Reserve Bank of India: ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಎಸ್‌ಬಿಐ: ಇಂದಿನಿಂದ ಹೋಮ್‌ ಲೋನ್‌ ಬಡ್ಡಿದರ ಹೆಚ್ಚಳ

(Reserve Bank of India) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀವು ಯಾವುದೇ ಸಾಲ ಸೌಲಭ್ಯವನ್ನು ಪಡೆದಿದ್ದರೆ ಅಥವಾ ಮುಂದಿನ ದಿನಗಳಲ್ಲಿ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿದೆ ನಿಮಗೊಂದು ಬಿಗ್‌ ಶಾಕ್‌. ಹೌದು ಎಸ್‌ಬಿಐ ಗ್ರಾಹಕರಿಗೆ ಬಿಗ್‌ ಶಾಕ್‌ ನೀಡುತ್ತಿದ್ದು, ಇಂದಿನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಈ ರೀತಿಯ ಬಡ್ಡಿ ದರ ಹೆಚ್ಚಳ ಎಸ್‌ಬಿಐನ ಕೋಟ್ಯಾಂತರ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದ್ದು, ಎಂಸಿಎಲ್‌ಆರ್ ಹೆಚ್ಚಳದಿಂದಾಗಿ ಎಸ್‌ಬಿಐ ಹೋಂ ಲೋನ್ ಪಡೆದಿರುವ ಗ್ರಾಹಕರು ಇಂದಿನಿಂದ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಇತ್ತೀಚಿಗೆ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(Reserve Bank of India)ದಿಂದ ಬಡ್ಡಿದರವನ್ನು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಎಂಸಿಎಲ್‌ಆರ್ ಹೆಚ್ಚಳದ ಬಗ್ಗೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಗಮನಿಸಬೇಕಾದ ಅಂಶವೇನೆಂದೆ ಮೇ ತಿಂಗಳಿನಿಂದ ಆರ್‌ಬಿಐ ರೆಪೊ ದರವನ್ನು ಶೇ.2.25ರಷ್ಟು ಹೆಚ್ಚಿಸಿದೆ.

ಬಡ್ಡಿದರ ಹೆಚ್ಚಳದ ವಿವರ ಈ ಕೆಳಕಂಡಂತಿವೆ:
ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ,

  • ಒಂದರಿಂದ ಮೂರು ತಿಂಗಳವರೆಗೆ 7.75% – 8% ಕ್ಕೆ ಬಡ್ಡಿದರವನ್ನು ಹೆಚ್ಚಿಸಲಾಗಿದೆ.
  • ಆರು ತಿಂಗಳಿಂದ ಒಂದು ವರ್ಷದವರೆಗೆ ಶೇ.8.05 – ಶೇ.8.30ಕ್ಕೆ ಬಡ್ಡಿದರವನ್ನು ಹೆಚ್ಚಿಸಲಾಗಿದೆ.
  • ಎರಡು ವರ್ಷಕ್ಕೆ ಶೇ.8.25 – ಶೇ.8.50 ಕ್ಕೆ ಬಡ್ಡಿದರ ಏರಿಕೆಯಾಗಿದೆ.
  • ಮೂರು ವರ್ಷಗಳಿಗೆ 8.35%-8.60% ಕ್ಕೆ ಬಡ್ಡಿದರ ಹೆಚ್ಚಳಗೊಂಡಿದೆ.

ಅಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಬಡ್ಡಿದರವನ್ನು ಹೆಚ್ಚಿಸಿದಲ್ಲದೆ, ಠೇವಣಿಗಳ ಬಡ್ಡಿ ದರವನ್ನು ಕೂಡ ಹೆಚ್ಚಿಸಿದೆ.

ಹೊಸ ಎಸ್‌ಬಿಐ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿ ದರಗಳು 13 ಡಿಸೆಂಬರ್ 2022 ರಿಂದ ಜಾರಿಗೆ ಬಂದಿದ್ದು, ಎಸ್‌ಬಿಐನ ಎಫ್‌ಡಿ ದರಗಳು ಕೆಳಕಂಡಂತಿವೆ:-
7 – 45 ದಿನಗಳಿಗೆ- 3%
46 – 179 ದಿನಗಳಿಗೆ – 4.5%
180 – 210 ದಿನಗಳಿಗೆ – 5.25%
211 – 1 ವರ್ಷಕ್ಕಿಂತ ಕಡಿಮೆ – 5.50 ರಿಂದ 5.75 ಶೇಕಡಾ
1 – 2 ವರ್ಷಕ್ಕಿಂತ ಕಡಿಮೆ – 6.10 ರಿಂದ 6.75 ಶೇಕಡಾ
2 – 3 ವರ್ಷಕ್ಕಿಂತ ಕಡಿಮೆ – 6.25 ರಿಂದ 6.75 ಶೇಕಡಾ
3 – 5 ವರ್ಷಕ್ಕಿಂತ ಕಡಿಮೆ – 6.25 ರಿಂದ 6.10 ಶೇಕಡಾ
5 – 10 ವರ್ಷಗಳವರೆಗೆ – 6.10 ರಿಂದ 6.25 ಶೇಕಡಾ
ಇವಷ್ಟೆ ಅಲ್ಲದೆ ಎಸ್‌ಬಿಐ ಹಿರಿಯ ನಾಗರಿಕರಿಗೆ ಎಲ್ಲಾಸಮಯಗಳಲ್ಲಿಯೂ ಹೆಚ್ಚುವರಿ 50 ಬಿಪಿಎಸ್ ಬಡ್ಡಿ ದರವನ್ನು ನೀಡುತ್ತದೆ.

ಇದನ್ನೂ ಓದಿ : Children’s Mutual Funds : ಚೈಲ್ಡ್‌ ಮ್ಯೂಚುವಲ್‌ ಫಂಡ್‌ ಬಗ್ಗೆ ನಿಮಗೆ ಗೊತ್ತಾ; ನಿಮ್ಮ ಮಕ್ಕಳ ಭವಿಷ್ಯವನ್ನು ಹೀಗೆ ಸುರಕ್ಷಿತಗೊಳಿಸಿ

(Reserve Bank of India) If you have received any loan facility from State Bank of India or if you are thinking of taking a loan in the near future, here is a big shock for you. Yes, SBI is giving its customers a big shock, State Bank of India has hiked the Marginal Cost of Funds Based Lending Rate (MCLR) by 25 basis points from today.

Comments are closed.