ಶನಿವಾರ, ಜೂನ್ 7, 2025
Homebusinessಪಿಎಂ ಕಿಸಾನ್ 20ನೇ ಕಂತು ಬಿಡುಗಡೆ : ಹೊಸ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶ, ಇಲ್ಲಿದೆ...

ಪಿಎಂ ಕಿಸಾನ್ 20ನೇ ಕಂತು ಬಿಡುಗಡೆ : ಹೊಸ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶ, ಇಲ್ಲಿದೆ ಮಾಹಿತಿ

2025ರ ಫೆಬ್ರವರಿ ತಿಂಗಳಿನಲ್ಲಿ ಪಿಎಂ- ಕಿಸಾನ್‌ ಯೋಜನೆಯ 19ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿತ್ತು. ಇದೀಗ ಎಪ್ರಿಲ್‌ನಿಂದ ಜುಲೈ 2025ರ ನಡುವಿನ ಬಾಕಿಯನ್ನು ಕೇಂದ್ರ ಸರಕಾರ ಇದೇ ತಿಂಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಿದೆ.

- Advertisement -

PM Kisan 20th installment : ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರಕಾರ ಜಾರಿಗೆ ಪಿಎಂ ಪಿಸಾನ್‌ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ 19ನೇ ಕಂತಿನ ಹಣ ರೈತರ ಖಾತೆಗೆ ಜಮೆ ಆಗಿದ್ದು, ಇದೀಗ 20ನೇ ಕಂತಿನ ಹಣ ಜೂನ್‌ ತಿಂಗಳಿನಲ್ಲಿ ಜಮೆ ಆಗಲಿದೆ. ಅಷ್ಟೇ ಅಲ್ಲಾ, ಹೊಸ ರೈತರಿಗೆ ಯೋಜನೆಗೆ ಸೇರ್ಪಡೆಯಾಗಲು ಅವಕಾಶ ಕಲ್ಪಿಸಲಾಗಿದೆ.

PM-KISAN, ಅಥವಾ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಕೇಂದ್ರ ಸರ್ಕಾರವು 2019 ರಲ್ಲಿ ಆರಂಭಗೊಂಡ ಯೋಜನೆಯಾಗಿದೆ. ದೇಶದಲ್ಲಿರುವ ಅರ್ಹ ರೈತರಿಗೆ ಈ ಯೋಜನೆಯ ಮೂಲಕ ಪ್ರತಿ ವರ್ಷ 6,000 ರೂ. ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಒಟ್ಟು ಮೂರು ಕಂತುಗಳಲ್ಲಿ ಈ ಯೋಜನೆಯ ಹಣ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ. ಹಣವನ್ನು ರೈತರು ಪಡೆಯುತ್ತಿದ್ದಾರೆ.

2025ರ ಫೆಬ್ರವರಿ ತಿಂಗಳಿನಲ್ಲಿ ಪಿಎಂ- ಕಿಸಾನ್‌ ಯೋಜನೆಯ 19ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿತ್ತು. ಇದೀಗ ಎಪ್ರಿಲ್‌ನಿಂದ ಜುಲೈ 2025ರ ನಡುವಿನ ಬಾಕಿಯನ್ನು ಕೇಂದ್ರ ಸರಕಾರ ಇದೇ ತಿಂಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಿದೆ. ಆದರೆ ಅಧಿಕೃತ ಬಿಡುಗಡೆಯ ದಿನಾಂಕ ಘೋಷಣೆ ಆಗಿಲ್ಲ.

Also Read : ಬ್ಯಾಂಕಿನಲ್ಲಿದೆ ಗ್ರಾಮಸ್ಥರ 70000000000 ರೂ.! ಇದು ಭಾರತದಲ್ಲಿರುವ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ..!

PM Kisan 20th installment : ಪಿಎಂ -ಕಿಸಾನ್‌ ಹಣಪಡೆಯಲು ಹೀಗೆ ಮಾಡಿ

ಪಿಎಂ ಕಿಸಾನ್‌ ಯೋಜನೆಯಡಿಯಲ್ಲಿ ನೋಂದಣೆ ಮಾಡಿಕೊಂಡಿರುವ ರೈತರಿಗೆ ಈಗಾಗಲೇ ಇ-ಕೆವೈಸಿ ಮಾಡಿಸಲು ಸೂಚಿಸಲಾಗಿದೆ. ಒಂದೊಮ್ಮೆ ನಿಮ್ಮ ಖಾತೆಗೆ ಇಕೆವೈಸಿ ಮಾಡಿಸಲಾಗಿದೆಯೇ ಅನ್ನೋದನ್ನು ಖಚಿತ ಪಡಿಸಿಕೊಳ್ಳಿ. ಅಷ್ಟೇ ಅಲ್ಲಾ, ಆಧಾರ್‌ ಕಾರ್ಡ್‌ ಅನ್ನು ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡಿ, ಭೂ ದಾಖಲೆಗಳನ್ನು ನವೀಕರಿಸಿಕೊಳ್ಳಿ. ಅಷ್ಟೇ ಅಲ್ಲಾ ನಿಮ್ಮ ಖಾತೆಯನ್ನು ಯಾವುದಕ್ಕೂ ಒಮ್ಮೆ ಪರಿಶೀಲನೆ ಮಾಡಿಸಿಕೊಳ್ಳುವುದು ಉತ್ತಮ.

PM Kisan 20th installment : ಇ-ಕೆವೈಸಿ ಮಾಡುವುದು ಹೇಗೆ:

  • ಪಿಎಂ ಕಿಸಾನ್‌ ಯೋಜನೆಯಡಿಯಲ್ಲಿ ಈಗಾಗಲೇ ನೋಂದಾಯಿಸಿಕೊಂಡಿರುವ ಎಲ್ಲಾ ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
  • ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ OTP ಆಧಿರಿಸಿ ನೀವೇ ಇ-ಕೆವೈಸಿ ಮಾಡಬಹುದು: pmkisan.gov.in
  • ಬಯೋಮೆಟ್ರಿಕ್ ಇ-ಕೆವೈಸಿಗಾಗಿ ನೀವು ನಿಮ್ಮ ಹತ್ತಿರದ ಸಿಎಸ್‌ಸಿ (ಸಾಮಾನ್ಯ ಸೇವಾ ಕೇಂದ್ರ) ಗೆ ಸಹ ಭೇಟಿ ನೀಡಬಹುದು.
  • ಪಿಎಂ ಕಿಸಾನ್‌ ಯೋಜನೆಯ 20ನೇ ಕಂತಿನಲ್ಲಿ 2000 ರೂಪಾಯಿ ಹಣ ಪಡೆಯಲು ಈ ಎಲ್ಲಾ ಮಾಹಿತಿ ಸರಿಯಾಗಿ ಇದೆಯಾ ಅನ್ನೋದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.

ಪಿಎಂ-ಕಿಸಾನ್‌ ಯೋಜನೆಗೆ ಯಾರು ಅರ್ಹರು ?

  • ಭಾರತದ ನಾಗರಿಕರಾಗಿರಬೇಕು
  • ಕೃಷಿ (ಕೃಷಿ) ಭೂಮಿಯನ್ನು ಹೊಂದಿರಬೇಕು
  • ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು (ಸಾಮಾನ್ಯವಾಗಿ 2 ಹೆಕ್ಟೇರ್‌ವರೆಗೆ ಭೂಮಿಯನ್ನು ಹೊಂದಿರಬೇಕು)
  • ಆದಾಯ ತೆರಿಗೆದಾರರಾಗಿರಬಾರದು
  • ರೂ.ಗಿಂತ ಹೆಚ್ಚಿನ ಮಾಸಿಕ ಪಿಂಚಣಿಯನ್ನು ಪಡೆಯಬಾರದು. 10,000
  • ಕೃಷಿ ಹೊಂದಿರುವ ಸಾಂಸ್ಥಿಕ ಭೂಮಾಲೀಕರಾಗಿರಬಾರದು

PM-KISAN ಯೋಜನೆಯಲ್ಲಿ ನಿಮ್ಮ ಹೆಸರು ಇದೆಯಾ ?

  • ಪಿಎಂ ಕಿಸಾನ್‌ ಯೋಜನೆಗೆ ನೀವು ಈಗಾಗಲೇ ಸೇರ್ಪಡೆ ಆಗಿದ್ದರೆ, ಮೊದಲು
  • pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
  • ‘ನಿಮ್ಮ ಸ್ಥಿತಿಯನ್ನು ತಿಳಿದುಕೊಳ್ಳಿ’ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆ ಅಥವಾ ಇತರ ಅಗತ್ಯವಿರುವ ವಿವರಗಳನ್ನು ನಮೂದಿಸಿ

ನಿಮ್ಮ ಹೆಸರು ಅರ್ಹ ರೈತರ ಪಟ್ಟಿಯಲ್ಲಿದೆಯೇ ? ಹೀಗೆ ಪರಿಶೀಲಿಸಿ

  • pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
  • ಫಲಾನುಭವಿಗಳ ಪಟ್ಟಿ’ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ
  • ಹೆಸರುಗಳನ್ನು ನೋಡಲು ‘ವರದಿ ಪಡೆಯಿರಿ’ ಮೇಲೆ ಕ್ಲಿಕ್ ಮಾಡಿ

Also Read : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್‌ನ್ಯೂಸ್‌ : ಖಾತೆಗೆ ಜಮೆ ಆಗಲಿದೆ 4000 ರೂ..

ಪಿಎಂ ಕಿಸಾನ್‌ ಯೋಜನೆಯಡಿ ಹೊಸ ರೈತನಾಗಿ ಅರ್ಜಿ ಸಲ್ಲಿಸಿ

  • pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
  • ‘ಹೊಸ ರೈತ ನೋಂದಣಿ’ ಮೇಲೆ ಕ್ಲಿಕ್ ಮಾಡಿ
  • ಆಧಾರ್, ಭೂ ದಾಖಲೆಗಳು ಮತ್ತು ಬ್ಯಾಂಕ್ ಖಾತೆ ಭರ್ತಿ ಮಾಡಿ
  • ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಅರ್ಜಿ ಸಲ್ಲಿಸಿ

PM Kisan 20th installment releasing BIG Update. how to apply as new farmer check who can get PM-KISAN benefits Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular