Post Office New Scheme : ಪೋಸ್ಟ್‌ ಆಫೀಸ್‌ ಹೊಸ ಯೋಜನೆ, 95 ರೂ. ಹೂಡಿಕೆ ಮಾಡಿ ಪಡೆಯಿರಿ 14 ಲಕ್ಷ ರೂ.

ನವದೆಹಲಿ : ಭಾರತೀಯ ಅಂಚೆ ಕಛೇರಿಯು ಗ್ರಾಹಕರಿಗಾಗಿ ಅನೇಕ ಯೋಜನೆಗಳನ್ನು ಪ್ರಸ್ತುತಪಡಿಸಿದೆ. ಯಾಕೆಂದರೆ ಪೋಸ್ಟ್‌ ಆಫೀಸ್‌ (Post Office New Scheme) ಸುರಕ್ಷಿತ ಹೂಡಿಕೆಗೆ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಪ್ರಚಲಿತದಲ್ಲಿರುವ ಅನೇಕ ಯೋಜನೆಗಳ ಬಡ್ಡಿದರಗಳ ಮುಂದೆ ಬ್ಯಾಂಕ್‌ಗಳ ಎಫ್‌ಡಿಗಳು ವಿಫಲಗೊಳ್ಳುತ್ತವೆ. ಅಷ್ಟೇ ಅಲ್ಲದೇ ಅಂಚೆ ಕಛೇರಿ ಯೋಜನೆಗಳು ನಾಗರಿಕರಿಗೆ ಸಹ ವಿಶ್ವಾಸಾರ್ಹವಾಗಿವೆ. ಅಂತಹ ಒಂದು ವಿಶೇಷ ಯೋಜನೆಯ ಬಗ್ಗೆ ನಾವು ಇಂದು ತಿಳಿಯೋಣ. ನಮ್ಮ ಮುಂದಿನ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಇದು ಸಹಾಯಕವಾಗಿದೆ.

ಜೀವನದಲ್ಲಿ ಮುಂದೇನು ಆಗುತ್ತದೆ ಹಾಗೂ ಯಾವಾಗ ಏನಾಗುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಜನರು ಅಂತಹ ಕಠಿಣ ಪರಿಸ್ಥಿತಿಗೆ ಎದುರಿಸುವ ಮೊದಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು. ಅಂತಹ ಸಂದರ್ಭಕ್ಕಾಗಿ ಹೂಡಿಕೆ ಮಾಡುವವರಿಗಾಗಿ ಅಂಚೆ ಕಛೇರಿಯು “ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ”ಯನ್ನು ಪರಿಚಯಿಸಿದೆ. ಇದೊಂದು ವಿಮಾ ಯೋಜನೆ ಆಗಿದ್ದು, ವಿವಿಧ ಸುರಕ್ಷತೆಗಳನ್ನು ಒಳಗೊಂಡಿದೆ.

Post Office New Scheme : ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ ವಿವರ :

19 ವರ್ಷದಿಂದ 45 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಯೋಜನೆಯಡಿ, 10 ಲಕ್ಷ ರೂ.ಗಳ ವಿಮೆ ಲಭ್ಯವಿದೆ. ಪಾಲಿಸಿದಾರರು 15 ವರ್ಷ ಮತ್ತು 20 ವರ್ಷಗಳ ನಡುವೆ ಯಾವುದೇ ಒಂದು ಮೆಚ್ಯೂರಿಟಿ ಅವಧಿಯನ್ನು ಆಯ್ಕೆ ಮಾಡಬಹುದು. ಹೂಡಿಕೆದಾರರು ಮೆಚ್ಯೂರಿಟಿಗೂ ಮುನ್ನವೇ ಹಣವನ್ನು ಹಿಂಪಡೆಯಬಹುದು.

ಇದನ್ನೂ ಓದಿ : ಹಿಂದುಜಾ ಗ್ರೂಪ್‌ನ ಅಧ್ಯಕ್ಷ ಎಸ್‌ಪಿ ಹಿಂದುಜಾ ಇನ್ನಿಲ್ಲ

ಇದನ್ನೂ ಓದಿ : ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌ : ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

25 ವರ್ಷದ ವ್ಯಕ್ತಿ 7 ಲಕ್ಷ ರೂಪಾಯಿ ವಿಮಾ ಮೊತ್ತದೊಂದಿಗೆ 20 ವರ್ಷಗಳ ವಿಮೆಯನ್ನು ಖರೀದಿಸಿದರೆ, ಅವನು ದಿನಕ್ಕೆ 95 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅದರಂತೆ ತಿಂಗಳಿಗೆ 2850 ರೂ., 6 ತಿಂಗಳಲ್ಲಿ 17,100 ರೂ. ಮೆಚ್ಯೂರಿಟಿಯ ಸಮಯದಲ್ಲಿ, ನೀವು ಹಣವನ್ನು ಹಿಂತಿರುಗಿಸುವ ಜೊತೆಗೆ ಸುಮಾರು 14 ಲಕ್ಷ ರೂ. ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯವನ್ನು ಪಡೆಯಬಹುದು. 15 ವರ್ಷಗಳ ಪಾಲಿಸಿಯನ್ನು ತೆಗೆದುಕೊಳ್ಳುವಾಗ, 6,9 ಮತ್ತು 12 ವರ್ಷಗಳು ಪೂರ್ಣಗೊಂಡ ನಂತರ ವಿಮಾ ಮೊತ್ತದ ಮೇಲೆ ಶೇ. 20ರಷ್ಟು ಮನಿ ಬ್ಯಾಂಕ್ ಲಭ್ಯವಿದೆ ಎನ್ನಲಾಗಿದೆ. 20 ವರ್ಷಗಳ ಪಾಲಿಸಿಯಲ್ಲಿ 8, 12, 16 ವರ್ಷಗಳು ಪೂರ್ಣಗೊಂಡ ನಂತರ ಮನಿ ಬ್ಯಾಕ್ ಲಭ್ಯವಿದೆ.

Post Office New Scheme, 95 Rs. Invest and get Rs 14 Lakhs.

Comments are closed.