Own Urine Drinking: ಸ್ವಮೂತ್ರ ಪಾನ ಮಾಡ್ತಿದ್ರು ಭಾರತದ ಮಾಜಿ ಪ್ರಧಾನಿ!

ಸ್ವಮೂತ್ರ ಪಾನ! ಅರೇ! ಹೀಗೂ ಇದೆಯಾ ಎಂದು ನೀವು ಅಚ್ಚರಿಯಾಗಬಹುದು. ಸ್ವಮೂತ್ರ ಪಾನ (Own Urine Drinking) ಅಂದ್ರೆ ನಿಮಗೆ ವಾಕರಿಕೆ ಬರಲೂಬಹುದು. ಆದ್ರೆ ಯುರೋಫೇಜಿಯಾ (Urophagia) ಎಂದು ಕರೆಯಲ್ಪಡುವ ಈ ಪದ್ಧತಿ (Urine Therapy) ಹಿಂದಿನ ಕಥೆಗಳನ್ನ ಕೇಳಿದ್ರೆ ನೀವು ಹೀಗೂ ಉಂಟಾ ಅಂತೀರಿ!

ನಮ್ಮ ಮೂತ್ರವನ್ನು ನಾವೇ ಕುಡಿಯೋದೇ ಸ್ವಮೂತ್ರ ಪಾನ. ಸದ್ಯ ಯಾವುದೇ ವೈದ್ಯಕೀಯ ಪದ್ಧತಿಯಲ್ಲೂ ಅಧಿಕೃತವಾಗಿ ರೆಕಮಂಡೆಂಡ್ ಅಲ್ಲದೇ ಇದ್ರೂ ಹೀಗೆ ಮಾಡೋರ ಸಂಖ್ಯೆ ಕಡಿಮೆಯೇನೂ ಇದ್ದಿರ್ಲಿಲ್ಲ. ಅದ್ರಲ್ಲೂ ಇತಿಹಾಸದ ಪುಟಗಳಲ್ಲಿ ಹುಡುಕಿದ್ರೆ ಘಟಾನುಘಟಿ ನಾಯಕರೇ ಸ್ವಮೂತ್ರ ಪಾನ ಮಾಡ್ತಿದ್ರು ಅನ್ನೋ ಸತ್ಯ ಗೊತ್ತಾಗುತ್ತೆ!

ಕಡಿಮೆಯಿರ್ಲಿಲ್ಲ ಸ್ವಮೂತ್ರ ಪಾನ (Own Urine Drinking)ಮಾಡೋರ ಸಂಖ್ಯೆ

ಮೂತ್ರವನ್ನು ಹಲವಾರು ಪ್ರಾಚೀನ ಸಂಸ್ಕೃತಿಗಳಲ್ಲಿ ವಿವಿಧ ಆರೋಗ್ಯ, ಚಿಕಿತ್ಸೆ ಮತ್ತು ಸೌಂದರ್ಯವರ್ಧಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತಂತೆ. ಈಗಲೂ ಕುಡಿಯೋಕೆ ಬೇರೆ ಏನೂ ಸಿಗದೇ ಇದ್ದಾಗ, ಅಂತಹ ಅತೀ ಕಷ್ಟಾನುಕಷ್ಟದ ಸಮಯದಲ್ಲಿ ಸ್ವಮೂತ್ರ ಪಾನ ಮಾಡಿ ಜೀವ ಉಳಿಸಿಕೊಂಡ ಸುದ್ದಿಗಳು ಆಗಾಗ ವರದಿಯಾಗುತ್ತಲೇ ಇರುತ್ತೆ. ಕಷ್ಟದಲ್ಲಿ ಕತ್ತೆ ಕಾಲನ್ನಾದ್ರೂ ಹಿಡಿದು ಕೆಲಸ ಮಾಡಿಸ್ಕೊಳ್ಳಬೇಕು ಅನ್ನೋ ಪಾಲಿಸಿನೇ ಇದು. ಆದ್ರೆ ಅಂಥಾ ಕಷ್ಟ ಏನೂ ಇಲ್ದೇ ಇದ್ರೂ ತಮ್ಮ ನಂಬಿಕೆಗಳಿಗೋಸ್ಕರವೇ ಸ್ವಮೂತ್ರ ಪಾನ ಮಾಡೋರ ಸಂಖ್ಯೆಯೇನೂ ಕಡಿಮೆಯಿರ್ಲಿಲ್ಲ ಅನ್ನೋ ವಿಷ್ಯ ಹೆಚ್ಚಿನವರಿಗೆ ತಿಳಿದಿಲ್ಲ.

ಇದನ್ನೂ ಓದಿ: World Tallest Person: ಸತ್ತ ಮೇಲೂ ದಾಖಲೆ ಉಳಿಸಿಕೊಂಡ ವಿಶ್ವದ ಅತ್ಯಂತ ಎತ್ತರದ ವ್ಯಕ್ತಿ ಇವರೇ ನೋಡಿ: ವೈರಲ್ ಆಯ್ತು 1935ರ ಫೋಟೋ

ಸ್ವಮೂತ್ರ ಪಾನ ಮಾಡ್ತಿದ್ದ ಆ ಫೇಮಸ್ ವ್ಯಕ್ತಿ?

ಇಷ್ಟೆಲ್ಲ ಆಯ್ತು, ಯಾರು ಸ್ವಮೂತ್ರ ಪಾನ ಮಾಡ್ತಿದ್ದ ಆ ಫೇಮಸ್ ವ್ಯಕ್ತಿ? ನಾಯಕ ಅಂತ ನೋಡೋಕೋದ್ರೆ ಅವರು ನಮ್ಮ ಮಾಜಿ ಪ್ರಧಾನಿ. ಹೌದು, ಭಾರತದ 5ನೇ ಪ್ರಧಾನಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ಸ್ವಮೂತ್ರ ಪಾನ‌ ಮಾಡ್ತಿದ್ರಂತೆ. ಯಾವುದೇ ಅನಾರೋಗ್ಯವನ್ನು ಗುಣಪಡಿಸಲು ಸ್ವಮೂತ್ರ ಪಾನ‌ ಒಳ್ಳೆಯದು ಎಂದು ಅವರು‌ ನಂಬಿದ್ರಂತೆ.

ಒಂದಿಡೀ‌ ಹಳ್ಳಿಯ ಜನರು…!

ಮೊರಾರ್ಜಿ ದೇಸಾಯಿ ಅವರೊಬ್ರೇ ಅಲ್ಲ, ಒಂದಿಡೀ‌ ಹಳ್ಳಿಯ ಜನರು ಸಹ ಸ್ವಮೂತ್ರ ಪಾನದ ಹವ್ಯಾಸ ಹೊಂದಿದ್ದರ ಕುರಿತು ವರದಿಗಳಿವೆ. ಮಧ್ಯಪ್ರದೇಶದ ಅಮರ್‌ಪುರ್ ಎಂಬ ಹಳ್ಳಿಯ ಜನರು ರೋಗಗಳಿಂದ ದೂರವಿರಲು ತಮ್ಮದೇ ಆದ ಮೂತ್ರವನ್ನು ಕುಡಿಯುತ್ತಾರಂತೆ. ಆದ್ರೆ ಸ್ವಮೂತ್ರ ಪಾನ ಆಚರಣೆಯನ್ನು ಈವರೆಗೆ ಯಾವುದೇ ವೈದ್ಯಕೀಯ ಚಿಕಿತ್ಸಾ ಪದ್ಧತಿ ಅಧಿಕೃತವಾಗಿ ಒಪ್ಪಿದ ದಾಖಲೆಯಂತೂ ಇಲ್ಲ.

(ನ್ಯೂಸ್ ನೆಕ್ಸ್ಟ್ ಈ ಲೇಖನವನ್ನು ಕೇವಲ ಮಾಹಿತಿಯ ದೃಷ್ಟಿಕೋನದಿಂದ ಪ್ರಕಟಿಸಿರುತ್ತದೆ. ಈ ಲೇಖನದಲ್ಲಿ ವಿವರಿಸಿದ ಯಾವುದೇ ಮಾಹಿತಿಯನ್ನು ಅಧಿಕೃತಗೊಳಿಸುವುದಿಲ್ಲ)

Comments are closed.