Mother Killed Baby : ಮಗುವಿನ ಅಳು ಸಹಿಸಲಾರದೇ ಗೋಡೆಗೆ ಜಜ್ಜಿ ಕೊಂದ ಪಾಪಿ ತಾಯಿ..!

27 ದಿನದ ಮಗುವನ್ನು ಹೆತ್ತ ತಾಯಿಯ ಗೊಡೆಗೆ ಜಪ್ಪಿ ಸಾಯಿಸಿದ (Mother Killed Baby) ದಾರುಣ ಘಟನೆಯು ಕೇರಳದಲ್ಲಿ ವರದಿಯಾಗಿದೆ. ಅವಧಿಗೂ ಮೊದಲೇ ಜನಿಸಿದ್ದ ಈ ಮಗುವು ಅನಾರೋಗ್ಯದಿಂದ ಬಳಲುತ್ತಿತ್ತು ಹಾಗೂ ಇಡೀ ದಿನ ಅಳುತಿತ್ತು ಎನ್ನಲಾಗಿದೆ. ಇದರಿಂದ ಕಿರಿಕಿರಿ ಅನುಭವಿಸಿದ 21 ವರ್ಷದ ತಾಯಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಸೆಂಬರ್​ 9ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಹಾಗೂ ವೈದ್ಯರು ನೀಡಿದ ಔಷಧಿಯನ್ನು ಪಡೆದು ಮನೆಗೆ ಮರಳಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಆದರೆ ಔಷಧಿ ಸೇವಿಸಿದ ಬಳಿಕವೂ ಮಗುವಿನ ಸ್ಥಿತಿ ಬಿಗಡಾಯಿಸುತ್ತಲೇ ಇತ್ತು. ಕೊನೆಗೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಅದು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಅಡುಗೆ ಕೆಲಸ ಮಾಡಿಕೊಂಡು ತನ್ನ 45 ವರ್ಷದ ಪ್ರಿಯಕರನೊಂದಿಗೆ ಮಹಿಳೆ ವಾಸವಾಗಿದ್ದ ಆಶ್ರಮವನ್ನು ನಡೆಸುತ್ತಿದ್ದ ಫಾದರ್​ ಜೋಜಿ ಥಾಮಸ್​ ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಸೆಂಬರ್​ 10ರಂದು ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆಯಲ್ಲಿ ಮಗುವಿನ ತಲೆಯ ಹಿಂಭಾಗದಲ್ಲಿ ಗಾಯ ಉಂಟಾಗಿರುವುದು ಗಮನಕ್ಕೆ ಬಂದಿದೆ.

ಹಸುಗೂಸಿನ ತಲೆಬುರುಡೆ ಅತ್ಯಂತ ಮೃದವಾಗಿದ್ದರಿಂದ ಗಾಯಗಳು ಸರಿಯಾಗಿ ಗೋಚರವಾಗುತ್ತಿರಲಿಲ್ಲ. ಆದರೂ ಅನುಮಾನಗೊಂಡ ಪೊಲೀಸರು ಮಗುವಿನ ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಪೊಲೀಸರಿಗೆ ಮಗುವಿನ ತಾಯಿ ಮಾನಸಿಕ ಅಸ್ವಸ್ಥಳಂತೆ ಕಂಡಿದ್ದಾಳೆ. ಹೀಗಾಗಿ ಆಕೆಯನ್ನು ವಿವರವಾಗಿ ಪ್ರಶ್ನಿಸಲು ಪೊಲೀಸರು ಮುಂದಾಗಲಿಲ್ಲ. ದಂಪತಿ ವಿಚಾರಣೆ ನಡೆಸಿದ ವೇಳೆ ಇವರಿಬ್ಬರು ಪರಸ್ಪರ ಫೋನ್​ ಕಾಲ್​ ಮೂಲಕ ಪರಿಚಯವಾಗಿದ್ದರು ಹಾಗೂ ನಂತರದಲ್ಲಿ ಆಶ್ರಮದಲ್ಲಿ ಒಟ್ಟಾಗಿ ಇರಲು ಆರಂಭಿಸಿದರು ಎಂದು ತಿಳಿದುಬಂದಿದೆ.

ಮಗುವಿನ ತಂದೆಗೆ ಈಗಾಗಲೇ ಮದುವೆಯಾಗಿತ್ತು. ಈ ವಿಚಾರ ತಿಳಿದಿದ್ದರೂ ಸಹ ಆಕೆ ಆತನೊಂದಿಗೆ ವಾಸವಿದ್ದಳು ಎನ್ನಲಾಗಿದೆ. ಹೆಚ್ಚಿನ ವಿಚಾರಣೆ ವೇಳೆ ತಾನೇ ಮಗುವನ್ನು ಗೋಡೆಗೆ ಹೊಡೆದು ಕೊಲೆ ಮಾಡಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಅನಾರೋಗ್ಯದಿಂದ ಬಳಲುತ್ತಿರುವ ಶಿಶು ಮುಂದೆ ತನ್ನ ಭವಿಷ್ಯಕ್ಕೆ ಹಾನಿ ಮಾಡಬಹುದೆಂಬ ಭಯದಿಂದ ಮಹಿಳೆ ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಇದನ್ನು ಓದಿ: Byadarahalli Suicide Case : ಬ್ಯಾಡರಹಳ್ಳಿ ಐವರ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : FSL ವರದಿಯಿಂದ ಸ್ಪೋಟಕ ಮಾಹಿತಿ

ಇದನ್ನೂ ಓದಿ : Bitcoin Hacker Sriki Missing : ಹ್ಯಾಕರ್ ಶ್ರೀಕಿ ಮತ್ತೆ ನಾಪತ್ತೆ, ಪೊಲೀಸರಿಗೆ ತಲೆ ನೋವು : ಜಾಮೀನು ರದ್ದತಿಗೆ ಖಾಕಿ ಸಿದ್ದತೆ

ಇದನ್ನೂ ಓದಿ : Mangalore Family Suicide : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಮತಾಂತರವೇ ಕಾರಣ

Kerala Mother Killed Baby: 27-Day-Old Baby By Banging His Head On Wall For Crying

Comments are closed.