ನವದೆಹಲಿ : (PF Withdrawal rules change) ನೌಕರರ ಭವಿಷ್ಯ ನಿಧಿ ಹಿಂಪಡೆಯುವ ನಿಯಮಗಳ ಬದಲಾವಣೆ ಮಾಡಲಾಗಿದೆ. ಪ್ಯಾನ್ ಕಾರ್ಡ್ ಹೊಂದಿಲ್ಲದವರ ಇಪಿಎಫ್ ಗಾಗಿ ಟಿಡಿಎಸ್ ಕಡಿತದ ಮೊತ್ತವನ್ನು 30% ರಿಂದ 20% ಕ್ಕೆ ಇಳಿಸಲು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದ ಇತರ ಆದಾಯ ತೆರಿಗೆ ನಿಯಮಗಳು ಈಗಿರುವಂತೆಯೇ ಮುಂದುವರಿಯುತ್ತವೆ ಎಂದು ಹೇಳಿದ್ದಾರೆ.
ಆದಾಯ ತೆರಿಗೆ ನಿಯಮಗಳ ಪ್ರಕಾರ, 5 ವರ್ಷಗಳ ಮೊದಲು ಇಪಿಎಫ್ ಹಿಂಪಡೆದರೆ, ಒಟ್ಟು ಮೊತ್ತದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಪಿಎಫ್‌ಗೆ ವಾರ್ಷಿಕ 2.5 ಲಕ್ಷ ರೂ.ಗಿಂತ ಹೆಚ್ಚಿನ ಠೇವಣಿ ಕೂಡ ತೆರಿಗೆಯ ವ್ಯಾಪ್ತಿಯಲ್ಲಿ ಬರುತ್ತದೆ. ಐದು ವರ್ಷಗಳ ಅವಧಿಯ ಮೊದಲು ಪಿಎಫ್ ಅಥವಾ ಇಪಿಎಫ್ ಖಾತೆಯಿಂದ ಹಿಂಪಡೆಯಲು ತೆರಿಗೆ ವಿಧಿಸಲಾಗುತ್ತದೆ.
ನೌಕರರ ಭವಿಷ್ಯ ನಿಧಿ ( provident fund)ಖಾತೆದಾರರು ಪಾನ್ ಕಾರ್ಡ್ (PAN ) ಕಾರ್ಡ್ ಹೊಂದಿದ್ದರೆ ಟಿಡಿಎಸ್ (TDS ) ಅನ್ನು ಕಡಿತಗೊಳಿಸಲಾಗುವುದಿಲ್ಲ. ಇಲ್ಲದಿದ್ದರೆ, ಪಿಎಫ್ ಹಿಂಪಡೆಯುವ ಮೊತ್ತವನ್ನು ಆ ವರ್ಷದ ಪಿಎಫ್ ಚಂದಾದಾರರ ತೆರಿಗೆಯ ಆದಾಯದಲ್ಲಿ ಸೇರಿಸಲಾಗುವುದು ಎಂದು ಮುಂಬೈ ಮೂಲದ ತೆರಿಗೆ ತಜ್ಞ ಬಲ್ವಂತ್ ಜೈನ್ ಹೇಳಿದ್ದಾರೆ.
PAN ಅನ್ನು PF ಖಾತೆಯೊಂದಿಗೆ ಲಿಂಕ್ ಮಾಡದಿದ್ದರೆ, PF ಖಾತೆಯ ನಿವ್ವಳ ಮೊತ್ತದಿಂದ PF ಅನ್ನು ಕಡಿತಗೊಳಿಸಬಹುದು. ಪ್ರಸ್ತುತ, ಟಿಡಿಎಸ್ ದರವು 30% ಆಗಿದೆ ಮತ್ತು ಇದನ್ನು ಏಪ್ರಿಲ್ 1, 2023 ರಿಂದ 20% ಕ್ಕೆ ಇಳಿಸಲಾಗುವುದು ಎಂದು ಬಲ್ವಂತ್ ಜೈನ್ ಹೇಳಿದರು. ಆದಾಯ ತೆರಿಗೆ ನಿಯಮಗಳನ್ನು ಬಜೆಟ್ ನಲ್ಲಿ ಗಣನೀಯವಾಗಿ ಪರಿಷ್ಕರಿಸ ಲಾಗಿದ್ದು, ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂ.ಗೆ ವಿಸ್ತರಿಸಲಾಗಿದೆ.
ಹೊಸ ತೆರಿಗೆ ವ್ಯವಸ್ಥೆಯಡಿ ಈ ಘೋಷಣೆ ಮಾಡಲಾಗಿದ್ದು, ಇದು ಡೀಫಾಲ್ಟ್ ತೆರಿಗೆ ವ್ಯವಸ್ಥೆಯಾಗಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಹೆಚ್ಚುವರಿ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಆದಾಗ್ಯೂ, ಈ ತೆರಿಗೆ ವಿಧಾನದಲ್ಲಿ, ಆದಾಯ ತೆರಿಗೆಯ ವಿವಿಧ ವಿಭಾಗಗಳ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.
ಇದನ್ನೂ ಓದಿ : ಹೆಲ್ತ್ ಇನ್ಸ್ಯೂರೆನ್ಸ್ ಪಡೆಯಲು ಯಾವುದು ಸೂಕ್ತ : ಯಾವ ಪಾಲಿಸಿಯಿಂದ ಏನು ಲಾಭ ? ಇಲ್ಲಿದೆ ಸಂಪೂರ್ಣ ಮಾಹಿತಿ
ಇದನ್ನೂ ಓದಿ : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಫೆಬ್ರವರಿ ತಿಂಗಳಲ್ಲಿ 10 ದಿನ ಬ್ಯಾಂಕ್ ರಜೆ
PF Withdrawal rules change: Check here new rules