನ್‌ ವಿಚಾರದಲ್ಲಿ ಎಕ್ಸ್‌ಫರ್ಟ್‌ಗಳ (Loan Experts) ಸಲಹೆಯನ್ನು ಪಡೆಯುವ ಮೂಲಕ ಲಕ್ಷ ಲಕ್ಷ ರೂಪಾಯಿ ಬಡ್ಡಿ ಉಳಿಸಬಹುದಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, 30 ವರ್ಷದ ಅವಧಿ ಹೋಮ್‌ ಲೋನ್‌ ಪಡೆಯುವ ಬದಲು ಕೇವಲ 16 ವರ್ಷಗಳ ಅವಧಿಗೆ ಲೋನ್‌ ಪಡೆದುಕೊಂಡ್ರೆ ನೀವು ಲಕ್ಷ ಲಕ್ಷ ಹಣವನ್ನು ಉಳಿಕೆ ಮಾಡಬಹುದಾಗಿದೆ. ಹೋಮ್‌ ಲೋನ್‌ ವಿಚಾರದಲ್ಲಿ ಸಣ್ಣದೊಂದು ಲೆಕ್ಕಾಚಾರವನ್ನು ನೋಡೋಣಾ.

ಇದನ್ನೂ ಓದಿ : ಯುವನಿಧಿ ಯೋಜನೆಗೆ ಹೊಸ ರೂಲ್ಸ್‌ : ಈ ದಾಖಲೆ ಸಲ್ಲಿಸದಿದ್ರೆ ಸಿಗಲ್ಲ ಯುವನಿಧಿ ಯೋಜನೆಯ ಹಣ

30 ಲಕ್ಷ ರೂಪಾಯಿಯ ಮನೆ ಸಾಲವನ್ನು ಕೇವಲ 15  ವರ್ಷಗಳಲ್ಲಿ ತೀರಿಸಿದ್ರೆ, ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಶೇ.9 ರ ಬಡ್ಡಿದರದಲ್ಲಿ 30 ಲಕ್ಷ ಸಾಲವನ್ನು 15 ವರ್ಷಗಳ ಅವಧಿಯಲ್ಲಿ ತೀರಿಸಿದ್ರೆ ನೀವು ಕೇವಲ 24, 77.040 ರೂಪಾಯಿ ಬಡ್ಡಿಯನ್ನಷ್ಟೇ ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಅಸಲು ಹಾಗೂ ಬಡ್ಡಿ ಸೇರಿಕೊಂಡು ಒಟ್ಟು 54,77,040 ರೂಪಾಯಿ ಹಣವನ್ನು ನೀವು ಬ್ಯಾಂಕಿಗೆ ಪಾವತಿಸಬೇಕಾಗಿದೆ.

30ವರ್ಷದ ಸಾಲವನ್ನು 15 ವರ್ಷದ ಅವಧಿಗೆ ತೀರಿಸಿದ್ರೆ ನಿಮಗೆ ಸುಮಾರು 32 ಲಕ್ಷದಷ್ಟು ಬಡ್ಡಿಯನ್ನು ಉಳಿತಾಯ ಮಾಡಬಹುದಾಗಿದೆ. ಆದರೆ 30 ವರ್ಷದ ಅವಧಿಗೆ 30 ಲಕ್ಷ ರೂಪಾಯಿ ಹೋಮ್‌ ಲೋನ್‌ ಪಡೆದುಕೊಂಡ್ರೆ ನೀವು 24  ಸಾವಿರ ರೂಪಾಯಿಯಷ್ಟು ಇಎಂಐ ಪಾವತಿ ಮಾಡಬೇಕಾಗಿದೆ. ಆದರೆ ನೀವು 5 ಸಾವಿರ ರೂಪಾಯಿ ಹೆಚ್ಚುವರಿ ಹಣವನ್ನು ಪಾವತಿಸಿದ್ರೆ ನಿಮ್ಮ ಸಾಲ 15 ವರ್ಷದಲ್ಲೇ ತೀರಲಿದೆ.

ಇದನ್ನೂ ಓದಿ :  ಬ್ಯಾಂಕ್‌ ಗ್ರಾಹರಿಕೆ ಎಚ್ಚರಿಕೆಕೊಟ್ಟ RBI : ಬ್ಯಾಂಕ್‌ ಖಾತೆ ಹೊಂದಿರುವ ಪ್ರತಿಯೊಬ್ಬರೂ ಈ ಸ್ಟೋರಿಯನ್ನು ತಪ್ಪದೇ ಓದಿ

Personal Finance 30-year home loan Repayment in Just 15 years plus save 32 lakh rupees in interest by Vinod Kharvi

Image Credit to Original Sourceಅತ್ಯಂತ ಕಡಿಮೆ ಅವಧಿಯಲ್ಲಿ ಸಾಲ ತೀರುವುದು ಮಾತ್ರವಲ್ಲ ಲಕ್ಷ ಲಕ್ಷ ರೂಪಾಯಿ ಬಡ್ಡಿಯ ಹಣವು ಉಳಿಕೆ ಆಗಲಿದೆ. 30 ವರ್ಷಗಳ ಕಾಲ ನೀವು ಪಾವತಿಸುವ ಬಡ್ಡಿಗಿಂತ ಕಡಿಮೆ ಹಣದಲ್ಲಿಯೇ ನೀವು ಸಂಪೂರ್ಣವಾಗಿ ಹೋಮ್‌ ಲೋನ್‌ ತೀರಿಸುವುದಕ್ಕೆ ಸಾಧ್ಯವಾಗುತ್ತಿದೆ. ಹೀಗಾಗಿ ಹೆಚ್ಚುವರಿ ಹಣವನ್ನು ಇಎಂಐನಲ್ಲಿ ಪಾವತಿ ಮಾಡುವುದು ಉತ್ತಮ. ಆದರೆ ಹೆಚ್ಚುವರಿ ಇಎಂಐ ಪಾವತಿ ಮಾಡಲು ಬೇಕಾಗಿರುವ ಹಣವನ್ನು ನೀವೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ.

ಇದನ್ನೂ ಓದಿ : ಕೇವಲ 50 ರೂ.ಹೂಡಿಕೆ ಮಾಡಿದ್ರೆ 35 ಲಕ್ಷ ರೂ. ಸಿಗುತ್ತೆ : ಅಂಚೆ ಇಲಾಖೆ ಗ್ರಾಮ ಸುರಕ್ಷಾ ಯೋಜನೆ

Personal Finance 30-year home loan Repayment in Just 15 years plus save 32 lakh rupees in interest by Vinod Kharvi

Comments are closed.