Post office fixed deposits: ಅಂಚೆ ಇಲಾಖೆ ಸ್ಥಿರ ಠೇವಣಿ ಹಿಂಪಡೆಯಲು ಸರಕಾರದಿಂದ ಹೊಸ ರೂಲ್ಸ್‌

Post office fixed deposits New Rules :ಅಂಚೆ ಇಲಾಖೆಯ ಫಿಕ್ಸೆಡ್‌ ಡೇಫಾಸಿಟ್‌ (Post office fixed deposits )ಗಳನ್ನು ಅವಧಿಗೂ ಮುನ್ನವೇ ಹಿಂಪಡೆಯಲು ಬಯಸುವವರಿಗೆ ಹೊಸ ರೂಲ್ಸ್‌ ಜಾರಿ ಮಾಡಿದ್ದು, ಐದು ವರ್ಷಗಳ ಪೋಸ್ಟ್ ಆಫೀಸ್ ಸ್ಥಿರ ಠೇವಣಿಯನ್ನು ಠೇವಣಿ ಮಾಡಿದ ದಿನಾಂಕದಿಂದ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸುವವರೆಗೆ ಹಿಂಪಡೆಯಲು ಸಾಧ್ಯವಿಲ್ಲ ಎಂದಿದೆ.

Post office fixed deposits New Rules : ಭಾರತೀಯ ಅಂಚೆ ಕಚೇರಿಯಲ್ಲಿ ಜನರು ಸಾಮಾನ್ಯವಾಗಿ ಸ್ಥಿರ ಠೇವಣಿಯನ್ನು ಇಡುತ್ತಾರೆ. ಆದರೆ ಇದೀಗ ಸರಕಾರ ಅಂಚೆ ಇಲಾಖೆಯ ಫಿಕ್ಸೆಡ್‌ ಡೇಫಾಸಿಟ್‌ (Post office fixed deposits )ಗಳನ್ನು ಅವಧಿಗೂ ಮುನ್ನವೇ ಹಿಂಪಡೆಯಲು ಬಯಸುವವರಿಗೆ ಹೊಸ ರೂಲ್ಸ್‌ ಜಾರಿ ಮಾಡಿದ್ದು, ಐದು ವರ್ಷಗಳ ಪೋಸ್ಟ್ ಆಫೀಸ್ ಸ್ಥಿರ ಠೇವಣಿಯನ್ನು ಠೇವಣಿ ಮಾಡಿದ ದಿನಾಂಕದಿಂದ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸುವವರೆಗೆ ಹಿಂಪಡೆಯಲು ಸಾಧ್ಯವಿಲ್ಲ ಎಂದಿದೆ.

ಪೋಸ್ಟ್ ಆಫೀಸ್ ಸಮಯದ ಠೇವಣಿಗಳೆಂದು ಕರೆಯಲ್ಪಡುವ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಹಣಕಾಸು ಸಚಿವಾಲಯವು ಹಲವು ರೂಲ್ಸ್‌ಗಳನ್ನು ಜಾರಿಗೊಳಿಸಿದೆ. ಹೊಸ ಮಾರ್ಗಸೂಚಿಯ ಪ್ರಕಾರ ನವೆಂಬರ್ 10, 2023 ರಂದು ಅಥವಾ ನಂತರ ಪ್ರಾರಂಭವಾದ ಐದು ವರ್ಷಗಳ ಅವಧಿಯೊಂದಿಗೆ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ (FD) ಅನ್ನು FD ಗಳ ಪ್ರಾರಂಭದಿಂದ ನಾಲ್ಕು ವರ್ಷ ಕಳೆಯುವವರೆಗೆ ಹಿಂಪಡೆಯಲು ಸಾಧ್ಯವಿಲ್ಲ.

Post office fixed deposits New rules from government to withdraw post office fixed deposits
Image Credit to Original Source

ಆದರೆ ನವೆಂಬರ್ 10, 2023 ರ ಮೊದಲು ಸ್ಥಾಪಿಸಲಾದ FDಗಳಿಗೆ ಹಳೆಯ ನಿಯಮವೇ ಅನ್ವಯವಾಗಲಿದೆ. ಈ ಹಿಂದಿನ ನಿಯಮದ ಪ್ರಕಾರ ಹೂಡಿಕೆದಾರರು ಅವಧಿಗೂ ಮೊದಲೇ ಫಿಕ್ಸೆಡ್‌ ಡೇಪಾಸಿಟ್‌ಗಳನ್ನು ಹಿಂಪಡೆಯಬಹುದಾಗಿತ್ತು. ಠೇವಣಿದಾರರು ಈ ಯೋಜನೆಯಲ್ಲಿ ದೀರ್ಘಕಾಲದ ವರೆಗೆ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : ಪ್ರಧಾನ ಮಂತ್ರಿ ಜನಧನ್‌ ಯೋಜನೆ : ಯಾರೆಲ್ಲಾ ಖಾತೆ ತೆರೆಯಲು ಅರ್ಹರು ? ಏನಿದರ ಪ್ರಯೋಜನ

ಅಂಚೆ ಇಲಾಖೆಯ ಫಿಕ್ಸೆಡ್‌ ಡೆಪಾಸಿಟ್‌ ಸ್ಕೀಮ್‌ಗಳು ಗ್ರಾಹಕರಿಗೆ ಹಲವು ರೀತಿಯಲ್ಲಿ ಪ್ರಯೋಜನ ಕಾರಿಯಾಗಿದೆ. ಅವಧಿ ಪೂರ್ಣಗೊಂಡ ನಂತರದಲ್ಲಿ ಇಂತಹ ಎಫ್‌ಡಿಗಳನ್ನು ಹಿಂಪಡೆಯುವುದರಿಂದ ಹಲವು ರೀತಿಯ ಲಾಭಗಳಿಗೆ. ಆದರೆ ಕೆಲವರು ಕ್ಷುಲಕ ಕಾರಣದಿಂದಾಗಿ ಫಿಕ್ಸೆಡ್‌ ಡೆಪಾಸಿಟ್‌ಗಳನ್ನು ಹಿಂಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ಹೊಸ ರೂಲ್ಸ್‌ ಜಾರಿಗೊಳಿಸಲಾಗಿದೆ.

ಪೋಸ್ಟ್‌ ಆಫೀಸ್‌ ಎಫ್‌ಡಿ : ಪರಿಷ್ಕೃತ ನಿಯಮಗಳು ಯಾವುವು ?

ಐದು ವರ್ಷಗಳ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಅನ್ನು ನಾಲ್ಕು ವರ್ಷ ಪೂರ್ಣಗೊಳ್ಳುವ ಮೊದಲೇ ಹಿಂಪಡೆಯಲು ಸಾಧ್ಯವಿಲ್ಲ. ಅಲ್ಲದೇ ಠೇವಣಿ ಮಾಡಿದ ದಿನಾಂಕದಿಂದ 6 ತಿಂಗಳು ಮತ್ತು ಒಂದು ವರ್ಷದ ನಡುವೆ ಒಂದು ವರ್ಷ, ಎರಡು ವರ್ಷ ಅಥವಾ ಮೂರು ವರ್ಷಗಳ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಅನ್ನು ಹಿಂಪಡೆಯಬೇಕು. ಸಾಮಾನ್ಯ ಉಳಿತಾಯ ಖಾತೆಗಳಿಗೆ ನೀಡುವ ದರದಲ್ಲಿಯೇ ಬಡ್ಡಿಯನ್ನು ನೀಡಲಾಗುತ್ತದೆ.

Post office fixed deposits New rules from government to withdraw post office fixed deposits
Image Credit to Original Source

ಇದನ್ನೂ ಓದಿ : ಆಧಾರ್‌ ಕಾರ್ಡ್‌ ದುರ್ಬಳಕೆ ಆಗ್ತಾ ಇದ್ಯಾ ? ಪತ್ತೆ ಹಚ್ಚುವುದು ಬಹಳ ಸುಲಭ, ಯಾವುದಕ್ಕೂ ಒಮ್ಮೆ ಚೆಕ್‌ ಮಾಡಿ

ಒಂದು ವರ್ಷದ ನಂತರ ಎರಡು ವರ್ಷ ಅಥವಾ ಮೂರು ವರ್ಷಗಳ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಅನ್ನು ಮುಂಚಿತವಾಗಿ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ, ನಿಗದಿತ ಒಂದು ವರ್ಷ ಅಥವಾ ಎರಡು ವರ್ಷಗಳ ಪೋಸ್ಟ್ ಆಫೀಸ್‌ಗೆ ಅನ್ವಯವಾಗುವ ಸಂಬಂಧಿತ ಬಡ್ಡಿ ದರದಿಂದ ಶೇಕಡಾ ಎರಡರಷ್ಟು ದಂಡವನ್ನು ಕಡಿತ ಮಾಡಲಾಗುತ್ತದೆ. ಅಲ್ಲದೇ ಪಾವತಿಸಬೇಕಾದ ಬಡ್ಡಿಯನ್ನು ನಿಶ್ಚಿತ ಠೇವಣಿಯ ಪೂರ್ಣಗೊಂಡ ಅವಧಿಗೆ ಅನ್ವಯಿಸುವ ಬಡ್ಡಿ ದರವನ್ನು ಬಳಸಿಕೊಂಡು ಲೆಕ್ಕ ಹಾಕಲಾಗುತ್ತದೆ.

ಇದನ್ನೂ ಓದಿ : ಮೂರು ತಿಂಗಳು ಕಳೆದರೂ ಗೃಹಲಕ್ಷ್ಮೀ ಹಣ ಬರುತ್ತಿಲ್ಲವೇ..? ನೀವು ಮಾಡಬೇಕಾಗಿರೋದು ಇಷ್ಟು

ಅಂಚೆ ಇಲಾಖೆಯ ಐದು ವರ್ಷಗಳ ಫಿಕ್ಸೆಡ್ ಡೆಪಾಸಿಟ್ ಅನ್ನು ಕೇವಲ ನಾಲ್ಕು ವರ್ಷಗಳು ಕಳೆದ ನಂತರ ಹಿಂಪಡೆದುಕೊಂಡ್ರೆ, ಎಫ್‌ಡಿಗೆ ನೀಡಲಾಗುವ ಬಡ್ಡಿದರ ದೊರೆಯುವುದಿಲ್ಲ. ಬದಲಾಗಿ ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆಯ ಬಡ್ಡಿದರವನ್ನು ನೀಡಲಾಗುತ್ತದೆ. ನವೆಂಬರ್ 09, 2023 ರಂದು ಅಥವಾ ಅದಕ್ಕಿಂತ ಮೊದಲು ಠೇವಣಿಗಳಿಗೆ ಹಿಂದಿನ ನಿಯಮಗಳು ಅನ್ವಯವಾಗಲಿದೆ.

Post office fixed deposits New rules from government to withdraw post office fixed deposits

Comments are closed.