ಜೀವ ವಿಮೆಗಳನ್ನು ಖರೀದಿ ಮಾಡುವ ಮುನ್ನ ನೀವು ನೂರು ಬಾರಿ ಯೋಚಿಸಬೇಕು. ಏಕೆಂದರೆ ಅತಿಯಾದ ಪ್ರೀಮಿಯಂ ದರವು ನಿಮ್ಮ ಜೇಬಿಗೆ ಕತ್ತರಿ ಹಾಕುವ ಸಾಧ್ಯತೆ ಇರುತ್ತದೆ. ಅಲ್ಲದೇ ಜೀವ ವಿಮಾ ಯೋಜನೆಗಳು ನಿಮಗೆ ಎಷ್ಟು ಲಾಭ ನೀಡುತ್ತವೆ ಎಂಬುದರ ಬಗ್ಗೆಯೂ ಯೋಚನೆ ಮಾಡಬೇಕು. ಇದೀಗ ಕೇಂದ್ರ ಸರಕಾರ ಹಲವು ವಿಮಾ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ( PMSBY : Pradhan Mantri Suraksha Bima Yojana) ಅತ್ಯಂತ ಕಡಿಮೆ ದರದಲ್ಲಿ ವಿಮಾ ಭದ್ರತೆಯನ್ನು ಒದಗಿಸುತ್ತಿದೆ.
ಖಾಸಗಿ ಕಂಫನಿಗಳ ಅತಿಯಾದ ಪ್ರೀಮಿಯಂ ದರಕ್ಕೆ ಬೆದರಿ ಅನೇಕರು ಜೀವ ವಿಮೆಯನ್ನು ಮಾಡಿಸುವ ಗೋಜಿಗೇ ಹೋಗುವುದಿಲ್ಲ. ಇದನ್ನು ಅರಿತ ಕೇಂದ್ರ ಸರ್ಕಾರ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಜೀವ ವಿಮೆಯ ಸುರಕ್ಷತೆಯನ್ನು ಒದಗಿಸಬೇಕು ಎಂಬ ಉದ್ದೇಶದ ಮೂಲಕ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು (PMSBY) ಜಾರಿಗೆ ತಂದಿದೆ. ಇಲ್ಲಿ ನೀವು ಕೇವಲ 12 ರೂಪಾಯಿ ವಾರ್ಷಿಕ ಪ್ರೀಮಿಯಂ ದರ ಪಾವತಿಸುವ ಮೂಲಕ ಅಪಘಾತ ವಿಮೆಯನ್ನು ಹೊಂದಬಹುದಾಗಿದೆ.
2015ರ ಫೆಬ್ರವರಿ 28ರಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾ 2015-16ನೇ ಸಾಲಿನ ವಾರ್ಷಿಕ ಬಜೆಟ್ನಲ್ಲಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಪರಿಚಯಿಸಿತ್ತು. ಅಂದಿನ ಕೇಂದ್ರ ಹಣಕಾಸು ಮಂತ್ರಿ ದಿವಂಗತ ಅರುಣ್ ಜೆಟ್ಲಿ ಈ ಯೋಜನೆಯನ್ನು ಪರಿಚಯಿಸಿದ್ದರು.
18 ರಿಂದ 70 ವರ್ಷದೊಳಗಿನವರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇಲ್ಲಿ ನೀವು ಪ್ರತಿ ವರ್ಷ ಕೇವಲ 12 ರೂಪಾಯಿಗಳನ್ನು ಮಾತ್ರ ಪಾವತಿ ಮಾಡಿದರೆ ಸಾಕು. ಈ ಯೋಜನೆಯ ಫಲಾನುಭವಿಯು ಮರಣವನ್ನಪ್ಪಿದರೆ ಅಥವಾ ಅಪಘಾತದಲ್ಲಿ ಸಂಪೂರ್ಣ ಅಂಗವೈಕಲ್ಯ ಅಂದರೆ ಎರಡೂ ಕಾಲುಗಳು, ಎರಡೂ ಕೈಗಳು ಅಥವಾ ಎರಡೂ ಕಣ್ಣುಗಳನ್ನು ಕಳೆದುಕೊಂಡರೆ ಆತನಿಗೆ 2 ಲಕ್ಷ ರೂಪಾಯಿ ಸಿಗಲಿದೆ. ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ ಆ್ಯಕ್ಸಿಡೆಂಟಲ್ ಕವರೇಜ್ ಮೂಲಕ 1 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ.
ಈ ಯೋಜನೆಯನ್ನು 18 ರಿಂದ 70 ವರ್ಷದ ಒಳಗಿನವರಿಗಾಗಿ ರೂಪಿಸಲಾಗಿದೆ. 1 ಲಕ್ಷಕ್ಕೆ ಯೋಜನೆಯು ಮಾನ್ಯವಾಗಿರಲಿದೆ. ಪ್ರತಿ ವರ್ಷ ನೀವು ಈ ಜೀವವಿಮೆಯನ್ನು ನವೀಕರಿಸಬೇಕು. ಯೋಜನೆಯನ್ನು ಮಾಡಬೇಕೆಂದುಕೊಂಡವರು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. 1 ಕ್ಕಿಂತ ಹೆಚ್ಚು ಉಳಿತಾಯ ಖಾತೆ ಹೊಂದಿರುವವರು ಯಾವುದಾದರೂ ಒಂದು ಖಾತೆಯ ಮೂಲಕ ಯೋಜನೆಗೆ ಸೇರ್ಪಡೆಯಾಗಬಹುದಾಗಿದೆ .ಜೂನ್ 1ರಿಂದ ಮಾರ್ಚ್ 31ರವರೆಗೆ ಇದು ವಾರ್ಷಿಕ ಕವರೇಜ್ ಹೊಂದಿದೆ.
ಇದನ್ನು ಓದಿ: Byadarahalli Suicide Case : ಬ್ಯಾಡರಹಳ್ಳಿ ಐವರ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : FSL ವರದಿಯಿಂದ ಸ್ಪೋಟಕ ಮಾಹಿತಿ ಇದನ್ನೂ ಓದಿ: SBI Recruitment 2021 : ಪದವೀಧರರಿಗೆ ಎಸ್‌ಬಿಐನಲ್ಲಿದೆ 1,200 CBO ಹುದ್ದೆ, 36,000 ರೂ. ವೇತನ
PMSBY : Get a year's insurance in just Rs 12, know about the Pradhan Mantri Suraksha Bima Yojana, which has many benefits