Pradhan Mantri Vaya Vandana Yojana : ಒಮ್ಮೆ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು 10,000 ರೂ. ಪಡೆಯಿರಿ

ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಜೀವನವನ್ನು (Quality Life) ನಡೆಸಲು ಹಣವನ್ನು ಉಳಿಸುವ ಅಗತ್ಯವಿದೆ. ಅದಕ್ಕಾಗಿ ಸಮರ್ಥ ಹಣಕಾಸು ಯೋಜನೆಯನ್ನು ರೂಪಿಸುವುದು ಅಷ್ಟೇ ಅವಶ್ಯವಾಗಿದೆ. ನಿವೃತ್ತ ಜೀವನದಲ್ಲಿ ಸುಸ್ಥಿರ ಬದುಕಿಗಾಗಿ ಹಣವನ್ನು ಕೂಡಿಡಲು ಅನೇಕ ಮಾರ್ಗಗಳಿದೆ. ಹಣವನ್ನು ಹೂಡಿಕೆ ಮಾಡಬಹುದಾದ ಮತ್ತು ಅಲ್ಲಿಂದ ಸುರಕ್ಷಿತ ಆದಾಯವನ್ನು ಹಿಂಪಡೆಯುವ ಸರ್ಕಾರಿ ಯೋಜನೆಗಳು (Government Schemes) ಇವೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎನ್ನಲಾಗುತ್ತದೆ. ಅವುಗಳಲ್ಲಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ (Pradhan Mantri Vaya Vandana Yojana) ಯೂ ಒಂದು.

ಪ್ರಧಾನ ಮಂತ್ರಿ ವಯ ವಂದನ ಯೋಜನೆ ಎಂದರೇನು?
ಪ್ರಧಾನ ಮಂತ್ರಿ ವಯ ವಂದನ ಯೋಜನೆ ಇದು ಕೇಂದ್ರ ಸರ್ಕಾದಿಂದ ನಡೆಸಲ್ಪಡುವ ಯೋಜನೆಯಾಗಿದೆ. ಈ ಯೋಜನೆಯು ವಿವಾಹಿತ ದಂಪತಿಗಳಿಗೆ ಖಾತರಿಯ ಮಾಸಿಕ ಪಿಂಚಣಿಯನ್ನು ನೀಡುತ್ತದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು ಮೇ 26, 2020 ರಲ್ಲಿ ಪ್ರಾರಂಭಿಸಿತು. ದಂಪತಿಗಳು ಮಾರ್ಚ್ 31, 2023 ರವರೆಗೆ ಹೂಡಿಕೆ ಮಾಡಲು ಅವಕಾಶವಿದೆ.

ಈ ಸಾಮಾಜಿಕ ಭದ್ರತಾ ಯೋಜನೆಯನ್ನು ಭಾರತ ಸರ್ಕಾರವು ತಂದಿದ್ದು, ಇದನ್ನು ಭಾರತೀಯ ಜೀವ ವಿಮಾ ನಿಗಮ (LIC) ನಿರ್ವಹಿಸುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು, ದಂಪತಿಗಳು 60 ವರ್ಷಗಳನ್ನು ದಾಟಿರಬೇಕು. ಅವರು ಗರಿಷ್ಠ 15 ಲಕ್ಷ ರೂ. ಮೊದಲು ಹೂಡಿಕೆಯ ಮಿತಿ 7.5 ಲಕ್ಷ ರೂ.ಗಳಿತ್ತು, ನಂತರ ಅದನ್ನು ದ್ವಿಗುಣಗೊಳಿಸಲಾಯಿತು. ಇತರ ಯೋಜನೆಗಳಿಗೆ ಹೋಲಿಸಿದರೆ, ಹಿರಿಯ ನಾಗರಿಕರಿಗೆ ಇಲ್ಲಿ ಹೆಚ್ಚಿನ ಬಡ್ಡಿದೊರೆಯುತ್ತದೆ.

ಹೂಡಿಕೆ ಮಾಡುವುದು ಹೇಗೆ?
ದಂಪತಿಗಳು ಪ್ರತ್ಯೇಕವಾಗಿ 8,10,811 ರೂ.ಗಳನ್ನು ಹೂಡಿಕೆ ಮಾಡಬೇಕು. ಇದರರ್ಥ ಒಟ್ಟಾರೆ ಹೂಡಿಕೆಯು ರೂ 16, 21, 622 ಆಗಿರುತ್ತದೆ. ಇಲ್ಲಿ ನೀಡಲಾಗುವ ಬಡ್ಡಿಯ ದರವು ವಾರ್ಷಿಕವಾಗಿ 7.40% ಆಗಿರುತ್ತದೆ. ಇದರ ಅಡಿಯಲ್ಲಿ ನೀವು ಮಾಸಿಕ ಪಿಂಚಣಿಯಾಗಿ 10 ಸಾವಿರ ರೂಪಾಯಿಗಳನ್ನು ಪಡೆಯುವ ನಿಬಂಧನೆ ಇದೆ.

ಈ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಹೂಡಿಕೆ ಮಾಡಿದರೆ, ಅವನು/ಅವಳು ಮಾಸಿಕ ಪಿಂಚಣಿಯಾಗಿ 5,000 ರೂ. ಗಳನ್ನು ಮಾತ್ರ ಪಡೆಯುತ್ತಾರೆ. ಅವರ ಹೂಡಿಕೆಯ ಮೊತ್ತ ರೂ 8,11,811 ಆಗಿರುತ್ತದೆ. ಈ ಯೋಜನೆಯ ಮುಕ್ತಾಯ ಅವಧಿಯು 10 ವರ್ಷಗಳು. ಪಾಲಿಸಿ ಅವಧಿಯನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಹಣವನ್ನು ನೀವು ಮರಳಿ ಪಡೆಯಬಹುದಾಗಿದೆ.

ಇದನ್ನೂ ಓದಿ : Reliance Jio Fixed-Line Service : ಬಿಎಸ್‌ಎನ್‌ಎಲ್‌ ಹಿಂದಿಕ್ಕಿದ ಜಿಯೋ : ಫಿಕ್ಸಡ್‌–ಲೈನ್‌ ಸರ್ವೀಸ್‌ನಲ್ಲೂ ಜಿಯೋದೇ ಪ್ರಾಬಲ್ಯ

ಇದನ್ನೂ ಓದಿ : Diwali 2022 : ಈ ದೀಪಾವಳಿಗೆ ನಿಮ್ಮ ಮನೆಯನ್ನು ಹೀಗೆ ಸಿಂಗರಿಸಿ ; ಇವು ಬಜೆಟ್‌- ಫ್ರೆಂಡ್ಲಿ ಐಡಿಯಾಗಳು

(Pradhan Mantri Vaya Vandana Yojana invest once, get Rs 10,000 per month)

Comments are closed.