rupee hits all time low : ಅಮೆರಿಕದ ಡಾಲರ್​ ಎದುರು 80 ರೂ.ಗಳ ಸಾರ್ವಕಾಲಿಕ ಕನಿಷ್ಟ ಮಟ್ಟಕ್ಕೆ ಕುಸಿತ ಭಾರತೀಯ ರೂಪಾಯಿ

ದೆಹಲಿ : rupee hits all time low : ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್​ ವಿರುದ್ಧ ವ್ಯಾಪಕ ಕುಸಿತವನ್ನು ಕಂಡಿದೆ. ಮೊಟ್ಟ ಮೊದಲ ಬಾರಿಗೆ ಎಂಬಂತೆ ಇಂದು ಭಾರತದ ರೂಪಾಯಿ ದರ ಪ್ರತಿ ಅಮೆರಿಕನ್ ಡಾಲರ್​ಗೆ 80.06 ಯ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ದೇಶದ ಇಕ್ವಿಟಿ ಮಾರುಕಟ್ಟೆಯಿಂದ 30 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೊರಗೆ ಹೋಗಿರುವುದು ಸೇರಿದಂತೆ ತೈಲು ಸರಕಗಳ ಬೆಲೆ ಏರಿಕೆಗಳು ಇದಕ್ಕೆ ಕಾರಣ ಎನ್ನಲಾಗಿದೆ. ಅಮೆರಿಕದ ಡಾಲರ್​ ಎದುರು ಭಾರತೀಯ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.


ಈ ವಾರದಲ್ಲಿ ಸೆಂಟ್ರಲ್​ ಬ್ಯಾಂಕ್​ನ ಸಭೆಗಳು ಹಾಗೂ ಅದರಲ್ಲೂ ಮುಖ್ಯವಾಗಿ ಅಮೆರಿಕದ ಫೆಡರಲ್ ರಿಸರ್ವ್​ ನಿರ್ಧಾರಗಳ ಮೇಲೆ ಟ್ರೇಡರ್​ಗಳು ಗಮನ ಹರಿಸಿರುವುದು ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ಮಂಗಳವಾರದಂದು 79.98 ರೂಪಾಯಿಗಳಿಂದ ವಹಿವಾಟು ಆರಂಭಿಸಿ ಡಾಲರ್ ವಿರುದ್ಧ 80.16 ಮಟ್ಟದಲ್ಲಿ ಕಾಣಿಸಿಕೊಂಡಿದೆ.


ಭಾರತೀಯ ರೂಪಾಯಿ ಮೌಲ್ಯವನ್ನು ಅಮೆರಿಕದ ಡಾಲರ್​ನ ಎದುರು ಕುಸಿಯದಂತೆ ನೋಡಿಕೊಳ್ಳಲು ಆರ್ಥಿಕ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಚಿನ್ನದ ಆಮದಿನ ಮೇಲೆ ಹೆಚ್ಚಿನ ಸುಂಕ ವಿಧಿಸುವುದು ಸೇರಿದಂತೆ ವಿವಿಧ ಸಲಹೆಗಳನ್ನು ನೀಡಲಾಗಿದೆ. ಈ ಬಾರಿ ರಿಸರ್ವ್​ ಬ್ಯಾಂಕ್​ ಡಾಲರ್​ ಮಾರಾಟದ ಮೂಲಕ ಮಧ್ಯ ಪ್ರವೇಶಿಸಿದ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಇನ್ನಷ್ಟು ಇಳಿಕೆಯಾಗುವುದು ನಿಯಂತ್ರಣಗೊಂಡಿದೆ ಎನ್ನಲಾಗಿದೆ.


ಅಮೆರಿಕದ ಫೆಡರಲ್​ ರಿಸರ್ವ್​ ಬ್ಯಾಂಕ್​ಗಳಿಂದಾಗಿ ಇತರೆ ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆಗಳ ಕರೆನ್ಸಿಗಳು ಈ ರೀತಿಯ ಕುಸಿತವನ್ನು ಕಾಣುತ್ತಿವೆ. ದೇಶಿ ಮಾರುಕಟ್ಟೆಗಳಲ್ಲಿ ಷೇರು ಕುಸಿತದಿಂದಾಗಿ ಮಂಗಳವಾರದ ವೇಳೆಗೆ ಭಾರತೀಯ ರೂಪಾಯಿ ಮೌಲ್ಯ ಸತತ ಏಳನೇ ಬಾರಿಗೆ ಕುಸಿತ ಕಂಡಂತಾಗಿದೆ.


ಮುಂದಿನ ವರ್ಷದ ಮಾರ್ಚ್​ 31ರ ವೇಳೆಗೆ ಚಾಲ್ತಿ ಖಾತೆಗಳ ಕೊರತೆಯಿಂದಾಗಿ ಜಿಡಿಪಿ ಮೌಲ್ಯದವು 2.9 ಪ್ರತಿಶತ ಏರಿಕೆ ಕಾಣಬಹುದು ಎಂದು ಸರ್ವೇಯೊಂದು ಈಗಲೇ ಹೇಳಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಚಾಲ್ತಿ ಖಾತೆ ಕೊರತೆ ದುಪ್ಪಟ್ಟಾಗಲಿದೆ ಎಂದರ್ಥವಾಗಿದೆ. ಚಾಲ್ತಿ ಖಾತೆಗಳ ಕೊರತೆಯು ರೂಪಾಯಿ ಮೌಲ್ಯವನ್ನು ಕುಸಿಯುವಂತೆ ಮಾಡುತ್ತದೆ. ಈ ವರ್ಷ ಚಾಲ್ತಿ ಖಾತೆಗಳ ಕೊರತೆಯಿಂದಾಗಿ ರೂಪಾಯಿಯು ಶೇಕಡಾ 7ರಷ್ಟು ಕುಸಿತ ಕಂಡಿದೆ.

ಇದನ್ನು ಓದಿ : car accident at anekal : ಮರಕ್ಕೆ ಡಿಕ್ಕಿ ಹೊಡೆದ ಕಾರು : ಇಬ್ಬರು ದುರ್ಮರಣ, ಮೂವರ ಸ್ಥಿತಿ ಗಂಭೀರ

ಇದನ್ನೂ ಓದಿ : car accident : ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ನಾಲ್ವರು ದುರ್ಮರಣ

rupee hits all time low of 80 against us dollar

Comments are closed.