Pradhan Mantri Jan Dhan Yojana : ಪ್ರತಿಯೊಬ್ಬರ ಭಾರತೀಯರು ಕೂಡ ಬ್ಯಾಂಕ್ ಖಾತೆಯನ್ನು ಹೊಂದಬೇಕು ಅನ್ನೋ ಉದ್ದೇಶದಿಂದಲೇ ಜಾರಿಗೆ ಬಂದ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಬಹು ಜನಪ್ರಿಯವಾಗಿದೆ. ರಾಷ್ಟ್ರೀಯ ಆಂದೋಲನದ ಮೂಲಕ ಭಾರತ ಆರ್ಥಿಕ ಬದಲಾವಣೆಯನ್ನು ಕಂಡಿದೆ. ಹಲವು ರೀತಿಯಲ್ಲಿ ನೆರವು ನೀಡುವ ಈ ಜನ್‌ಧನ್ ಖಾತೆಯನ್ನು ಆರಂಭಿಸುವುದು ಹೇಗೆ ? ಇದರ ಅರ್ಹತೆ ಏನು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ಯಾಂಕಿಂಗ್, ಉಳಿತಾಯ, ರವಾನೆ, ಠೇವಣಿ ಖಾತೆಗಳು, ವಿಮೆ, ಕ್ರೆಡಿಟ್, ಪಿಂಚಣಿ ಮತ್ತು ಸಾಲಗಳಂತಹ ಆರ್ಥಿಕ ಸೇವೆಗಳಲ್ಲಿ ಭಾರತದ ಎಲ್ಲಾ ವರ್ಗಗಳನ್ನು ಸೇರ್ಪಡೆ ಮಾಡಲು ಈ ಯೋಜನೆ ಆರಂಭಗೊಂಡಿದೆ. 2014ರಲ್ಲಿ ಆರಂಭಗೊಂಡ ಈ ಯೋಜನೆಯ ಮೂಲಕ ಭಾರತ ಸರಕಾರವು ಕೋಟ್ಯಾಂತರ ಭಾರತೀಯರು ಬ್ಯಾಂಕ್ ಕಡೆ ಮುಖ ಮಾಡುವಂತೆ ಮಾಡಿತ್ತು.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಖಾತೆ ತೆರೆಯಲು ಅರ್ಹತೆ :
- ಭಾರತದ ಪ್ರಜೆಯಾಗಿರಬೇಕು
- 10 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು
- ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರಬಾರದು
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ವಿಶಿಷ್ಟ್ಯತೆಗಳೇನು ?
- ಜನ್‌ಧನ್ ಖಾತೆಯಲ್ಲಿ ಯಾವುದೇ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವ ಅಗತ್ಯವಿಲ್ಲ. ಶೂನ್ಯ ಬ್ಯಾಲೆನ್ಸ್ ಹೊಂದಿದ್ದರೂ ಕೂಡ ಖಾತೆ ಕಾರ್ಯನಿರ್ವಹಿಸುತ್ತದೆ.
- ಒಬ್ಬ ವ್ಯಕ್ತಿಯ ಹೆಸರಲ್ಲಿ ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿಲ್ಲದೇ ಇದ್ದರೆ ಅಂತವರಿಗೆ ಈ ಖಾತೆಯನ್ನು ತೆರೆಯಲು ಅನುಮತಿಯನ್ನು ನೀಡಲಾಗುತ್ತದೆ.
- ಜನ್‌ಧನ್ ಖಾತೆ ಹೊಂದಿದ್ದವರಿಗೆ ಬಡ್ಡಿಯನ್ನು ನೀಡಲಾಗುತ್ತದೆ.
- ಖಾತೆಯಲ್ಲಿ ಹಣವನ್ನು ಠೇವಣಿ ಇರಿಸಿದ್ದರೆ ಉತ್ತಮ ಬಡ್ಡಿದರವನ್ನು ಪಡೆಯಬಹುದಾಗಿದೆ.
- ಜನಧನ್ ಖಾತೆಯನ್ನು ಹೊಂದಿರುವ ಖಾತೆದಾರರಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ.

ಜನ್‌ಧನ್ ಯೋಜನೆಯ ಪ್ರಯೋಜನಗಳೇನು ?
ಜನ್‌ಧನ್ ಖಾತೆಗೆಗಳು ನೇರ ವರ್ಗಾವಣೆ (DBT), ಅಟಲ್ ಪಿಂಚಣಿ ಯೋಜನೆ (APY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY), ಮೈಕ್ರೋ ಯೂನಿಟ್ಸ್ ಡೆವಲಪ್‌ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ ಬ್ಯಾಂಕ್ (MUDRA) ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಯೋಜನೆಗೆ ಅರ್ಹವಾಗಿರುತ್ತದೆ.
ಜನ್‌ಧನ್ ಖಾತೆದಾರರಿಗೆ ಉಚಿತ ವಿಮೆ
ಜನ್‌ಧನ್ ಖಾತೆಯನ್ನು ಹೊಂದಿರುವವರಿಗೆ ಸರಕಾರ ನೀಡುವ ಸಾಲದ ಮೇಲೆ ಸಬ್ಸಿಡಿಯನ್ನು ಪಡೆಯಬಹುದಾಗಿದೆ. ಅಲ್ಲದೇ ಅನುದಾನವನ್ನು ಕೂಡ ಪಡೆಯಲು ಅರ್ಹವಾಗಿದೆ. ಜೊತೆಗೆ ಓವರ್ ಡ್ರಾಫ್ಟ್ ಸೌಲಭ್ಯವೂ ದೊರೆಯಲಿದೆ. ಜನಧನ್ ಖಾತೆಯನ್ನು ತೆರೆದು ಮೃತಪಟ್ಟರೆ ಖಾತೆದಾರರಿಗೆ (28 ಆಗಸ್ಟ್ 2018) ರ ಮೊದಲು ತೆರೆಯಲಾದ ಖಾತೆಗಳಿಗೆ, ರೂ.1 ಲಕ್ಷ ವಿಮಾ ರಕ್ಷಣೆ ಮತ್ತು ನಂತರ ತೆರೆಯಲಾದ ಖಾತೆಗಳಿಗೆ, ಕವರ್ ಅನ್ನು ರೂ.2 ಲಕ್ಷಕ್ಕೆ ಹೆಚ್ಚಿಸಲಾಗಿದೆ.
Pradhan Mantri Jan Dhan Yojana Benefits eligibility and complete details PMJDY