Ration Card News‌ : ಉಡುಪಿ : ಪಡಿತರ ಚೀಟಿದಾರರು ಬ್ಯಾಂಕ್ ಖಾತೆ ತೆರೆಯಲು ಶಿಬಿರ ಆಯೋಜನೆ

ಉಡುಪಿ : ರಾಜ್ಯ ಸರ್ಕಾರದ ಆದೇಶದಂತೆ ಅಂತ್ಯೋದಯ(ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಸದಸ್ಯರು) ಹಾಗೂ (Ration Card News‌) ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ 5 ಕೆ.ಜಿ ಆಹಾರಧಾನ್ಯವನ್ನು ಸೇರಿಸಿ ಪ್ರತಿ ತಿಂಗಳು ಪ್ರತಿ ಫಲಾನುಭವಿಗೆ ತಲಾ 10 ಕೆಜಿ ಆಹಾರಧಾನ್ಯ ಉಚಿತವಾಗಿ ವಿತರಿಸಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬಿಡ್‌ದಾರರು ಆಹಾರ ಧಾನ್ಯವನ್ನು ಸರಬರಾಜು ಮಾಡುವವರೆಗೆ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿಗೆ ರೂ.34/-ರಂತೆ ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಹಣವನ್ನು ವರ್ಗಾಯಿಸಬೇಕಾಗಿರುತ್ತದೆ.

ಪಡಿತರ ಚೀಟಿಯಲ್ಲಿ ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥರು ನಮೂದಾಗಿರಬೇಕು ಕುಟುಂಬದ ಮುಖ್ಯಸ್ಥರು ನಿಧನಹೊಂದಿದ್ದಲ್ಲಿ, ಸಂಬಂಧಪಟ್ಟ ತಾಲೂಕಿನ ಆಹಾರ ಶಾಖೆಗೆ ಭೇಟಿ ನೀಡಿ, ಆಹಾರ ನಿರೀಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿ, ಮೃತರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಿ, ಇ-ಕೆವೈಸಿ ಮೂಲಕ ಕುಟುಂಬದ ಮುಖ್ಯಸ್ಥರನ್ನು ನಮೂದು ಮಾಡಿಕೊಳ್ಳಬೇಕು. ಒಂದಕ್ಕಿAತ ಹೆಚ್ಚು ಕುಟುಂಬದ ಮುಖ್ಯಸ್ಥರು ನಮೂದಾಗಿದ್ದಲ್ಲಿ ಅಂತಹವರಿಗೆ ನಗದು ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಬ್ಯಾಂಕ್ ಖಾತೆ ಚಾಲ್ತಿಯಲ್ಲಿಲ್ಲದ, ಬ್ಯಾಂಕ್ ಖಾತೆ ಹೊಂದಿರದ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರದ ಪಡಿತರ ಚೀಟಿದಾರರ ಮಾಹಿತಿಯನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಚುರಪಡಿಸಿದ್ದು, ಪಡಿತರ ಚೀಟಿದಾರರು ಮಾಹಿತಿಯನ್ನು ಪಡೆದು ಕೂಡಲೇ ಬ್ಯಾಂಕ್ ಖಾತೆಯನ್ನು ತೆರೆಯುವ ಬಗ್ಗೆ/ಚಾಲ್ತಿಗೊಳಿಸುವ ಬಗ್ಗೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಜುಲೈ 2023 ಮಾಹೆಯಲ್ಲಿ ನಗದು ವರ್ಗಾವಣೆ ಆಗುವುದಿಲ್ಲ.

ಈ ಫಲಾನುಭವಿಗಳು 2023 ರ ಜುಲೈ 20 ರ ಒಳಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಚಾಲ್ತಿಗೊಳಿಸಿದಲ್ಲಿ ಅಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆ ಮೂಲಕ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಪಡಿತರ ಚೀಟಿದಾರರು ನೇರ ನಗದು ವರ್ಗಾವಣೆ ಪ್ರಯೋಜನ ಪಡೆಯಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಪಡಿತರ ಚೀಟಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ವತಿಯಿಂದ ಬ್ಯಾಂಕ್ ಖಾತೆ ತೆರೆಯುವ ಸಂಬಂಧ ಕ್ರಮವಹಿಸಲಿದ್ದು, ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಸಿಬ್ಬಂದಿಗಳು ಶಿಬಿರವನ್ನು ನಡೆಸಿ ಸದ್ರಿ ಫಲಾನುಭವಿಗಳಿಗೆ ಆ ಕೂಡಲೇ ಬ್ಯಾಂಕ್ ಅಕೌಂಟ್ ತೆರೆದು ನೀಡುವರು. ಈ ಸಂಬAಧ ಸದ್ರಿ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರು ಓಟಿಪಿ ಸ್ವೀಕರಿಸಬೇಕಾದ ಮೊಬೈಲ್, ಆಧಾರ್ ಕಾರ್ಡ್ ಪ್ರತಿ, ತರಬೇಕು.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ವತಿಯಿಂದ ಈ ಕೆಳಕಂಡ ತಾಲೂಕುಗಳಲ್ಲಿ ನಿಗಧಿತ ದಿನಾಂಕಗಳAದು ಶಿಬಿರ ಆಯೋಜಿಸಲಾಗುವುದು. ಉಡುಪಿ ತಾಲೂಕಿನಲ್ಲಿ ಜುಲೈ 14 ರಂದು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಕಚೇರಿ, ಜು. 18 ರಂದು ಉದ್ಯಾವರ ಗ್ರಾಮ ಪಂಚಾಯತ್ ಕಚೇರಿ, ಜು. 19 ರಂದು ಉಡುಪಿ ತಾಲೂಕು ಕಚೇರಿಯ ಆಹಾರ ಶಾಖೆ, ಜು. 20 ರಂದು ಕಲ್ಯಾಣಪುರ ಗ್ರಾಮ ಪಂಚಾಯತ್ ಕಚೇರಿ ಹಾಗೂ ಮಲ್ಪೆ ಅಂಚೆ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು.

ಕಾಪು ತಾಲೂಕಿಗೆ ಸಂಬಂಧಿಸಿದಂತೆ ಜು. 15 ರಂದು ಕಾಪು ಅಂಚೆ ಕಚೇರಿ, ಜು. 17 ರಂದು ಕಟಪಾಡಿ ಗ್ರಾಮ ಪಂಚಾಯತ್, ಜು. 20 ರಂದು ಶಿರ್ವ ಅಂಚೆ ಕಚೇರಿ ಹಾಗೂ ಪಡುಬಿದ್ರೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು. ಬ್ರಹ್ಮಾವರ ತಾಲೂಕಿನಲ್ಲಿ ಜು. 14 ರಂದು ಮಂದಾರ್ತಿ ಅಂಚೆ ಕಚೇರಿ, ಜು. 17 ರಂದು ಬ್ರಹ್ಮಾವರ ಅಂಚೆ ಕಚೇರಿ ಹಾಗೂ ಜು. 18 ರಂದು ಕೋಟಾ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ. ಕುಂದಾಪುರ ತಾಲೂಕಿನಲ್ಲಿ ಜು. 15 ರಂದು ಸಿದ್ಧಾಪುರ ಗ್ರಾಮ ಪಂಚಾಯತ್, ಜು. 19 ರಂದು ಹಾಲಾಡಿ ಗ್ರಾಮ ಪಂಚಾಯತ್ ಕಚೇರಿ ಹಾಗೂ ಜು. 20 ರಂದು ವಂಡ್ಸೆ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ಬೈಂದೂರು ತಾಲೂಕಿನಲ್ಲಿ ಜು.15 ರಂದು ಹಳ್ಳಿಹೊಳೆ ಗ್ರಾಮ ಪಂಚಾಯತ್, ಜು.17 ರಂದು ಬೈಂದೂರು ತಾಲೂಕು ಕಚೇರಿ ಆಹಾರ ಶಾಖೆ, ಜು. 20 ರಂದು ಕೊಲ್ಲೂರು ಗ್ರಾಮ ಪಂಚಾಯತ್ ಕಚೇರಿ ಹಾಗೂ ಮರವಂತೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ಏರ್ಪಡಿಸಲಾಗುವುದು. ಕಾರ್ಕಳ ತಾಲೂಕಿನಲ್ಲಿ ಜು.17 ರಂದು ಕಾರ್ಕಳ ತಾಲೂಕು ಕಚೇರಿ, ನಲ್ಲೂರು ಗ್ರಾಮ ಪಂಚಾಯತ್ ಹಾಗೂ ಬೆಳ್ಮಣ್ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಜು.18 ರಂದು ಅಜೆಕಾರು ನಾಡ ಕಚೇರಿ, ಮಾಳ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಹಾಗೂ ಈದು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ನಡೆಯಲಿದೆ. ಹೆಬ್ರಿ ತಾಲೂಕಿನಲ್ಲಿ ಜು.15 ರಂದು ಹೆಬ್ರಿ ತಾಲೂಕು ಕಚೇರಿ, ಬೆಳ್ವೆ ಅಂಚೆ ಕಚೇರಿ ಹಾಗೂ ಮುದ್ರಾಡಿ ಅಂಚೆ ಕಚೇರಿಗಳಲ್ಲಿ ಶಿಬಿರ ಏರ್ಪಡಿಸಲಾಗುವುದು.

ಇದನ್ನೂ ಓದಿ : OPS implementation : ಒಪಿಎಸ್ ಜಾರಿ : ಸರಕಾರಿ ನೌಕರರಿಗೆ ಶಾಕಿಂಗ್‌ ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

ಇದನ್ನೂ ಓದಿ : Cooperative Bank License : ಎರಡು ಬ್ಯಾಂಕುಗಳ ಪರವಾನಗಿ ರದ್ದುಗೊಳಿಸಿದ ಆರ್‌ಬಿಐ

ಸಾರ್ವಜನಿಕರು ಪಡಿತರ ಹಣ ವರ್ಗಾವಣೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ಆಹಾರ ಶಾಖೆಯನ್ನು ಸಂಪರ್ಕಿಸುವಂತೆ ಹಾಗೂ ಸಾರ್ವಜನಿಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ration Card News : Udupi : Camp organized for ration card holders to open bank account

Comments are closed.