Post Office New Scheme :ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ರೂ.50 ಹೂಡಿಕೆ ಮಾಡಿ ರೂ.35 ಲಕ್ಷ ಪಡೆಯಿರಿ

ನವದೆಹಲಿ : ದೇಶದ ಜನರು ತಮ್ಮ ಆದಾಯವನ್ನು ಉಳಿತಾಯವನ್ನು ಸುರಕ್ಷಿತ ಹೂಡಿಕೆ ಮಾಡಲು ಬಯಸಿದರೆ ಅಂಚೆ ಕಚೇರಿಯ ಹೂಡಿಕೆ ಯೋಜನೆಗಳು (Post Office New Scheme) ಉತ್ತಮ. ಎಲ್ಲಾ ಕಾಲಕ್ಕೂ ಪೋಸ್ಟ್ ಆಫೀಸ್‌ನಲ್ಲಿ ಮಾಡುವ ಹೂಡಿಕೆಯನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇಲ್ಲಿ ನಿಮಗೆ ಯಾವುದೇ ಅಪಾಯವಿಲ್ಲ. ವಾಸ್ತವವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳಿವೆ. ಆದರೆ ಅದರಲ್ಲಿ ಸಾಕಷ್ಟು ಅಪಾಯವಿರುತ್ತದೆ. ಹೀಗಾಗಿ ನಿಮ್ಮ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಿ, ಯಾವುದೇ ಅಪಾಯವಿಲ್ಲದೆ ಉತ್ತಮ ಆದಾಯ ಪಡೆಯಬಹುದು.

ಸಣ್ಣ ಹೂಡಿಕೆಂದ 35 ಲಕ್ಷದ ಪಡೆಯವ ಮಾರ್ಗ:
ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳು ನಿಮಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಇದರಲ್ಲಿ ಅಪಾಯದ ಅಂಶ ಕಡಿಮೆಯಾದರೂ, ಆದಾಯವೂ ಉತ್ತಮವಾಗಿರುತ್ತದೆ. ಇಂದು ಅಪಾಯ ಅತ್ಯಲ್ಪವಾಗಿರುವ ಮತ್ತು ಆದಾಯವು ಪ್ರಬಲವಾಗಿರುವ ಹೂಡಿಕೆ ಯೋಜನೆ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ದೇಶದ ಪ್ರತಿಯೊಬ್ಬ ಪ್ರಜೆಯು ಅಂಚೆ ಕಚೇರಿಯ ‘ಗ್ರಾಮ ಸುರಕ್ಷಾ ಯೋಜನೆ’ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ಯೋಜನೆಯು ಭಾರತೀಯ ಅಂಚೆ ಇಲಾಖೆಯಲ್ಲಿ ನೀಡುವ ಒಂದು ಆಯ್ಕೆಯಾಗಿದೆ. ಇದರಲ್ಲಿ ನೀವು ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ಪ್ರತಿದಿನ ರೂ.50ರಂತೆ ಒಂದು ತಿಂಗಳಿಗೆ ಕೇವಲ ರೂ. 1,500 ಠೇವಣಿ ಮಾಡಬೇಕಾಗುತ್ತದೆ. ಇದರಿಂದ ನೀವು ರೂ.31 ಲಕ್ಷದಿಂದ 35 ಲಕ್ಷ ರೂ.ಗಳಷ್ಟು ಲಾಭ ಪಡೆಯುವ ಸಾಧ್ಯತೆ ಇದೆ.

ಈ ಹೂಡಿಕೆಯ ನಿಯಮಗಳ ವಿವರ :

  • ಈ ಯೋಜನೆಯಯಲ್ಲಿ 9ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
  • ಈ ಯೋಜನೆಯಡಿ ಕನಿಷ್ಠ ವಿಮಾ ಮೊತ್ತವು 10,000 ರೂ.ಗಳಿಂದ 10 ಲಕ್ಷ ರೂ. ಆಗಿರುತ್ತದೆ.
  • ಈ ಯೋಜನೆಯ ಪ್ರೀಮಿಯಂ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಮಾಡಬಹುದು.
  • ಪ್ರೀಮಿಯಂ ಪಾವತಿಸಲು ನೀವು 30 ದಿನಗಳ ಗ್ರೇಸ್ ಅವಧಿಯನ್ನು ಪಡೆಯಬಹುದು.
  • ಈ ಯೋಜನೆಯಲ್ಲಿ ನೀವು ಸಾಲವನ್ನು ಸಹ ತೆಗೆದುಕೊಳ್ಳಬಹುದು.
  • ಈ ಯೋಜನೆಯನ್ನು ತೆಗೆದುಕೊಂಡ 3 ವರ್ಷಗಳ ನಂತರ, ನೀವು ಅದನ್ನು Surrender ಸಹ ಮಾಡಬಹುದು. ಆದರೆ ಈ ಪರಿಸ್ಥಿತಿಯಲ್ಲಿ ನೀವು ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ.

ಇದನ್ನೂ ಓದಿ : Post Office SCSS Account : ಪೋಸ್ಟ್‌ ಆಫೀಸ್‌ನಲ್ಲಿ ರೂ. 1000 ಹೂಡಿಕೆ ಮಾಡಿ ಗಳಿಸಿ 15 ಲಕ್ಷ ರೂ.

ಇದನ್ನೂ ಓದಿ : LIC Policy Holders : ಎಲ್‌ಐಸಿ ಪಾಲಿಸಿದಾರರು ಸಿಹಿಸುದ್ಧಿ : ವಾಟ್ಸಪ್‌ನಲ್ಲೇ ಪಡೆಯರಿ ಪಾಲಿಸಿ ಬಗ್ಗೆ‌ ಮಾಹಿತಿ

ಇದನ್ನೂ ಓದಿ : Aadhaar Card Amendment : ಆಧಾರ್‌ ಕಾರ್ಡ್‌ ತಿದ್ದುಪಡಿ ಈಗ ಸುಲಭ : ಇಲ್ಲಿದೇ ಸಂಪೂರ್ಣ ಮಾಹಿತಿ

ಈ ಹೂಡಿಕೆಯ ಪ್ರಯೋಜನ :
ಈಗ ಈ ಯೋಜನೆಯಲ್ಲಿ ನೀವು ಯಾವಾಗ ಮತ್ತು ಎಷ್ಟು ಪ್ರಯೋಜನ ಪಡೆಯುತ್ತೀರಿ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಇದನ್ನು ಒಂದು ಉದಾಹರಣೆಯಿಂದ ಅರ್ಥಮಾಡಿಕೊಳ್ಳೋಣ. ಒಬ್ಬ ವ್ಯಕ್ತಿಯು 19 ವರ್ಷ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 10 ಲಕ್ಷ ರೂ.ಗಳ ಪಾಲಿಸಿಯನ್ನು ಖರೀದಿಸಿದರೆ, ನಂತರ 55 ವರ್ಷಗಳವರೆಗೆ ಅವನ ಮಾಸಿಕ ಪ್ರೀಮಿಯಂ 1515 ರೂ, 58 ವರ್ಷಕ್ಕೆ 1,463 ರೂ. ಮತ್ತು 60 ವರ್ಷಕ್ಕೆ 1,411 ರೂ. ಆಗಿರುತ್ತದೆ. ಈ ಸಂದರ್ಭದಲ್ಲಿ ಪಾಲಿಸಿ ಖರೀದಿದಾರರು 55 ವರ್ಷಗಳಿಗೆ 31.60 ಲಕ್ಷ ರೂ., 58 ವರ್ಷಗಳಿಗೆ 33.40 ಲಕ್ಷ ರೂ. ಮತ್ತು 60 ವರ್ಷಗಳವರೆಗೆ 34.60 ಲಕ್ಷ ರೂ.ಗಳ ಮೆಚ್ಯೂರಿಟಿ ಲಾಭವನ್ನು ಪಡೆಯುತ್ತಾರೆ. ಅಂದರೆ ಇಲ್ಲಿ ನೀವು ಸಣ್ಣ ಮೊತ್ತದ ಹೂಡಿಕೆಯಿಂದ ದೊಡ್ಡ ಲಾಭವನ್ನು ಪಡೆಯಬಹುದು.

Post Office New Scheme: Invest Rs.50 in this scheme of Post Office and get Rs.35 lakh

Comments are closed.